ಪ್ರೊಸ್ಟೇಟ್ ಕ್ಯಾನ್ಸರ್ ತಡೆಗೆ ಬ್ರೊಕೊಲಿ ಸೇವನೆ ಉತ್ತಮ ಮದ್ದು

ಹಲವು ದಳಗಳುಳ್ಳ ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸುವುದರಿಂದ ಪ್ರೊಸ್ಟೇಟ್ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು ಎಂಬುದು ಅಧ್ಯಯನದಿಂದ ತಿಳಿದು ..
ಬ್ರೊಕೊಲಿ
ಬ್ರೊಕೊಲಿ

ನ್ಯೂಯಾರ್ಕ್: ಹಲವು ದಳಗಳುಳ್ಳ ತರಕಾರಿಗಳನ್ನು  ಹೆಚ್ಚೆಚ್ಚು ಸೇವಿಸುವುದರಿಂದ ಪ್ರೊಸ್ಟೇಟ್ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

ಜಾಗತಿಕವಾಗಿ ಪುರುಷರು ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಬ್ರೊಕೊಲಿ ತರಕಾರಿಯನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ಈ ಪ್ರೊಸ್ಟೇಟ್ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ.

ಬ್ರೊಕೊಲಿ ಸೇವನೆಯಿಂದಾಗಿ ಅದರಲ್ಲಿರುವ ಪಥ್ಯಾಹಾರದ ಅಂಳಗಳು ದೀರ್ಘಕಾಲದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಬರುವ ಅಪಾಯವನ್ನು ತಡೆಗಟ್ಟುತ್ತದೆ. LNC01116 ಎಂದು ಕರೆಯಲ್ಪಡುವ ಒಂದು ರೀತಿಯ ಆರ್ ಎನ್ ಎ ಮಾನವ ದೇಹಕೋಶದಲ್ಲಿರುವ ಪ್ರೊಸ್ಟೇಟ್ ಕ್ಯಾನ್ಸರ್ ಕಣಗಳನ್ನು ಹೆಚ್ಚಿಸುತ್ತದೆ. ಸಲ್ಫೋರ್ ಫೇನ್ ಚಿಕಿತ್ಸೆ ನೀಡುವ ಮೂಲಕ ಅದರ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ.

LINC01116 ಗೆ ಅಡ್ಡಿಯನ್ನುಂಟು ಮಾಡಿದರೇ ಪ್ರೊಸ್ಟೇಟ್ ಕ್ಯಾನ್ಸರ್ ಕಣಗಳನ್ನು ನಾಲ್ಕು ಪಟ್ಟು ಹೆಚ್ಚುವಂತೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಸಲ್ಪೋರ್ ಫೇನ್ ಚಿಕಿತ್ಸೆ ನೀಡಿದರೇ lncRNA ಮಟ್ಟವನ್ನು ಸಹಜ ಸ್ಥಿತಿಗೆ ಮರಳಿಸುತ್ತದೆ ಎಂದು ನ್ಯೂಟ್ರಿಷನಲ್ ಬಯೋಕೆಮಿಸ್ಟ್ರಿ ಜರ್ನಲ್ ನಲ್ಲಿ ಪ್ರಕಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com