ಪಾರ್ಕಿನ್ಸನ್ ಸಮಸ್ಯೆ ನಿಧಾನಗೊಳಿಸಲು ಮಾಡಿ ಪ್ರತಿದಿನ 2.5 ತಾಸು ವ್ಯಾಯಾಮ!

ವಾರದಲ್ಲಿ 150 ನಿಮಿಷ ವ್ಯಾಯಾಮ ಮಾಡುವುದು ಪಾರ್ಕಿನ್ಸನ್ ಕಾಯಿಲೆ ಉಲ್ಬಣಗೊಳ್ಳದೇ, ನಿಧಾನಗೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಪಾರ್ಕಿನ್ಸನ್ ಸಮಸ್ಯೆ ನಿಧಾನಗೊಳಿಸಲು ಮಾಡಿ ಪ್ರತಿದಿನ 2.5 ತಾಸು ವ್ಯಾಯಾಮ!
ಪಾರ್ಕಿನ್ಸನ್ ಸಮಸ್ಯೆ ನಿಧಾನಗೊಳಿಸಲು ಮಾಡಿ ಪ್ರತಿದಿನ 2.5 ತಾಸು ವ್ಯಾಯಾಮ!
ನ್ಯೂಯಾರ್ಕ್: ವಾರದಲ್ಲಿ 150 ನಿಮಿಷ ವ್ಯಾಯಾಮ ಮಾಡುವುದು ಪಾರ್ಕಿನ್ಸನ್ ಕಾಯಿಲೆ ಉಲ್ಬಣಗೊಳ್ಳದೇ, ನಿಧಾನಗೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. 
ಪಾರ್ಕಿನ್ಸನ್ ಸಮಸ್ಯೆಯಿಂದ ಬಳಲುತ್ತಿರುವವರು ವಾರದಲ್ಲಿ 150 ನಿಮಿಷ ವ್ಯಾಯಾಮ ಮಾಡಿದರೆ ಅವರ ಆರೋಗ್ಯ ಸುಧಾರಣೆ ಕಂಡ್, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆರೋಗ್ಯದ ಗುಣಮಟ್ಟ ಕುಸಿತ ಕಂಡಿದೆ. ಆದರೆ ವ್ಯಾಯಾಮ ಮಾಡದೇ ಇರುವವರ ಆರೋಗ್ಯದ ಗುಣಮಟ್ಟ ಹೆಚ್ಚು ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ನಾರ್ತ್ ವೆಸ್ಟರ್ನ್ ಯುನಿವರ್ಸಿಟಿಯ ಆರ್. ರಾಫರ್ಟಿ ಹೇಳಿದ್ದಾರೆ. 
ಪಾರ್ಕಿನ್ಸನ್ ಸಮಸ್ಯೆಗೆ ಸಂಬಂಧಿಸಿದ ಜರ್ನಲ್ ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು, ಪಾರ್ಕಿನ್ಸನ್ ರೋಗ ಎದುರಿಸುತ್ತಿರುವವರು ಪ್ರತಿದಿನ 2.5 ತಾಸು ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com