ಗರ್ಭಿಣಿಯರೇ, ಸೌಂದರ್ಯವರ್ಧಕಗಳಿಂದ ದೂರವಿರಿ!

ಗರ್ಭಿಣಿಯರು ತಮ್ಮ ಮೊದಲ ಮೂರು ತಿಂಗಳ ಕಾಲ ಯಾವುದೇ ರೀತಿಯ ಸೌಂದರ್ಯವರ್ಧಕಗಳನ್ನು ಬಳಸಬಾರದು. ಭ್ರೂಣದ ಮೆದುಳಿನ ಬೆಳವಣಿಗೆಯನ್ನು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಗರ್ಭಿಣಿಯರು ತಮ್ಮ ಮೊದಲ ಮೂರು ತಿಂಗಳ ಕಾಲ  ಯಾವುದೇ ರೀತಿಯ ಸೌಂದರ್ಯವರ್ಧಕಗಳನ್ನು ಬಳಸಬಾರದು. ಭ್ರೂಣದ ಮೆದುಳಿನ ಬೆಳವಣಿಗೆಯನ್ನು ರಾಸಾಯನಿಕಗಳಿಂದ ಅಪಾಯಕರವಾಗಿರುವ ಕಾರಣ ಯಾವುದೇ ರೀತಿಯ ಸೌಂದರ್ಯವರ್ಧಕಗಳಿಂದ ದೂರವಿರುವುದು ಉತ್ತಮ, ಸೌಂದರ್ಯವರ್ಧಕ ಬಳಕೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಈ ಕಾರಣಕ್ಕಾಗಿ ಲಿಪ್ ಸ್ಟಿಕ್, ಲಿಪ್ ಬಾಲ್ ಮತ್ತು ಮೊಡವೆ ನಿರೋಧಕ ಕ್ರೀಂ ಗಳಂತಹಾ  ಮೇಕಪ್ ಉತ್ಪನ್ನಗಳಿಂದ ದೂರವಿರಿ ಎಂದು ತಜ್ಞರು ಹೇಳಿದ್ದಾರೆ..
ನರ್ಚರ್ ಐವಿಎಫ್ ಸೆಂಟರ್ ನ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ  ಅರ್ಚನಾ ಧವನ್ ಬಜಾಜ್ ಮತ್ತು ಆಕಾಶ್ ಹೆಲ್ತ್ ಕೇರ್ ನ ಸ್ತ್ರೀರೋಗತಜ್ಞ ಮತ್ತು ಸಲಹೆಗಾರ, ತರುಣ ದುವಾ ಗರ್ಭಿಣಿಯರು ಬಳಸಬಾರದ ಪದಾರ್ಥಗಳ ಪಟ್ಟಿ ತಯಾರಿಸಿದ್ದಾರೆ.
  • ಲಿಪ್ ಸ್ಟಿಕ್, ಲಿಪ್-ಗ್ಲಾಸ್, ಲಿಪ್ ಬಾಲ್ಸ್, ಐಲೈನರ್ಸ್, ಮಸ್ಕರಾಗಳು, ಡಿಯೋಡ್ರಂಟ್ ಗಳು, ಉಗುರಿನ ಬಣ್ಣ, ಬಾಡಿ ಆಯಿಲ್, ತಾಲ್ಕಂ ಪೌದರ್, ಹೇರ್ ರಿಮೂವಲ್ ಉತ್ಪನ್ನಗಳು, ಹೇರ್ ಡೈ ಗಳು ಗರ್ಭಿಣಿಯರಿಗೆ ಅಪಾಯಕಾರಿಯಾಗಿದೆ.
  • ಮೊಡವೆ ನಿರೋಧಕ ಕ್ರೀಂ ಮತ್ತು ಜೆಲ್ ಗಳು ಎಲ್ಲಕ್ಕಿಂತಲೂ ಹೆಚ್ಚು ಅಪಾಯಕಾರಿಗಳಾಗುತ್ತವೆ.
  • ಟ್ರೈಕ್ಲೋಸನ್ ಮತ್ತು ಟ್ರೈಕ್ಲೊಕಾರ್ಬನ್ ಗಳನ್ನು ವೈಯುಕ್ತಿಕ ಆರೈಕೆಗಾಗಿ ಬಳಸಿಕೊಳ್ಳುತ್ತಾರೆ. ಇದು ಆಂಟಿಮೈಕ್ರೊಬಿಯಲ್ ಏಜೆಂಟ್ ನಂತೆ ಕೆಲಸ ಮಾಡುತ್ತದೆ.
  • ಪ್ಯಾರಾಬೆನ್ಸ್ ಗಳು ಒಂದು ವಿಧದ ಸಂರಕ್ಷಕವಾಗಿದ್ದು, ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಗಟ್ಟಲು ಬಳಸಲಾಗುವ ಸಾಬೂನುಗಳು, ಶ್ಯಾಂಪೂಗಳು ಮತ್ತು ಕಂಡೀಷನರ್ ಗಳಲ್ಲಿ ಇರುತ್ತವೆ. ಆದರೆ ಅವುಗಳಲ್ಲಿ ಹೆಚ್ಚಿನವು ಫಲವತ್ತತೆಗೆ ಮೇಲೆ ದುಷ್ಪರಿನಾಮ ಉಂಟು ಮಾಡುತ್ತವೆ.
  • ಉಗುರಿನ  ಬಣ್ಣದಲ್ಲಿನ ಪದಾರ್ಥಗಳಾದ ಫಾರ್ಮಾಲ್ಡಿಹೈಡ್, ಮತ್ತು  ಇತರ ಸಾವಯವ ಸಂಯುಕ್ತಗಳು ಭ್ರುನದ ಬೆಳವಣಿಗೆಗೆ ಅಡ್ಡಿ ಮಾಡುತ್ತವೆ. 
  • ಉಗುರುಗಳ ಮೇಲೆ ಹೊಳಪು ಕಾಣಿಸಲು ಸಾಮಾನ್ಯವಾಗಿ ಬಳಸುವ ದ್ರಾವಕ ಟೋಲುಯೆನ್, ಇದು ಕೇಂದ್ರ ನರಮಂಡಲದ ಮೇಲೆ ಪ್ರಭಾವ ಬೀರುತ್ತದೆ ಮತ್ತು ಸಂತಾನೋತ್ಪತ್ತಿ ಶಕ್ತಿಯನ್ನು ಕುಂದಿಸುತ್ತದೆ.
  • ಬಹುತೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ರಾಸಾಯನಿಕವೆಂದರೆ ಥಾಲೇಟ್ಗಳು. ಇದು ಹಾರ್ಮೋನ್ ಮಟ್ಟವನ್ನು ಕುಗ್ಗಿಸಿ ಎದೆ ಹಾಲಿನ ಉತ್ಪಾದನೆಗೆ ಧಕ್ಕೆ ತರುತ್ತದೆ.
  • ಆಕ್ಟಿನೊಕ್ಸೇಟ್, ಮತ್ತು ಹೋಮೋಸಾಲೇಟ್ ಗಳು ಅನೇಕ ಸನ್ ಸ್ಕ್ರೀನ್ ಗಳು, , ಲಿಪ್ ಬಾಲ್ ಗಳು ಮತ್ತು ಎಸ್ ಪಿಎಫ್ ನ ಇತರ ಉತ್ಪನ್ನಗಳಲ್ಲಿ ಕಾನಸಿಗುತ್ತದೆ.  ಇವುಗಳು ಎಂಡೋಮೆಟ್ರೋಸಿಸ್ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳಿಗೆ ಅಪಾಯವನ್ನು ಉಂಟುಮಾಡುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com