ಭಾರತದ ಕೋಳಿ ಮೊಟ್ಟೆಗಳು ಕಳಪೆ ಗುಣಮಟ್ಟದ್ದು: ಅಧ್ಯಯನ

ಸಸ್ಯಾಹಾರಿಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಎಲ್ಲರೂ ಬೆಳಗಿನ ಉಪಾಹಾರಕ್ಕೆ ಮೊಟ್ಟೆ ಸೇವಿಸುತ್ತಾರೆ. ಆರೋಗ್ಯಕ್ಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸಸ್ಯಾಹಾರಿಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಎಲ್ಲರೂ ಮೊಟ್ಟೆ ಸೇವಿಸುತ್ತಾರೆ. ಆರೋಗ್ಯಕ್ಕೆ ಮೊಟ್ಟೆ ಒಳ್ಳೆಯದು ಎಂಬ ನಂಬಿಕೆ ಎಲ್ಲರದ್ದು. ಅದನ್ನು ಯಾವುದೇ ರೂಪದಲ್ಲಾದರೂ ಡಯಟ್ ಮಾಡುವವರು ಕೂಡ ಸೇವಿಸುವ ರೂಢಿ ನಮ್ಮಲ್ಲಿದೆ.
ಆದರೆ ನಮ್ಮ ದೇಶದಲ್ಲಿ  ಉತ್ಪಾದನೆಯಾಗುವ ಮೊಟ್ಟೆ ಕಳಪೆ ಗುಣಮಟ್ಟದ್ದು ಮತ್ತು ಸೇವನೆಗೆ ಹಾನಿಕಾರಕ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಕೋಳಿ ಫಾರ್ಮ್ ನಲ್ಲಿ ಕೋಳಿಗಳ ಕಳಪೆ ಪಾಲನೆ ಮತ್ತು ತಾಂತ್ರಿಕತೆ ಕೊರತೆ ಮೊಟ್ಟೆಗಳ ಕಳಪೆ ಗುಣಮಟ್ಟಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ.
ಅಧ್ಯಯನ ಪ್ರಕಾರ, ಕಲಬೆರಕೆ ಮತ್ತು ಕಲ್ಮಶ ಪದಾರ್ಥಗಳನ್ನು ಕೋಳಿಗಳಿಗೆ ತಿನ್ನಿಸುವುದರಿಂದ, ಕೋಳಿಗಳಿಗೆ ಪೌಷ್ಟಿಕ ಆಹಾರ ನೀಡದಿರುವುದರಿಂದ ಆರೋಗ್ಯಕರ ಮೊಟ್ಟೆಗಳು ಉತ್ಪತ್ತಿಯಾಗುವುದಿಲ್ಲ. ಫಾರ್ಮ್ ಗಳಲ್ಲಿ  ಕೋಳಿಯ ಕಳಪೆ ಪಾಲನೆ ಮತ್ತು ಗುಣಮಟ್ಟದ ನಿಯಂತ್ರಣ ಕಾಪಾಡುವಿಕೆಯ ಕ್ರಮಗಳು  ಮೊಟ್ಟೆಗಳು ಕಲ್ಮಶಯುಕ್ತವಾಗಲು ಕಾರಣವಾಗುತ್ತದೆ. ಇದರಲ್ಲಿ ಕೇವಲ ಕೋಳಿ ಸಾಕಾಣಿಕೆದಾರರು ಮಾತ್ರವಲ್ಲದೆ ವ್ಯಾಪಾರಿಗಳು, ರಫ್ತುದಾರರು ಮತ್ತು ಗ್ರಾಹಕರು ಕೂಡ ಕಲ್ಮಶ ಮೊಟ್ಟೆಯ ಅನಾರೋಗ್ಯ ಅಪಾಯಗಳ ಬಗ್ಗೆ ಅರಿವನ್ನು ಹೊಂದಿಲ್ಲ ಎನ್ನುತ್ತಾರೆ ಅಧ್ಯಯನಕಾರರು.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಲಿನ ಮೊಟ್ಟೆಗಳ ಮೇಲ್ಮೈಯನ್ನು ಕ್ರಿಮಿಗಳಿಂದ ಮುಕ್ತಗೊಳಿಸಲು ಸ್ಟೆರಿಲೈಸ್ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಅಂತಹ ವ್ಯವಸ್ಥೆಗಳಿಲ್ಲ ಹೀಗಾಗಿ ಮಾಲಿನ್ಯಕಾರಕ ಮೊಟ್ಟೆಗಳ ಪ್ರಮಾಣ ಜಾಸ್ತಿಯಾಗಿರುತ್ತದೆ.
ವಿಶ್ವದಲ್ಲಿ ಮೊಟ್ಟೆ ಉತ್ಪಾದನೆಯಲ್ಲಿ ಭಾರತ ಕೂಡ ಮುಂಚೂಣಿಯಲ್ಲಿದೆ.ಆದರೆ ಜಾಗತಿಕ ಮಾರುಕಟ್ಟೆಯನ್ನು ತಲುಪಲು ಇನ್ನೂ ಸಾಧ್ಯವಾಗಿಲ್ಲ. ಉತ್ಪಾದನೆಯ ಗುಣಮಟ್ಟ ಅಂತಾರಾಷ್ಟ್ರೀಯ ಮಟ್ಟವನ್ನು ತಲುಪಿಲ್ಲ. ರಫ್ತಿಗೆ ಭಾರತದ ಮೊಟ್ಟೆಯನ್ನು ತಿರಸ್ಕರಿಸಲಾಗುತ್ತದೆ. ಇದಕ್ಕೆ ಅದರಲ್ಲಿರುವ ರಾಸಾಯನಿಕ ವಸ್ತುವೇ ಕಾರಣವಾಗಿದೆ ಎನ್ನುತ್ತಾರೆ ಆಹಾರ ಸುರಕ್ಷತೆ ಸಹಾಯವಾಣಿ ಮತ್ತು ಆಹಾರ ಸುರಕ್ಷತೆ ಮೊಬೈಲ್ ಆಪ್ ನ ಸ್ಥಾಪಕ ಡಾ. ಸೌರಭ್ ಅರೋರ.
ದೇಶೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ನೂರಾರು ಮೊಟ್ಟೆಗಳನ್ನು ಚಿಲ್ಲರೆ ಅಂಗಡಿಗಳಿಂದ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಯಿತು. ಅದರಲ್ಲಿ ಅಧಿಕ ಪ್ರಮಾಣದಲ್ಲಿ ಸಲ್ಮೊನೆಲ್ಲಾ ಕೋಶ ಹಾಗೂ ಮೊಟ್ಟೆಯ ಒಳಗೆ ಇರುವುದು ಪತ್ತೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com