ಚಿಕ್ಕ ವಯಸ್ಸಿನಲ್ಲೇ ಕಿಡ್ನಿ ರೋಗಗಳನ್ನು ತಡೆಗಟ್ಟಲು ಕಡಿಮೆ ಉಪ್ಪು ಸೇವಿಸಿ

ದೇಶದಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ಕಿಡ್ನಿ ವೈಫಲ್ಯವೂ ಪ್ರಮುಖ ಕಾರಣವಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಕಿಡ್ನಿ ವೈಫಲ್ಯ, ರೋಗಗಳನ್ನು ತಡೆಗಟ್ಟಲು ಕಡಿಮೆ ಉಪ್ಪು ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಕಿಡ್ನಿ ರೋಗಗಳನ್ನು ತಡೆಗಟ್ಟಲು ಕಡಿಮೆ ಉಪ್ಪು ಸೇವಿಸಿ
ಚಿಕ್ಕ ವಯಸ್ಸಿನಲ್ಲೇ ಕಿಡ್ನಿ ರೋಗಗಳನ್ನು ತಡೆಗಟ್ಟಲು ಕಡಿಮೆ ಉಪ್ಪು ಸೇವಿಸಿ
ಮುಂಬೈ: ದೇಶದಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ಕಿಡ್ನಿ ವೈಫಲ್ಯವೂ ಪ್ರಮುಖ ಕಾರಣವಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಕಿಡ್ನಿ ವೈಫಲ್ಯ, ರೋಗಗಳನ್ನು ತಡೆಗಟ್ಟಲು ಕಡಿಮೆ ಉಪ್ಪು ಸೇವಿಸುವುದು ಉತ್ತಮ ಎಂದು ಆರೋಗ್ಯ  ತಜ್ಞರು ಹೇಳಿದ್ದಾರೆ.
ಕಿಡ್ನಿ ವೈಫಲ್ಯ ಎಂಬುದು ದೇಶದಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ಪ್ರಮುಖವಾದ 5 ಕಾರಣಗಳಲ್ಲಿ ಒಂದಾಗಿದೆ. ಕಳೆದ 5-6 ವರ್ಷಗಳಿಗೆ ಹೋಲಿಕೆ ಮಾಡಿದರೆ 25-30 ವರ್ಷದ ಯುವ ಜನರು ಹೆಚ್ಚು ಕಿಡ್ನಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಡಾ. ಅರುಣ್ ಪಿ ದೊಶಿ ಹೇಳಿದ್ದಾರೆ. 
ಮೂತ್ರಪಿಂಡದ ವೈಫಲ್ಯಕ್ಕೆ ಹೈಪರ್ ಟೆನ್ಷನ್ ಸಹ ಕಾರಣವಾಗಿದ್ದು, ಹೆಚ್ಚು ಉಪ್ಪು ಸೇವಿಸುವುದೂ ಸಹ ಹೈಪರ್ ಟೆನ್ಷನ್ ಗೆ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಿಡ್ನಿ ರೋಗಗಳನ್ನು ತಡೆಗಟ್ಟಲು ಉಪ್ಪು ಕಡಿಮೆ ಸೇವಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com