ಹೃದಯಕ್ಕೆ ಮಾಂಸಹಾರಿ ಪ್ರೊಟೀನ್ ಗಿಂತ ಸಸ್ಯಾಹಾರಿ ಪ್ರೊಟೀನ್ ಉತ್ತಮ

ಮಾಂಸದ ಪ್ರೊಟೀನ್ ಗಳಿಗಿಂತ ತರಕಾರಿ, ಹಣ್ಣುಗಳ ಸೇವನೆಯಿಂದ ಸಿಗುವ ಪ್ರೊಟೀನ್ ಗಳು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್: ಮಾಂಸ ಸೇವನೆಯಿಂದ ದೇಹಕ್ಕೆ ಅಧಿಕ ವಿಟಮಿನ್, ಪ್ರೊಟೀನ್ ಗಳು ಸಿಗುತ್ತವೆ. ದೇಹ ಗಟ್ಟಿಯಾಗುತ್ತದೆ ಎಂಬ ಸಾಮಾನ್ಯ ನಂಬಿಕೆಗಳಿವೆ. ಆದರೆ ಅಧಿಕ ಮಾಂಸ ಸೇವನೆ ಹೃದಯಕ್ಕೆ ಒಳ್ಳೆಯದಲ್ಲ ಎಂಬ ಅಂಶ ಅಧ್ಯಯನದಿಂದ ತಿಳಿದುಬಂದಿದೆ.

ಮಾಂಸದ ಪ್ರೊಟೀನ್ ಗಳಿಗಿಂತ ತರಕಾರಿ, ಹಣ್ಣುಗಳ ಸೇವನೆಯಿಂದ ಸಿಗುವ ಪ್ರೊಟೀನ್ ಗಳು ಆರೋಗ್ಯಕ್ಕೆ ಉತ್ತಮ ಎಂದು ಅಧ್ಯಯನ ಹೇಳುತ್ತದೆ.

ಬೀಜ, ಒಣ ಹಣ್ಣುಗಳ ಸೇವನೆಯಿಂದ ಸಿಗುವ ಪ್ರೊಟೀನ್ ಗಳು ಮನುಷ್ಯನ ಹೃದಯಕ್ಕೆ ಒಳ್ಳೆಯದು, ಮಾಂಸ ಸೇವನೆಯಿಂದ ಹೃದ್ರೋಗ ಸಮಸ್ಯೆ ಹೆಚ್ಚಾಗುತ್ತದೆ ಎಂದು ಲೊಮೊ ಲಿಂಡಾ ವಿಶ್ವವಿದ್ಯಾಲಯದ ಅಡ್ವೆಂಟಿಸ್ಟ್ ಹೆಲ್ತ್ ಸೈನ್ಸ್ ಸೆಂಟರ್ ನ ಅಧ್ಯಯನದಿಂದ ತಿಳಿದುಬಂದಿದೆ.

ಮಾಂಸವನ್ನು ಹೆಚ್ಚೆಚ್ಚು ಸೇವನೆ ಮಾಡುವವರಲ್ಲಿ ಹೃದ್ರೋಗ ಸಮಸ್ಯೆಗಳು ಶೇಕಡಾ 60ರಷ್ಟು ಹೆಚ್ಚುವ ಅಪಾಯವಿದ್ದು, ಬೀಜ, ಧಾನ್ಯ, ತರಕಾರಿಗಳ ಸೇವನೆಯಿಂದ ಹೃದ್ರೋಗ ಸಮಸ್ಯೆ ಶೇಕಡಾ 40ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ.

81,000ಕ್ಕೂ ಹೆಚ್ಚು ಮಂದಿಯ ಅಂಕಿಅಂಶಗಳನ್ನು ತೆಗೆದುಕೊಳ್ಳಲಾಗಿದೆ. ಹೃದ್ರೋಗ ಸಮಸ್ಯೆಯನ್ನು ತಡೆಗಟ್ಟುವಲ್ಲಿ ಡಯಟ್ ಅಂಶಗಳು ಕಾರಣವಾದರೆ ಪ್ರೊಟೀನ್ ಗಳ ಸೇವನೆ ಕೂಡ ಬಹಳ ಮುಖ್ಯ ಅಂಶವಾಗುತ್ತದೆ ಎಂದು ಗೇರಿ ಫ್ರೇಸರ್ ಎಂಬ ಸಂಶೋಧನೆಯ ಸಪ ಪ್ರಾಂಶುಪಾಲರು ಹೇಳುತ್ತಾರೆ.

ಬೀಜಗಳು, ಒಣ ಹಣ್ಣುಗಳು, ಧಾನ್ಯಗಳು, ಡಯಟ್ ಪಾಲನೆಯಿಂದ ಹೃದ್ರೋಗಗಳನ್ನು ತಡೆಗಟ್ಟಬಹುದಾಗಿದ್ದು, ಕೆಂಪು ಮಾಂಸಗಳಿಂದ ಆರೋಗ್ಯದ ಅಪಾಯಗಳು ಹೆಚ್ಚು ಎಂದು ಅವರು ಹೇಳುತ್ತಾರೆ.

ಈ ಅಧ್ಯಯನ ಅಂತಾರಾಷ್ಟ್ರೀಯ ಪತ್ರಿಕೆ ಎಪಿಡಮಿಯೊಲಜಿಯಲ್ಲಿ ಪ್ರಕಟವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com