ವೀರ್ಯಾಣು ಚಟುವಟಿಕೆ ನಿಯಂತ್ರಿಸುವ ಪುರುಷರ ಗರ್ಭನಿರೋಧಕ ಮಾತ್ರೆ ಪರೀಕ್ಷೆ ಯಶಸ್ವಿ!

ಯಾವುದೇ ಅಡ್ದಪರಿಣಾಮಗಳಿಲ್ಲದೇ ವೀರ್ಯಾಣು ಚಟುವಟಿಕೆ ನಿಯಂತ್ರಿಸುವ ಪುರುಷರ ಗರ್ಭನಿರೋಧಕ ಮಾತ್ರೆಯ ಪರೀಕ್ಷೆ ಯಶಸ್ವಿಯಾಗಿದೆ.
ವೀರ್ಯಾಣು ಚಟುವಟಿಕೆ ನಿಯಂತ್ರಿಸುವ ಪುರುಷರ ಗರ್ಭನಿರೋಧಕ ಮಾತ್ರೆ ಪರೀಕ್ಷೆ ಯಶಸ್ವಿ!
ವೀರ್ಯಾಣು ಚಟುವಟಿಕೆ ನಿಯಂತ್ರಿಸುವ ಪುರುಷರ ಗರ್ಭನಿರೋಧಕ ಮಾತ್ರೆ ಪರೀಕ್ಷೆ ಯಶಸ್ವಿ!
Updated on
ವಾಷಿಂಗ್ ಟನ್: ಯಾವುದೇ ಅಡ್ದಪರಿಣಾಮಗಳಿಲ್ಲದೇ ವೀರ್ಯಾಣು ಚಟುವಟಿಕೆ ನಿಯಂತ್ರಿಸುವ ಪುರುಷರ ಗರ್ಭನಿರೋಧಕ ಮಾತ್ರೆಯ ಪರೀಕ್ಷೆ ಯಶಸ್ವಿಯಾಗಿದೆ. 
ವೀರ್ಯಾಣು ಪ್ರೋಟೀನ್ ನ್ನು ಬಂಧಿಸುವ EP055 ಎಂಬ ಪದಾರ್ಥದ ಸಂಯೋಗ  ವೀರ್ಯಾಣು ಚಟುವಟಿಕೆ ನಿಯಂತ್ರಿಸುವ ಮೂಲಕ ಪುರುಷರ ಗರ್ಭನಿರೋಧಕ ಮಾತ್ರೆಯಾಗಿ ಕಾರ್ಯನಿರ್ವಹಿಸುತ್ತದೆ, ಅದೂ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಎಂಬುದನ್ನು ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದವರು ಕಂಡುಕೊಂಡಿದ್ದಾರೆ. 
ಈ ಮಾತ್ರೆ ಸೇವಿಸುವುದರಿಂದ ವೀರ್ಯಾಣುವಿನ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಕಡಿಮೆಯಾಗುತ್ತದೆ. ಆದರೆ ಹಾರ್ಮೋನ್ ಗಳಿಗೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ ಎಂದು  ವಿಶ್ವವಿದ್ಯಾಲಯದ ತಜ್ಞರು ಹೇಳಿದ್ದಾರೆ. 
ಪ್ರಸ್ತುತ ಕಾಂಡೋಮ್ ಬಳಕೆ ಹಾಗೂ ಶಸ್ತ್ರಚಿಕಿತ್ಸೆಯನ್ನು ಪುರುಷರಲ್ಲಿ ಸಂತಾನೋತ್ಪತ್ತಿ ನಿರೋಧಕ ಕ್ರಮವನ್ನಾಗಿ ಅನುಸರಿಸಲಾಗುತ್ತಿದೆ. ಈಗಲೂ ಪುರುಷರಲ್ಲಿ ವೀರ್ಯಾಣು ಚಟುವಟಿಕೆ ನಿಯಂತ್ರಿಸುವ ಮಾತ್ರೆ ಇದೆ ಆದರೆ ಅದರಿಂದ ಹಾರ್ಮೋನ್ ಗಳಿಗೆ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿದೆ. 
ಪೋರ್ಟ್ಲ್ಯಾಂಡ್  ನ ಒರ್ಗಾನ್ ನ್ಯಾಷನಲ್ ಪ್ರೈಮೇಟ್ ರಿಸರ್ಚ್ ಸೆಂಟರ್ ಒಎಚ್ಎಸ್ ಯು ನಲ್ಲಿ ಈ ಮಾತ್ರೆಯನ್ನು ಪ್ರಾಣಿಗಳ ಮೇಲೆ ಪ್ರಯೋಗಿಸುವ ಮೂಲಕ 30 ಗಂಟೆಗಳ ವರೆಗೆ ಸಂಶೋಧನೆಗೊಳಪಡಿಸಲಾಗಿದ್ದು, ಮಾತ್ರೆ ಪರೀಕ್ಷೆ ಯಶಸ್ವಿಯಾಗಿದೆ. ಮಾತ್ರೆ ಸೇವಿಸಿದ 18 ದಿನಗಳ ಬಳಿಕ ಪ್ರಾಣಿಗಳ ವೀರ್ಯಾಣು ಚಟುವಟಿಕೆಗಳಲ್ಲಿ ಸಂಪೂರ್ಣ ಚೇತರಿಕೆ ಕಂಡುಬಂದಿದ್ದು  EP055 ಮಾತ್ರೆ ಸೇವನೆ ಬಳಿಕವೂ ವೀರ್ಯಾಣು ಚಟುವಟಿಕೆ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಸಂಶೋಧಕರಾದ ಮೇರಿ ಝೆಲಿನ್ಸ್ಕಿ ಹೇಳಿದ್ದಾರೆ. 
ಆದರೆ ಈ ಮಾತ್ರೆ ಪುರುಷರು ಬಳಕೆ ಮಾಡುವುದಕ್ಕೂ ಮುನ್ನ ಮತ್ತಷ್ಟು ಕೆಲಸಗಳಾಗಬೇಕಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com