ಬೇವಿನ ವಿಸ್ಮಯಕಾರಿ ಔಷಧೀಯ ಪ್ರಯೋಜನಗಳು!

ಬೇವಿನ ಎಲೆಯಲ್ಲಿ ಅದ್ಭುತ ಔಷಧೀಯ ಗುಣಗಳಿವೆ. ಇದರಲ್ಲಿ ಸುಮಾರು 130 ಜೈವಿಕ ಸಕ್ರಿಯ ವಸ್ತುಗಳಿದ್ದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಬೇವಿನ ಎಲೆಯಲ್ಲಿ ಅದ್ಭುತ ಔಷಧೀಯ ಗುಣಗಳಿವೆ. ಇದರಲ್ಲಿ ಸುಮಾರು 130 ಜೈವಿಕ ಸಕ್ರಿಯ ವಸ್ತುಗಳಿದ್ದು ಅದು ನಮ್ಮ ದೇಹದ ಚರ್ಮ, ಕೂದಲು, ರಕ್ತ ಮೊದಲಾದ ಭಾಗಗಳಿಗೆ ಅತ್ಯುತ್ತಮವಾಗಿದೆ.

ಇಂತಹ ಅತ್ಯಮೂಲ್ಯ ಗಿಡಮೂಲಿಕೆಯಾದ ಬೇವಿನ ಎಲೆ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಉಪಕಾರಿಯಾಗಿದೆ. ಮಳೆಗಾಲದಲ್ಲಿ ತುರಿಕೆ, ಸೋಂಕು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಹೆಚ್ಚು. ಈ ಸಮಯದಲ್ಲಿ ಚರ್ಮ ಮತ್ತು ಕೂದಲಿಗೆ ಹೆಚ್ಚಿನ ರಕ್ಷಣೆ ಬೇಕಾಗುತ್ತದೆ. ಇದಕ್ಕೆಲ್ಲಾ ಬೇವಿನ ಎಲೆ ಉಪಕಾರಿಯಾಗಿದೆ.

ಹಿಮಾಲಯ ಡ್ರಗ್ ಕಂಪೆನಿಯ ಆಯುರ್ವೇದ ತಜ್ಞ ಡಾ ಹರಿಪ್ರಸಾದ್ , ಬೇವಿನ ಎಲೆ ದೇಹದ ವಿವಿಧ ಭಾಗಗಳಿಗೆ ಹೇಗೆ ಅನುಕೂಲವಾಗಿದೆ ಎಂಬುದನ್ನು ವಿವರಿಸಿದ್ದಾರೆ.

ಚರ್ಮಕ್ಕೆ ಮುಖ್ಯ: ಆಯುರ್ವೇದದಲ್ಲಿ ಬೇವಿನ ಎಲೆಗೆ ತನ್ನದೇ ಆದ ಪ್ರಾಮುಖ್ಯತೆಯಿದೆ. ಹೊಳೆಯುವ ಚರ್ಮದ ಕಾಂತಿಗೆ ಬೇವಿನ ಎಲೆ ಮುಖ್ಯ. ಮಳೆಗಾಲದಲ್ಲಿ, ದೇಹದಲ್ಲಿ ಎಣ್ಣೆಯ ಅಂಶ ಉತ್ಪಾದನೆಗೆ ಕಾರಣವಾಗುವ ಮತ್ತು ಬೆವರು ನಿಯಂತ್ರಿಸುವ ಸೆಬಾಸಿಯಸ್ ಗ್ರಂಥಿಗಳು ಹೆಚ್ಚಿದ ತೇವಾಂಶದ ಕಾರಣದಿಂದಾಗಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆ.

ಇದರಿಂದ ಚರ್ಮದಲ್ಲಿ ಹೆಚ್ಚು ಎಣ್ಣೆಯ ಅಂಶ ಉಂಟಾಗುತ್ತದೆ. ಬೇವಿನ ಎಲೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮೊಡವೆ, ಬ್ಲಾಕ್ ಅಂಡ್ ವೈಟ್ ಹೆಡ್ಸ್ ಗಳನ್ನು ಕಡಿಮೆ ಮಾಡುತ್ತದೆ. ಚರ್ಮದಲ್ಲಿರುವ ದದ್ದುಗಳು, ತುರಿಕೆ, ಸೋಂಕು, ಸುಟ್ಟ ಗಾಯಗಳನ್ನು ಗುಣಪಡಿಸುತ್ತದೆ.

ಕೂದಲು: ತಲೆಹೊಟ್ಟು ಮತ್ತು ಶುಷ್ಕ ನೆತ್ತಿಗೆ ಸಹ ಬೇವಿನ ಸೊಪ್ಪನ್ನು ಬಳಸಬಹುದು. ವಾತಾವರಣದಲ್ಲಿ ಹವಾಮಾನ ಬದಲಾದರೆ ನಿಮ್ಮ ನೆತ್ತಿಯ ಪಿಎಚ್ ಏರುಪೇರಾಗಿ ನಿಮ್ಮ ತಲೆಕೂದಲು ಜಿಡ್ಡುಜಿಡ್ಡಾಗಿ ಹೊಟ್ಟು ಉತ್ಪತ್ತಿಯಾಗುತ್ತದೆ. ಆದರೆ ಬೇವಿನ ಎಲೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳಿಂದ ಒಣ ನೆತ್ತಿ ಮತ್ತು ತಲೆಹೊಟ್ಟನ್ನು ನಿವಾರಿಸಬಹುದು. ತಲೆಕೂದಲು ಉದುರುವುದನ್ನು ಕೂಡ ನಿಯಮಿತವಾಗಿ ಹಚ್ಚುತ್ತಾ ಬಂದರೆ ತಡೆಯಬಹುದು.

ರಕ್ತ ಶುದ್ದೀಕರಣ:
ಮನುಷ್ಯನ ದೇಹ ಆರೋಗ್ಯದಿಂದ ಇರಬೇಕಾದರೆ ಜೀರ್ಣಕ್ರಿಯೆ ಉತ್ತಮವಾಗಿರಬೇಕು. ಯಾವುದೇ ರೋಗ ಬರುವ ಮೊದಲು ಅದನ್ನು ತಡೆಗಟ್ಟುವುದು ಮುಖ್ಯವಾಗುತ್ತದೆ. ಉತ್ತಮ ಆರೋಗ್ಯ ಜೀರ್ಣಕ್ರಿಯೆ ಉಂಟಾಗಲು ಬೇವಿನ ಸೊಪ್ಪು ತಿಂದರೆ ಒಳ್ಳೆಯದು. ಮಳೆಗಾಲದಲ್ಲಿ ಆರೋಗ್ಯಕರ ಆಹಾರ ತಿನ್ನುವುದು ಮುಖ್ಯವಾಗುತ್ತದೆ.
ಸರಿಯಾದ ಆಹಾರ ತಿನ್ನದಿದ್ದರೆ ಜೀರ್ಣಕ್ರಿಯೆ ಸರಿಯಾಗಿ ಇರುವುದಿಲ್ಲ. ಗಿಡಮೂಲಿಕೆಯನ್ನು ಸೇವಿಸಿ ಜೀರ್ಣಕ್ರಿಯೆ ಉತ್ತಮವಾಗುವಂತೆ ನೋಡಿಕೊಳ್ಳಬಹುದು. ಇಡೀ ಜೀರ್ಣಾಂಗ ವ್ಯವಸ್ಥೆಯನ್ನು ಶಮನಗೊಳಿಸುವುದರಿಂದ ಬೇವಿನ ಎಲೆ ಉರಿಯೂತದ ಗುಣಲಕ್ಷಣಗಳಿಗೆ ಕರುಳಿನ ಆರೋಗ್ಯಕ್ಕೆ ಉಪಯುಕ್ತವಾಗುತ್ತವೆ.

ಬಾಯಿಯ ಆರೋಗ್ಯ: ಬೇವಿನ ಎಲೆಯನ್ನು ಹಲವು ಟೂತ್ ಪೇಸ್ಟ್ ಗಳಲ್ಲಿ ಮತ್ತು ಮೌತ್ ವಾಶ್ ಗಳಲ್ಲಿ ಬಳಸಲಾಗುತ್ತದೆ ಹಲ್ಲು ನೋವಿಗೆ ಕೂಡ ಉಪಶಮನಕಾರಿ. ಮಳೆಗಾಲದಲ್ಲಿ ಬಾಯಿನೋವಿನ ಸಮಸ್ಯೆ ಅಧಿಕವಾಗಿರುತ್ತದೆ. ಬಾಯಿಯಲ್ಲಿರುವ ನಂಜನ್ನು ನಿವಾರಿಸುತ್ತದೆ. ಒಸಡುಗಳ ಉರಿಯೂತವನ್ನು ನಿಗ್ರಹಿಸುವ ಶಕ್ತಿ ಹೊಂದಿದೆ.ಇದು ಬ್ಯಾಕ್ಟೀರಿಯದ ಗುಣಲಕ್ಷಣಗಳೊಂದಿಗೆ ನೈಸರ್ಗಿಕ ಆಂಟಿಮೈಕ್ರೊಬಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com