ಹೆಚ್ಚೆಚ್ಚು ಪ್ರಯಾಣ ಮಾಡುತ್ತೀರಾ? ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಸಲಹೆಗಳು!

ಮಳೆಗಾಲದಲ್ಲಿ ಪ್ರಯಾಣಿಸುವಾಗ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಅತಿಭೇದಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಳೆಗಾಲದಲ್ಲಿ ಪ್ರಯಾಣಿಸುವಾಗ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಅತಿಭೇದಿ ಅಥವಾ ಅತಿಸಾರ ಉಂಟಾಗುವುದು ಈ ಋತುವಿನಲ್ಲಿ ಸಾಮಾನ್ಯ. ಹೊರಗಡೆ ಸುತ್ತಾಡುವವರು, ಪ್ರಯಾಣಿಸುವವರಿಗೆ ಇದು ಹೆಚ್ಚಾಗಿರುತ್ತದೆ.

ಪ್ರಯಾಣದ ವೇಳೆ ಮಳೆಗಾಲದಲ್ಲಿ ಅತಿಭೇದಿ ಕಾಣಿಸಿಕೊಳ್ಳುತ್ತಿದ್ದರೆ ಅದರ ಗುಣಲಕ್ಷಣಗಳು ಹೀಗಿರುತ್ತವೆ. ಊಟದ ಮಧ್ಯೆ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಹೊಟ್ಟೆಯಲ್ಲಿ ನೀರಿನ ಕುಲುಕುವಿಕೆ ತರಹ ಶಬ್ದವಾಗುತ್ತಿದ್ದರೆ, ಶೀತ, ಜ್ವರ, ವಾಕರಿಕೆ ಅಥವಾ ತೀವ್ರ ಸೆಳೆತಗಳು ಉಂಟಾಗುತ್ತಿದ್ದರೆ ಅದು ಅತಿಸಾರದ ಲಕ್ಷಣವಾಗಿರುತ್ತದೆ.

ಹವಾಮಾನ್ಯ ವೈಪರೀತ್ಯ ಮತ್ತು ಕೆಲವು ಆಹಾರಗಳ ಸೇವನೆಯಿಂದ ಇದು ಬರಬಹುದು. ಅತಿಸಾರ ಅಥವಾ ಅತಿಭೇದಿ ಉಂಟಾಗದಂತೆ ಕೆಲವು ಟಿಪ್ಸ್ ಗಳನ್ನು ಅನುಸರಿಸಬಹುದು:

-ಶೀತ ಅಥವಾ ಕೊಠಡಿ ತಾಪಮಾನದ ಆಹಾರಗಳಿಂದ ದೂರವಿರಿ:
ಶೀತ ಮತ್ತು ಕೊಠಡಿ ತಾಪಮಾನ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳಲು ಕಾರಣವಾಗಿರುತ್ತದೆ. ನೀವು ಯಾವುದೇ ಆಹಾರ ಸೇವಿಸಿ, ಅದು ಹೊರಗಿನ ಆಹಾರವೇ ಆಗಿರಲಿ, ಸೇವಿಸುವ ಮುನ್ನ ಬಿಸಿ ಮಾಡಿಕೊಂಡರೆ ಉತ್ತಮ. ಮನೆಯಲ್ಲಿ ತಯಾರಿಸಿದ ಆಹಾರವೇ ಉತ್ತಮ, ಹೊರಗಿನ ಹೊಟೇಲ್ ತಿನಿಸನ್ನು ಹೆಚ್ಚು ನಂಬುವುದು ಒಳ್ಳೆಯದಲ್ಲ.

-ಹಣ್ಣು, ತರಕಾರಿಗಳನ್ನು ಸೇವಿಸುವ ಮುನ್ನ ಸುಲಿದು, ಚೆನ್ನಾಗಿ ತೊಳೆದು ಸೇವಿಸಿ.
ಅದರಲ್ಲಿರುವ ಎಲ್ಲಾ ಕೊಳಕು ಮತ್ತು ವಿಷಕಾರಿ ಪದಾರ್ಥಗಳು ತೊಳೆದು ಹೋಗುತ್ತದೆ.
-ಮೊಟ್ಟೆ ತಿನ್ನುವವರಾಗಿದ್ದರೆ ಅದನ್ನು ಬಿಸಿಲಿನಲ್ಲಿಟ್ಟು ಅಥವಾ ಬಿಸಿ ಮಾಡಿ ತಿಂದರೆ ಆಗುವುದಿಲ್ಲ. ಸಂಪೂರ್ಣ ಬೇಯಿಸಿಯೇ ಆಮ್ಲೆಟ್ ಮಾಡಿ ಮಳೆಗಾಲದಲ್ಲಿ ತಿಂದರೆ ಉತ್ತಮ. ಮೊಟ್ಟೆಯ ಒಳಗಿನ ಹಳದಿ ದ್ರವ ಸೇವಿಸದೆ ಇರುವುದು ಮಳೆಗಾಲದಲ್ಲಿ ಉತ್ತಮ.

-ಡೈರಿ ಉತ್ಪನ್ನಗಳಿಂದ ದೂರ ಉಳಿಯುವುದು ಉತ್ತಮ. ಪಾಶ್ಚರೀಕರಿಸಿದ ಹೈನು ಉತ್ಪನ್ನಗಳನ್ನು ಉಪಯೋಗಿಸುವುದು ಒಳಿತು.

-ಮಳೆಗಾಲದಲ್ಲಿ ನೀರು ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ನೀರು ಸೇವಿಸುವಾಗ ವಹಿಸಬೇಕಾದ ಎಚ್ಚರಿಕೆ ಕ್ರಮಗಳು ಇದು:

-ನಳ್ಳಿ ನೀರು ಅಥವಾ ಬಾವಿ ನೀರನ್ನು ನೇರವಾಗಿ ಸೇವಿಸಬೇಡಿ. ಅದರಲ್ಲಿ ಸತ್ತ ಯಾವುದಾದರೂ ಬ್ಯಾಕ್ಟೀರಿಯಾ ಸೇರಿಕೊಂಡಿರಬಹುದು. ಇದನ್ನು ಸೇವಿಸಿ ಮತ್ತೊಂದು ವೈರಸ್ ಹರಡುವ ಸಾಧ್ಯತೆಯಿದೆ. ಅದರ ಬದಲು ಬಾಟಲಿ, ಫಿಲ್ಟರ್ ನೀರನ್ನು ಸೇವಿಸಿ.
-ನೀರನ್ನು ಸೇವಿಸುವ ಮುನ್ನ ಬಿಸಿ ಮಾಡಿ ಕುಡಿಯಿರಿ.

-ಮಳೆಗಾಲದಲ್ಲಿ ಆದಷ್ಟು ತಂಪು ಪಾನೀಯಗಳಿಂದ ದೂರವಿರುವುದು ಒಳ್ಳೆಯದು.
-ಪಾನ್ ಶಾಪ್ ನಲ್ಲಿರುವ ಗ್ಲಾಸ್ ಬಾಟಲ್ ಗಳು ಅಥವಾ ಕ್ಯಾನ್ ಗಳನ್ನು ಬಳಸದಿರುವುದು ಉತ್ತಮ. ಅದರಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿರುತ್ತವೆ. ಬದಲಿಗೆ ಬಿಸಿ ಪಾನೀಯ ಉತ್ತಮ.
-ಮಳೆಗಾಲದಲ್ಲಿ ಪಾಶ್ಚರೀಕರಿಸಿದ ಹಾಲು ಉತ್ತಮ.
-ದೇಹದಲ್ಲಿ ನೀರಿನ ಅಂಶ ಆರದಂತೆ ಸಾಕಷ್ಟು ನೀರು ಕುಡಿಯುತ್ತಿರಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com