ಪ್ರತಿದಿನ ಸ್ವಲ್ಪ ಬೆಲ್ಲ ಸೇವನೆಯಿಂದ ಏನೇನು ಉಪಯೋಗ ಗೊತ್ತಾ?

ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಲು, ಸಣ್ಣಪುಟ್ಟ ಕಾಯಿಲೆಗಳನ್ನು ನಿಯಂತ್ರಿಸಲು ಅಡುಗೆಮನೆಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಲು, ಸಣ್ಣಪುಟ್ಟ ಕಾಯಿಲೆಗಳನ್ನು ನಿಯಂತ್ರಿಸಲು ಅಡುಗೆಮನೆಯಲ್ಲಿಯೇ ಮದ್ದು ಇರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹೌದು, ನಿಯಮಿತವಾಗಿ ಬೆಲ್ಲ ತಿನ್ನುತ್ತಿದ್ದರೆ ದೇಹಾರೋಗ್ಯವನ್ನು ಕಾಪಾಡಬಹುದು ಮತ್ತು ಹಲವು ಕಾಯಿಲೆಗಳಿಗೆ ಔಷಧ ಕೂಡ ಆಗುತ್ತದೆ. ಬೆಲ್ಲ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ದೇಹಕ್ಕೆ ಬಲ ನೀಡುತ್ತದೆ ಮತ್ತು ರಕ್ತ ಶುದ್ಧವಾಗಿ ಹರಿಯುವಂತೆ ಮಾಡುತ್ತದೆ.

ಬೆಲ್ಲ, ದೇಹವನ್ನು ನೈಸರ್ಗಿಕವಾಗಿ ಶುದ್ಧಿ ಮಾಡುವ ಪದಾರ್ಥ: ಬೆಲ್ಲ ಸೇವನೆಯಿಂದ ಯಕೃತ್ತಿನ ಕೆಲಸದ ಹೊರೆಯನ್ನು ತಗ್ಗಿಸುತ್ತದೆ ಮತ್ತು ದೇಹದಿಂದ ಹಾನಿಕಾರಕ ಜೀವಾಣು ಹೊರಹಾಕುವ ಮೂಲಕ ಅಂಗವನ್ನು ವಿಷರಹಿತ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳು, ಸತು ಮತ್ತು ಸೆಲೀನಿಯಂ (ಒಂದು ಅಲೋಹ ಧಾತು)ಗಳಿರುತ್ತವೆ. ಇದು ಮುಕ್ತ-ಮೂಲಭೂತ ಹಾನಿ ಮತ್ತು ಸೋಂಕುಗಳ ವಿರುದ್ಧ ಪ್ರತಿರೋಧವನ್ನು ಹೆಚ್ಚಿಸುತ್ತದೆ.

ರಕ್ತಹೀನತೆ ತಡೆಯುತ್ತದೆ: ಬೆಲ್ಲದಲ್ಲಿ ಕಬ್ಬಿಣ ಮತ್ತು ಫೋಲೇಟ್ ಸಮೃದ್ಧವಾಗಿರುವ ಕಾರಣ ರಕ್ತಹೀನತೆಯನ್ನು ತಡೆಯುತ್ತದೆ. ಇದು ಗರ್ಭಿಣಿಯರಿಗೆ ಅತ್ಯಂತ ಒಳ್ಳೆಯದು. ದೇಹಕ್ಕೆ ತಕ್ಷಣದ ಶಕ್ತಿಯನ್ನು ಬೆಲ್ಲ ನೀಡುತ್ತದೆ.

ರಕ್ತದ ಒತ್ತಡ ನಿಯಂತ್ರಣ: ಬೆಲ್ಲದಲ್ಲಿ ಪೊಟಾಷಿಯಂ ಮತ್ತು ಸೋಡಿಯಂ ಇರುತ್ತದೆ. ಇದು ದೇಹದಲ್ಲಿ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ದೇಹದ ರಕ್ತದ ಒತ್ತಡ ಮಟ್ಟ ಸಹಜವಾಗಿರುತ್ತದೆ.

ಕೀಲು ನೋವು ನಿವಾರಣೆ: ಶುಂಠಿಯೊಂದಿಗೆ ಬೆಲ್ಲ ಸೇರಿಸಿ ತಿಂದರೆ ಅಥವಾ ಹಾಲಿನೊಂದಿಗೆ ಒಂದು ತುಂಡು ಬೆಲ್ಲ ಸೇವಿಸಿದರೆ ಕೀಲು ನೋವು ವಾಸಿಯಾಗಿ ಮೂಳೆಗಳು ಗಟ್ಟಿಯಾಗುತ್ತವೆ.

ಚರ್ಮದ ಕಾಂತಿ: ಬೆಲ್ಲದಲ್ಲಿ ಹಲವು ವಿಟಮಿನ್ ಗಳು ಮತ್ತು ಖನಿಜಗಳಿರುತ್ತವೆ. ಮೊಡವೆಗಳ ನಿಯಂತ್ರಣಕ್ಕೆ ಮತ್ತು ಚರ್ಮವನ್ನು ದೋಷರಹಿತವಾಗಿಡಲು ಸಹಾಯ ಮಾಡುತ್ತದೆ.ಚರ್ಮ ಸುಕ್ಕುಗಟ್ಟುವುದನ್ನು ಮತ್ತು ಕಪ್ಪು ಚುಕ್ಕೆಗಳನ್ನು ಸಹ ನಿಯಂತ್ರಿಸುತ್ತದೆ.

ಮುಟ್ಟಿನ ಸಮಸ್ಯೆ ನಿವಾರಣೆ:
ಹಲವು ಪೌಷ್ಟಿಕಾಂಶಗಳು ಬೆಲ್ಲದಲ್ಲಿ ಇರುವುದರಿಂದ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಸ್ಯೆಗೆ ಇದು ದಿವೌಷಧ. ಮುಟ್ಟಿನ ಸಮಯದಲ್ಲಿ ಸೆಳೆತ ಮತ್ತು ಹೊಟ್ಟೆ ನೋವನ್ನು ನಿವಾರಿಸುತ್ತದೆ.

ತೂಕ ನಿಯಂತ್ರಣ: ಬೆಲ್ಲದಲ್ಲಿ ಹಲವು ಖನಿಜ, ಲವಣ ಪದಾರ್ಥಗಳಿರುತ್ತವೆ. ಅದರಲ್ಲಿರುವ ಪೊಟಾಷಿಯಂ ತೂಕ ನಿಯಂತ್ರಣಕ್ಕೆ ಸಹಕಾರಿ. ಸ್ನಾಯುಗಳ ಬಲವರ್ಧನೆಗೆ ಸಹಕಾರಿ ಮತ್ತು ಇದರಿಂದ ಜೀರ್ಣಕ್ರಿಯೆ ಕೂಡ ಉತ್ತಮವಾಗುತ್ತದೆ. ಇದರಿಂದ ಸಹಜವಾಗಿ ದೇಹದ ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com