ಪುರುಷರಿಗಿಂತ ಮಹಿಳೆಯರ ಮೆದುಳಿನ ಮೇಲೆ ಸೆಕ್ಸ್ ನ ಪ್ರಭಾವ ಹೆಚ್ಚು

ಕಾಮ ಪ್ರಚೋದನೆಗೊಳಗಾದಾಗ ಮಹಿಳೆಯರ ಮಿದುಳು ಪುರುಷರ ಮೆದುಳಿಗಿಂತ ಹೆಚ್ಚು ಉದ್ರೇಕಗೊಂಡು, ಹೆಚ್ಚು ಪ್ರತಿಕ್ರಿಯಿಸುತ್ತದೆ ಎಂದು ಹೊಸ ಅಧ್ಯಯನ ವರದಿಯ ಮೂಲಕ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಾಮ ಪ್ರಚೋದನೆಗೊಳಗಾದಾಗ ಮಹಿಳೆಯರ ಮಿದುಳು ಪುರುಷರ ಮೆದುಳಿಗಿಂತ ಹೆಚ್ಚು ಉದ್ರೇಕಗೊಂಡು, ಹೆಚ್ಚು ಪ್ರತಿಕ್ರಿಯಿಸುತ್ತದೆ ಎಂದು ಹೊಸ ಅಧ್ಯಯನ ವರದಿಯ ಮೂಲಕ ತಿಳಿದುಬಂದಿದೆ. 
ಮ್ಯಾಕ್ ಗಿಲ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯ ಪ್ರಕಾರ ಮಿಲನದ ಸಂದರ್ಭದಲ್ಲಿ ಪುರುಷರ ಮೆದುಳಿಗಿಂತ ಮಹಿಳೆಯರ ಮೆದುಳು ಹೆಚ್ಚು ಸಂಕೀರ್ಣವಾಗಿರುತ್ತದೆ. 20 ಮಹಿಳೆಯರು ಹಾಗೂ 20 ಪುರುಷರಿಗೆ ಕಾಮಪ್ರಚೋದಕ ಚಿತ್ರದ ತುಣುಕುಗಳನ್ನು ತೋರಿಸಲಾಯಿತು. ಈ ವೇಳೆ ಮೆದುಳಿನಲ್ಲಿ ನಡೆಯುವ ಕ್ರಿಯೆಗಳನ್ನು ಎಂಆರ್ ಐ ಸೇರಿದಂತೆ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಲಾಗಿದ್ದರೆ ಹೀಟ್-ಸೀಕಿಂಗ್ ಕ್ಯಾಮರಾ ಸಹಾಯದಿಂದ ಜನನಾಂಗಂದ ಮೂಲಕ ಪ್ರಚೋದನೆಯ ಮಟ್ಟವನ್ನು ಮಾಪನ ಮಾಡಲಾಗಿದೆ. 
ಜನನಾಂಗದಿಂದ ಮೆದುಳಿಗೆ ಬಲವಾದ ಸಂಪರ್ಕವಿರುವ ಭಾಗ ಪುರುಷರಲ್ಲಿ ಕಂಡುಬಂದಿಲ್ಲ. ಆದರೆ ಪುರುಷರಿಗಿಂತ ಹೆಚ್ಚು  ಜನನಾಂಗದಿಂದ ಬಲವಾದ ಸಂಪರ್ಕವಿರುವ ಮೆದುಳಿನ ಭಾಗ ಮಹಿಳೆಯರಲ್ಲಿ  ಕಂಡುಬಂದಿದ್ದು, ಕಾಮ ಪ್ರಚೋದನೆಗೊಳಗಾದಾಗ ಮಹಿಳೆಯರ ಮಿದುಳು ಪುರುಷರ ಮೆದುಳಿಗಿಂತ ಹೆಚ್ಚು ಉದ್ರೇಕಗೊಂಡು, ಹೆಚ್ಚು ಪ್ರತಿಕ್ರಿಯಿಸುತ್ತದೆ ಎಂಬುದನ್ನು ಪ್ರಾಥಮಿಕ ಹಂತದ ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ. 
ಸಂಶೋಧಕರ ಪ್ರಕಾರ ಈ ಅಧ್ಯಯನ ವರದಿಯಿಂದ ಕಂಡುಕೊಂಡ ಅಂಶಗಳನ್ನು ಬಲವಾಗಿ ಒಪ್ಪಬೇಕಾದರೆ ಮತ್ತಷ್ಟು ಆಳವಾದ ಅಧ್ಯಯನ ನಡೆಯುವ ಅಗತ್ಯವಿದ್ದು ಅಧ್ಯಯನ ವರದಿ ಜರ್ನಲ್ ಆಫ್ ಸೆಕ್ಸ್ಯುಯಲ್ ಮೆಡಿಸಿನ್ ನಲ್ಲಿ ಪ್ರಕಟವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com