35ರ ನಂತರ ಮಗುವಿನ ನಿರೀಕ್ಷೆಯೇ? ನಿಮ್ಮ ಸಹಾಯಕ್ಕೆ ಇಲ್ಲಿದೆ ಕೆಲವು ಟಿಪ್ಸ್

ನಿಸರ್ಗದತ್ತವಾಗಿರುವ ಯಾವುದೂ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಹಾಗೆಯೇ ಬಹಳಷ್ಟು ಮಹಿಳೆಯರು ತಾವು ಸಿಸೇರಿಯನ್ ಗಿಂದ ಸಹಜ ಹೆರಿಗೆಯಾಗಲೆಂದು ......
35ರ ನಂತರ ಮಗುವಿನ ನಿರೀಕ್ಷೆಯಲ್ಲಿದ್ದೀರಾ? ನಿಮ್ಮ ಸಹಾಯಕ್ಕೆ ಇಲ್ಲಿದೆ ಕೆಲವು ಟಿಪ್ಸ್
35ರ ನಂತರ ಮಗುವಿನ ನಿರೀಕ್ಷೆಯಲ್ಲಿದ್ದೀರಾ? ನಿಮ್ಮ ಸಹಾಯಕ್ಕೆ ಇಲ್ಲಿದೆ ಕೆಲವು ಟಿಪ್ಸ್
Updated on
ನಿಸರ್ಗದತ್ತವಾಗಿರುವ ಯಾವುದೂ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಹಾಗೆಯೇ ಬಹಳಷ್ಟು ಮಹಿಳೆಯರು ತಾವು ಸಿಸೇರಿಯನ್ ಗಿಂದ ಸಹಜ ಹೆರಿಗೆಯಾಗಲೆಂದು ಬಯಸುತ್ತಾರೆ. ಆದರೆ ಇದು ಕೆಲವರಿಗಷ್ಟೇ ಸಾದ್ಯವಾಗುತ್ತದೆ. 
"ಹೀಗೆ ಸಹಜ ಹೆರಿಗೆ ಆಗಬೇಕಾದಲ್ಲಿ ಗರ್ಭಿಣಿ ಮಹಿಳೆಯರು ಸೇರಿ ಪ್ರತಿ ಮಹಿಳೆಯೂ ಸಾಕಶಃಟು ಪೂರ್ವ ಸಿದ್ದತೆ ಮಾಡಿಕೊಳ್ಳಬೇಕಾಗುತ್ತದೆ. ಇಂತಹಾ ಮಹಿಳೆಯರು ಗರ್ಭಾವಸ್ಥೆ ಸಮಯದಲ್ಲಿ ಆದಷ್ಟು ಕಡಿಮೆ ಅಪಾಯಕರ ಕೆಲಸದಲ್ಲಿ ತೊಡಗುವುದು ಅಗತ್ಯ".  ರೇನ್ಬೋ ಮಕ್ಕಳ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಲಹೆಗಾರ, ಡಾ. ಮಹಿಮಾ ಬಕ್ಷಿ ಹೇಳಿದ್ದಾರೆ.
"ಅಲ್ಲದೆ, ಗರ್ಭಧಾರಣೆಯ ಹಂತಗಳಲ್ಲಿ ಮಗುವಿನ ಆರೋಗ್ಯಕರ ಕಡೆ ಹೆಚ್ಚು ಗಮನ ನೀಡಬೇಕು. ವಿಶೇಷವಾಗಿ ಅಧಿಕ ವಯಸ್ಸಿನ ಮಹಿಳೆಯರು, ಹೆರಿಗೆ ಸಮಯದಲ್ಲಿ ತೊಡಕುಗಳು, ಅಪಾಯಗಳಿಗೆ ಸಿಲುಕುವ ಸಾಧ್ಯತೆಯು ಹೆಚ್ಚಾಗುತ್ತದೆ. ಆದ್ದರಿಂದ, 35 ಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರು ಗರ್ಭಧಾರಣೆ ಅವಧಿಯಲ್ಲಿ ತಮ್ಮನ್ನು ತಾವು ಆರೈಕೆ ಮಾಡಿಕೊಳ್ಳುವಾಗ ಹೆಚ್ಚಿನ ಮುತುವರ್ಜಿವಹಿಸಿಕೊಳ್ಳುವುದು ಮುಖ್ಯವಾಗಿದೆ. ಒಂದೊಮ್ಮೆ ನೀವು ಗರ್ಭವತಿಯಾದರೆ, ನಿಮ್ಮ ಮತ್ತು ನಿಮ್ಮ ಮಗುವಿನ ಆರೈಕೆಗಾಗಿ ಎಲ್ಲ ರೀತಿಯಲ್ಲಿ ಮುಂಜಾಗೃತಿ ವಹಿಸಬೇಕು" ಅವರು ಹೇಳಿದರು.
ಬರಲಿರುವ ಹೊಸ ಅತಿಥಿಗಾಗಿ ಸ್ವಲ ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಿ
  • ನೀವು ಗರ್ಭಿಣಿಯಾದರೆ ನೀವು ಮದ್ಯಪಾನ, ಧೂಮಪಾನ, ಡ್ರಗ್ಸ್ ಗಳಿಂದ ದೂರವಿರಬೇಕು. ನಿಮ್ಮ ಸುತ್ತ ಮುತ್ತ ಇಂತಹಾ ಮಾದಕ ಪದಾರ್ಥಗಳಿರದಂತೆ ಗಮನ ಹರಿಸಿ.
  • ನಿಮ್ಮ ಮಗುವಿನ ಸುರಕ್ಷತೆಗಾಗಿ ಧೂಮಪಾನ ಸಕ್ರಿಯವಾಗಿರುವ ಸ್ಥಳಗಳಿಗೆ ತೆರಳುವುದನ್ನು ತಪ್ಪಿಸಿ.
  • ನಿದ್ರೆಯ ಸಮಸ್ಯೆಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ. ಮಂದ ಬೆಳಕು ಇರುವ ಕೋಣೆಯಲ್ಲಿ ಮಲಗಿ, ಪರಿಮಳಯುಕ್ತ ಕೋಣೆಯಲ್ಲಿ ನಿದ್ರಿಸಲು ಪ್ರಯತ್ನಿಸಿ. ಹೆಡ್ ಮಸಾಜ್ ಮಾಡಿಸಿಕೊಳ್ಳಿ. ಏಕೆಂದರೆ ಒಳ್ಳೆಯ ನಿದ್ರೆ ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯ.
  • ಗರ್ಭಧಾರಣೆ ವೇಳೆ ಯೋಗ್ಯವಾಗಿರಲು ನಿತ್ಯವೂ ವ್ಯಾಯಾಮ ಮಾಡಿ. ನಿಮ್ಮ ಕುಟುಂಬದ ಪ್ರಸೂತಿ-ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ ಮತ್ತು ಗರ್ಭಧಾರಣೆಯ ಫಿಟ್ ನೆಸ್ ತರಬೇತಿ ಪಡೆಯಲು ತಜ್ಞರನ್ನು ಭೇಟಿ ಮಾಡಿ. ಆದರೆ ಮೊದಲ ಮೂರು ತಿಂಗಳು ವರ್ಕ್ ಔಟ್ ಮಾಡುವುದನ್ನು ಆದಷ್ಟು ತಪ್ಪಿಸಿ.
  • ನಿಮ್ಮ ಆರೋಗ್ಯ ಸಂಬಂಧ ವೈದ್ಯರು ನೀಡಿದ್ದ ವರದಿ ಹಾಗು ಸ್ಕ್ಯಾನ್ ಮಾಹಿತಿಯನ್ನು ಯಾವಾಗಲೂ ಗಮನದಲ್ಲಿರಿಸಿಕೊಳ್ಳಿ.
  • ಇಬ್ಬರಿಗೆಂದು ತಿನ್ನಬೇಡಿ, ಆದರೆ ಸರಿಯಾಗಿ ತಿನ್ನಿರಿ. ಎರಡು ಗಂಟೆಗಳ ಅವಧಿಗೊಮ್ಮೆ ಲಘು ಉಪಹಾರ ಸೇವಿಸಿ. cನಿಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣು ಹಾಗೂ ಸಲಾಡ್ ಗಳಿರಲಿ.
  • ನೀವು ಸರಿಯಾದ ಪ್ರಮಾಣದಲ್ಲಿ ದ್ರವಾಹಾರ ಸೇವಿಸುತ್ತಿದ್ದೀರಿ ಎನ್ನುವದನ್ನು ಗಮನದಲ್ಲಿರಿಸಿಕೊಳ್ಳಿ.  ನಿಮ್ಮ ಆಹಾರದಲ್ಲಿ ಉತ್ತಮ ಪ್ರೋಟೀನ್ ಅಂಶಗಳು ಇರುವುದನ್ನು ಖಾತ್ರಿಪಡಿಸಿಕೊಳ್ಳಿ.
  • ಗಂಟೆಗಳ ಕಾಲ ಖಾಲಿ ಹೊಟ್ಟೆಯಲ್ಲಿರುವುದನ್ನು ತಪ್ಪಿಸಿ ಹಾಗೆಯೇ ಭಾರೀ ಪ್ರಮಾಣದಲ್ಲಿ ಊಟ ಮಾಡುವುದನ್ನು ತಪ್ಪಿಸಿ. ಹೆಚ್ಚಾಗಿ ಬೇಯಿಸಿದ ಆಹಾರವನ್ನು ಸೇವಿಸಿ
  • ಕುಳಿತಲ್ಲೇ ಕುಳಿತಿರಬೇಡಿ. ಗಂಟೆಗೊಮ್ಮೆಯಂತೆ ಸ್ವಲ್ಪ ದೂರ ನಡೆಯುತ್ತಿರಿ. ಜತೆಗೆ ದಿನಕ್ಕೊಮ್ಮೆ ಸಾಕಷ್ಟು ದೂರದವರೆಗೆ ನಡೆಯುವ ಅಭ್ಯಾಸವಿರಿಸಿಕೊಳ್ಳಿ. ಇದು ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ ಮತ್ತು ನೈಸರ್ಗಿಕ ಹೆರಿಗೆಗಾಗಿ ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
  • ಹೆರಿಗೆಯ ತಯಾರಿ ತರಗತಿಗಳಿಗೆ ನೀವು ದಾಖಲಾಗಬಹುದು, ಅಲ್ಲಿ ತರಬೇತುದಾರರು ನಿಮಗೆ ಮತ್ತು ನಿಮ್ಮ ಪತಿಗಾಗಿ ನೈಸರ್ಗಿಕ ಹೆರಿಗೆಗೆ ತಯಾರಾಗಲು ಕೆಲವು ತರಬೇತಿ ಕೊಡುತ್ತಾರೆ. 
  • ನೀವು ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಆಗಲು ಪತಿ ಅಥವಾ ನಿಮ್ಮ ಉತ್ತಮ ಗೆಳೆಯರೊಡನೆ ಪ್ರೇರಣಾತ್ಮಕವಾದ ವಿಚಾರಗಳನ್ನು ಚರ್ಚೆ ಮಾಡಿರಿ. ಹಾಗೆ ನಿಮ್ಮ ಭಾವನೆಗಳನ್ನು ಹೊರಹಾಕಿರಿ.
  • ಬೇಬಿ ಶಾಪಿಂಗ್ ಮಾಲ್ ಗಳಿಗೆ ತೆರಳಿ, ನಿಮ್ಮ ಗರ್ಭಧಾರಣೆ ಅವಧಿಯಲ್ಲಿ ನಿಮಗದು ಹೆಚ್ಚು ಸ್ಪೂರ್ತಿ ತುಂಬಲಿದೆ. ನಿಮ್ಮ ಪ್ರಸೂತಿ-ಸ್ತ್ರೀರೋಗತಜ್ಞ ಮತ್ತು ತಜ್ಞರ ಜತೆಗೆ ಹೆರಿಗೆಯ ಸಂಬಂಧ ಸಂಪರ್ಕಿಸಿ ಹಾಗೂ ಆ ಕುರಿತಂತೆ ತಯಾರಿ ನಡೆಸಿ.
  • ನಿಮಗೆ ಇರಬಹುದಾದ ಸಂಧಿ ಹಾಗು ಸ್ನಾಯುವಿನ ಸಮಸ್ಯೆಗಳ ಬಗೆಗೆ, ನಿಮ್ಮ ಕುಟುಂಬ ವೈದ್ಯರೊಡನೆ ಚರ್ಚಿಸಿ, ಅವರು ಹೆರಿಗೆ ಸಮಯದಲ್ಲಿ ಗಾಯಗಳನ್ನು ತಪ್ಪಿಸಲು ನಿಮ್ಮ ಕೀಲುಗಳು ಮತ್ತು ಸ್ನಾಯುಗಳನ್ನು ಬಲಪಡಿಸುವಲ್ಲಿ ಉತ್ತಮ ಸಲಹೆ ನೀಡುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com