ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ದೂರವಿರಬೇಕೇ? ಹಾಗಾದರೆ ರಾತ್ರಿ ವೇಳೆ ಬೇಗನೆ ಊಟ ಮಾಡಿ!

ರಾತ್ರಿ 9 ಗಂಟೆಗಿಂತ ಮುಂಚೆ ಅಂದರೆ ಮಲಗಲು 2 ಗಂಟೆಗಳ ಮುಂಚೆ ಊಟ ಮಾಡುವುದರಿಂದ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಗಳ ಅಪಾಯದಿಂದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಂಡನ್: ರಾತ್ರಿ 9 ಗಂಟೆಗಿಂತ ಮುಂಚೆ ಅಂದರೆ ಮಲಗಲು 2 ಗಂಟೆಗಳ ಮುಂಚೆ ಊಟ ಮಾಡುವುದರಿಂದ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಗಳ ಅಪಾಯದಿಂದ ತಪ್ಪಿಸಿಕೊಳ್ಳಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
ಇಂಟರ್ ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್  ನಲ್ಲಿ ಪ್ರಕಟವಾಗಿರುವಂತೆ, ಸರಿಯಾದ ಸಮಯದಲ್ಲಿ ಆಹಾರ ಸೇವಿಸದೇ ಇದ್ದರೇ ಸ್ತನ ಹಾಗೂ ಜನನೇಂದ್ರಿಯ ಸಂಬಂಧಿ ಕ್ಯಾನ್ಸರ್ ಬರುವ ಸಾಧ್ಯತೆಯಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ಈ ಎರಡು ಕ್ಯಾನ್ಸರ್ ಗಳಿಗೆ ಪ್ರಪಂಚದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ  ಜನ ಬಲಿಯಾಗುತ್ತಿದ್ದಾರೆ, ರಾತ್ರಿ ಪಾಳಿ ಕೆಲಸ, ನಿದ್ದೆಗೆ ಅಡೆತಡೆಯಾಗುವುದರಿಂದ ಈ ಕ್ಯಾನ್ಸರ್ ಬರುವ ಸಾಧ್ಯತೆಯಿರುತ್ತದೆ. 
ಪ್ರತಿಯೊಬ್ಬರ ಬೆಳಗಿನ ಹಾಗೂ ಸಂಜೆಯ ಚಟುವಟಿಕೆಗಳು ವಿಭಿನ್ನವಾಗಿರುತ್ತವೆ, ಹಾಗೂ ಅವರ ಆದ್ಯತೆಗಳು ಕೂಡ ಭಿನ್ನವಾಗಿರುತ್ತವೆ ಎಂದು ಸ್ಪೇನ್ ನ ಬಾರ್ಸಿಲೋನಾ ಗ್ಲೋಬಲ್ ಹೆಲ್ತ್  ಸಂಶೋಧನಾ ಕೇಂದ್ರ ತಿಳಿಸಿದೆ.
621 ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು  1,205 ಸ್ತನ ಕ್ಯಾನ್ಸರ್ ಕೇಸ್ ಗಳಲ್ಲಿ 872 ಪುರುಷರು ಮತ್ತು 1,321 ಮಹಿಳೆಯರನ್ನು ಆಯ್ಕೆ ಮಾಡಲಾಗಿತ್ತು. ಇವರೆಲ್ಲಾ ಸ್ಪೇನ್ನ ವಿವಿಧ ಭಾಗಗಳಿಂದ ಬಂದಿದ್ದರು, ಅವರ ಊಟದ ಸಮಯದ ಬಗ್ಗೆ ಸಂದರ್ಶನ ಮಾಡಲಾಗಿತ್ತು. ಅದರಿಂದ ತಿಳಿದು ಬಂದ ವಿಷಯವೇನೆಂದರೇ ರಾತ್ರಿ ಊಟ ಬೇಗ ಅಂದರೆ ಮಲಗುವ 2 ಗಂಟೆ ಮುಂಚೆ ಆಹಾರ ಸೇವಿಸುವುದರಿಂದ ಕ್ಯಾನ್ಸರ್ ಬರುವ ಅಪಾಯ ಕಡಿಮೆಯಿರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com