ಭಾರತೀಯರಲ್ಲಿ ಸ್ನಾಯು ಸಂಬಂಧಿ ಸಮಸ್ಯೆಗಳಲ್ಲಿ ಹೆಚ್ಚಳ

ಶೇಕಡಾ 71ರಷ್ಟು ಭಾರತೀಯರು ಸ್ನಾಯು ಆರೋಗ್ಯದಿಂದ ಬಳಲುತ್ತಿದ್ದಾರೆ, ಅವರಲ್ಲಿ ಹೈದರಾಬಾದಿನ ನಾಗರಿಕರಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಶೇಕಡಾ 71ರಷ್ಟು ಭಾರತೀಯರು ಸ್ನಾಯು ಆರೋಗ್ಯದಿಂದ ಬಳಲುತ್ತಿದ್ದಾರೆ, ಅವರಲ್ಲಿ ಹೈದರಾಬಾದಿನ ನಾಗರಿಕರಲ್ಲಿ ಶೇಕಡಾ 75ರಷ್ಟು ಮಂದಿ ಸ್ನಾಯು ಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಜಾಗತಿಕ ಮಟ್ಟದ ಸಂಸ್ಥೆಯಾದ ಇನ್ಬೊಡಿ, ಕ್ರೀಡಾಪಟುಗಳಿಗೆ ಅಥವಾ ಜಿಮ್ ಪಟುಗಳಿಗೆ ಮಾತ್ರ ಸ್ನಾಯುಗಳು ಆರೋಗ್ಯವಾಗಿ ಫಿಟ್ ಆಗಿರಬೇಕಾಗಿರುತ್ತದೆ. ಸಾಮಾನ್ಯ ಜನರಿಗೆ ಸ್ನಾಯುಗಳ ಆರೋಗ್ಯ ಅಷ್ಟೊಂದು ಮುಖ್ಯವಲ್ಲ ಎಂಬ ತಪ್ಪು ತಿಳುವಳಿಕೆಯಿಂದ ಸ್ನಾಯುಗಳ ಆರೋಗ್ಯದ ಬಗ್ಗೆ ಗಮನ ನೀಡುವುದಿಲ್ಲ ಎಂದು ಅಧ್ಯಯನದಲ್ಲಿ ತಿಳಿಸಿದೆ.

ಉತ್ತಮ ಜೀವನಶೈಲಿಗೆ ಆರೋಗ್ಯಯುತವಾದ ಸ್ನಾಯುಗಳು ಮಾತ್ರ ಮುಖ್ಯವಾಗಿರುತ್ತದೆ. ಇಪ್ಸೊಸ್ ಎಂಬ ಜಾಗತಿಕ ಮಟ್ಟದ ಮಾರುಕಟ್ಟೆ ಮತ್ತು ಅಭಿಪ್ರಾಯ ಸಂಶೋಧನಾ ಸಂಸ್ಥೆ ಜೊತೆಗೆ ರಾಷ್ಟ್ರಾದ್ಯಂತ ಇತ್ತೀಚೆಗೆ ಅಧ್ಯಯನ ನಡೆಸಿದ ಇನ್ಬೊಡಿ ತನ್ನ ವರದಿಯಲ್ಲಿ ಹೀಗೆ ಹೇಳಿದೆ.

ದೆಹಲಿ, ಕೋಲ್ಕತ್ತಾ, ಚೆನ್ನೈ, ಅಹ್ಮದಾಬಾದ್, ಲಕ್ನೋ, ಪಾಟ್ನಾ ಮತ್ತು ಹೈದರಾಬಾದ್ ನಗರಗಳಲ್ಲಿ 30ರಿಂದ 55 ವರ್ಷದೊಳಗಿನ 1,243 ಜನರ ಮೇಲೆ ಅಧ್ಯಯನ ನಡೆಸಲಾಗಿತ್ತು. ಅಧ್ಯಯನ ಪ್ರಕಾರ, ಶೇಕಡಾ 71 ಭಾರತೀಯರು ಇತ್ತೀಚೆಗೆ ಸ್ನಾಯುಗಳ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಸ್ನಾಯುಗಳ ಅನಾರೋಗ್ಯದಿಂದ ಮನುಷ್ಯನಿಗೆ ದುರ್ಬಲ ಸ್ನಾಯು, ಬಳಲಿಕೆ ಮತ್ತು ಜೀರ್ಣಕ್ರಿಕೆಯಲ್ಲಿ ವ್ಯತ್ಯಾಸ ತಲೆದೋರುತ್ತದೆ. ಅಧ್ಯಯನ ಪ್ರಕಾರ, ಲಕ್ನೋದಲ್ಲಿ ಅತಿಹೆಚ್ಚು ಶೇಕಡಾ 81ಮಂದಿ, ಪಾಟ್ನಾದಲ್ಲಿ ಶೇಕಡಾ 77 ಮಂದಿ, ಹೈದರಾಬಾದ್ ನಲ್ಲಿ ಶೇಕಡಾ 75 ಮಂದಿ ಸ್ನಾಯುಸಂಬಂಧಿ ತೊಂದರೆಯಿಂದ ಬಳಲುತ್ತಿದ್ದಾರೆ.

ಸ್ನಾಯುಗಳ ಆರೋಗ್ಯವನ್ನು ಕಾಪಾಡಲು ಪೌಷ್ಟಿಕಾಂಶ, ಪ್ರೊಟೀನ್ ಯುಕ್ತ ಆಹಾರಗಳ ಸೇವನೆ ಮತ್ತು ವ್ಯಾಯಾಮ ಅತಿ ಮುಖ್ಯವಾಗಿರುತ್ತದೆ ಎಂದು ಅಧ್ಯಯನ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com