ಸೆಕ್ಸ್ ನಂತರ ಸಪ್ಪೆ ಮುಖ ಏಕೆ? ಪುರುಷರಿಗೂ ಈ ಸ್ಥಿತಿಯೇ?

ಸೆಕ್ಸ್ ನಂತರದ ಭಾವನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಅಂಶವೊಂದು ಸಂಶೋಧನೆಯಲ್ಲಿ ಬಹಿರಂಗಗೊಂಡಿದ್ದು, ಸೆಕ್ಸ್ ನಂತರ ಪುರುಷರ ಮುಖ ಸಪ್ಪಗಾಗುತ್ತದೆ ಎಂದು ತಿಳಿದುಬಂದಿದೆ.
ಸೆಕ್ಸ್ ನಂತರ ಸಪ್ಪೆ ಮುಖ ಏಕೆ? ಪುರುಷರಿಗೂ ಈ ಸ್ಥಿತಿಯೇ? (ಸಾಂಕೇತಿಕ ಚಿತ್ರ)
ಸೆಕ್ಸ್ ನಂತರ ಸಪ್ಪೆ ಮುಖ ಏಕೆ? ಪುರುಷರಿಗೂ ಈ ಸ್ಥಿತಿಯೇ? (ಸಾಂಕೇತಿಕ ಚಿತ್ರ)
ಸೆಕ್ಸ್ ನಂತರದ ಭಾವನೆಗಳಿಗೆ  ಸಂಬಂಧಿಸಿದಂತೆ ಮಹತ್ವದ ಅಂಶವೊಂದು ಸಂಶೋಧನೆಯಲ್ಲಿ ಬಹಿರಂಗಗೊಂಡಿದ್ದು, ಸೆಕ್ಸ್ ನಂತರ ಪುರುಷರ ಮುಖ ಸಪ್ಪಗಾಗುತ್ತದೆ ಎಂದು ತಿಳಿದುಬಂದಿದೆ. 
ಇತ್ತೀಚೆಗಷ್ಟೇ ನಡೆದ ಅಧ್ಯಯನದಲ್ಲಿ ಈ ಅಂಶ ಪತ್ತೆಯಾಗಿದ್ದು, ಪುರುಷರಲ್ಲಿ ಉಂಟಾಗುವ ಈ ಸ್ಥಿತಿಗೆ ಪೋಸ್ಟ್ಕೋಟಲ್ ಡೈಸ್ಫೋರಿಯಾ (ಪಿಸಿಡಿ) ಕಾರಣ ಎಂದು ಹೇಳಲಾಗುತ್ತಿದೆ.  ಪಿಸಿಡಿಯ ಕಾರಣದಿಂದಾಗಿ ಸಂಭೋಗದ ನಂತರ ಪುರುಷರಲ್ಲಿ ಭಾವಶೂನ್ಯತೆ, ಖಾಲಿತನ, ದುಃಖದ ರೀತಿಯ ಭಾವನೆ, ಕಿರಿಕಿರಿ ಉಂಟಾಗುತ್ತದೆ ಎನ್ನುತ್ತಿದೆ ಹೊಸ ಸಂಶೋಧನೆ. 
ಅಂತಾರಾಷ್ಟ್ರೀಯ ಅನಾಮಧೇಯ ಆನ್ ಲೈನ್ ಸಮೀಕ್ಷೆಯಲ್ಲಿ ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್, ರಷ್ಯಾ, ನ್ಯೂಜಿಲ್ಯಾಂಡ್, ಜರ್ಮನಿ ಸೇರಿದಂತೆ ವಿವಿಧ ಭಾಗಗಳಿಂದ ಒಟ್ಟು 1,208 ಪುರುಷರು ಭಾಗವಹಿಸಿದ್ದರು, ಜೀವಮಾನದ್ಲಲಿ ಒಮ್ಮೆಯಾದರೂ ಸೆಕ್ಸ್ ನಂತರ ಪಿಸಿಡಿಯನ್ನು ಅನುಭಕ್ಕೆ ಬಂದಿದೆ ಎಂದು ಶೇ.41 ರಷ್ಟು ಪುರುಷರು ಅಭಿಪ್ರಾಯಪಟ್ಟಿದ್ದಾರೆ ಎಂದು ಸಂಶೋಧಕ  ಜೋಯಲ್ ಮ್ಯಾಕ್ಕೊವಿಯಕ್
ಶೇ.20 ರಷ್ಟು ಮಂದಿ ಸಮೀಕ್ಷೆ ನಡೆಯುವುದಕ್ಕೂ ನಾಲ್ಕು ವಾರಗಳ ಹಿಂದೆ ಸೆಕ್ಸ್ ನಂತರ ಪಿಸಿಡಿಯಿಂದ ಉಂಟಾಗುವ ಭಾವನೆ ಅನುಭವಕ್ಕೆ ಬಂದಿದೆ ಎಂದೂ, ಶೇ.4 ರಷ್ಟು ಜನ ಪಿಸಿಡಿ ನಿಯಮಿತವಾಗಿ ಅನುಭವಕ್ಕೆ ಬರುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ. " ಸೆಕ್ಸ್ ನಂತರ ನನ್ನನ್ನು ಯಾರೂ ಮುಟ್ಟಬಾರದು, ಒಂಟಿಯಾಗಿರಬೇಕು, ಚಡಪಡಿಕೆ, ನಾನು ತೊಡಗಿಸಿಕೊಂಡಿದ್ದೆಲ್ಲದರಿಂದಲೂ ಹಿಂದೆಸರಿಯಬೇಕು.... ಹೀಗೆ ವಿದಿಧ ಭಾವನೆಗಳು ಕಾಡುತ್ತವೆ ಎಂದು ಒಂದಷ್ಟು ಪುರುಷರು ಹೇಳಿದರೆ, ಒಂದಷ್ಟು ಪುರುಷರು ಭಾವಶೂನ್ಯತೆ ಆವರಿಸುತ್ತದೆ, ಖಾಲಿತನ ಕಾಡುತ್ತದೆ ಎಂದೂ ಹೇಳಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧವೆಂಬಂತೆ ಅಭಿಪ್ರಾಯ ವ್ಯಕ್ತಪಡಿಸಿರುವ ಪುರುಷರೂ ಇದ್ದು, ಸೆಕ್ಸ್ ನಂಟರ ಸಂತೃಪ್ತಿ ದೊರೆತಿದೆ,  ನನ್ನ ಸಂಗಾತಿಗೆ ನಾನು ಇನ್ನಷ್ಟು ಹತ್ತಿರವಾಗಿದ್ದೇನೆ ಎಂಬ ಭಾವನೆ ಮೂಡಿದೆ ಎಂದಿದ್ದಾರೆ. 
ಮನುಷ್ಯನ ಲೈಂಗಿಕ ಪ್ರತಿಕ್ರಿಯೆ ಚಕ್ರದ ಮೂರು ಹಂತಗಳ ಬಗ್ಗೆ ಸಂಶೋಧಕರು ನಿರಂತರ ಸಂಶೋಧನೆಯಲ್ಲಿ ತೊಡಗಿದ್ದಾರೆ. ಈ ಹಿಂದೆ ನಡೆದ ಸಂಶೋಧನೆಯಲ್ಲಿ ಇಷ್ಟೇ ಪ್ರಮಾಣದ ಮಹಿಳೆಯರಿಗೂ ಸೆಕ್ಸ್ ನಂತರ ನಿಯಮಿತವಾಗಿ ಪಿಸಿಡಿಯಿಂದ ಉಂಟಾಗುವ ಭಾವನೆಗಳು ಅನುಭವಕ್ಕೆ ಬರುತ್ತಿದ್ದವು. ಆದರೆ ಈಗಿನ ವರೆಗೂ ಈ ವಿಷಯದಲ್ಲಿ ಪುರುಷರನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ.  ಈ ರೀತಿಯಾಗುವುದಕ್ಕೆ ಕಾರಣಗಳು ಹಲವಾರಿದ್ದು, ಜೈವಿಕ ಮತ್ತು ಮಾನಸಿಕ ಅಂಶಗಳೂ ಪ್ರಭಾವ ಬೀರುತ್ತವೆ ಎಂದು ಸಂಶೋಧಕರಾದ ಶ್ವೀಟ್ಜರ್ ಹೇಳಿದ್ದಾರೆ.
ಸೆಕ್ಸ್ ನಂತರ ಚುಂಬನ, ಮಾತನಾಡುವುದು, ಮುದ್ದಾಡುವುದನ್ನು ಮಾಡುವ ದಂಪತಿಗಳಲ್ಲಿ ಹೆಚ್ಚಿನ ಲೈಂಗಿಕ ಮತ್ತು ಅನ್ಯೋನ್ಯತೆಯ ತೃಪ್ತಿ  ಹೆಚ್ಚಾಗಿರುತ್ತದೆ. ಆದರೆ ಪಿಸಿಡಿಯಿಂದ ಉಂಟಾಗುವ ಭಾವನೆಗಳು ಆ ವ್ಯಕ್ತಿಗೂ ಹಾಗೂ ಆ ವ್ಯಕ್ತಿಯ ಸಂಗಾತಿಗೂ ಉತ್ತಮವಾದುದ್ದಲ್ಲ, ಬದಲಾಗಿ ಇದರಿಂದ ಸಂಬಂಧಗಳು ಅನ್ಯೋನ್ಯತೆ ಹಾಳಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಶೋಧನಾ ವರದಿ ಜರ್ನಲ್ ಆಫ್ ಸೆಕ್ಸ್ ಅಂಡ್ ಮೇರಿಟಲ್ ಥೆರಪಿಯಲ್ಲಿ ಪ್ರಕಟವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com