ಹೃದಯ ವೈಫಲ್ಯವನ್ನು ಸಾರ್ವಜನಿಕ ಆರೋಗ್ಯ ಆದ್ಯತೆಯಾಗಿ ಗುರುತಿಸಬೇಕು: ಪರಿಣಿತರು

ಹೃದಯ ವೈಫಲ್ಯವನ್ನು ಸಾರ್ವಜನಿಕ ಆರೋಗ್ಯ ಆದ್ಯತೆಯಾಗಿ ಗುರುತಿಸಬೇಕು: ಪರಿಣಿತರು

ಹೃದಯ ವೈಫಲ್ಯವೆನ್ನುವುದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ವಿಶ್ವಾದ್ಯಂತ ಸುಮಾರು 26 ದಶಲಕ್ಷ ಜನರನ್ನು ಕಾಡುತ್ತಿರುವ ಸಮಸ್ಯೆ.
Published on

ಹೃದಯ ವೈಫಲ್ಯವೆನ್ನುವುದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ವಿಶ್ವಾದ್ಯಂತ ಸುಮಾರು 26 ದಶಲಕ್ಷ ಜನರನ್ನು ಕಾಡುತ್ತಿರುವ ಸಮಸ್ಯೆ. ಹೃದಯ ವೈಫಲ್ಯ ಕಾಯಿಲೆಯ ಹೊರೆ ಭಾರತದಲ್ಲಿ ಸುಮಾರು 10 ದಶಲಕ್ಷ. ದೇಶದ  ಪ್ರಮುಖ ಹೃದಯರೋಗ ತಜ್ಞರು ಭಾರತದಲ್ಲಿ ಹೃದಯ ವೈಫಲ್ಯವನ್ನು ಸಾರ್ವಜನಿಕ ಆರೋಗ್ಯ ಆದ್ಯತೆಯಾಗಿ  ಗುರುತಿಸುವ ತುರ್ತು ಅವಶ್ಯಕತೆ ಇದೆ ಎನ್ನುತ್ತಾರೆ. ರೋಗಪತ್ತೆಯಾದ ಒಂದು ವರ್ಷದೊಳಗೆ ಹೃದಯ ವೈಫಲ್ಯವು ಭಾರತೀಯ ರೋಗಿಗಳ ಪೈಕಿ 23% ಜನರನ್ನು ಬಲಿ ತೆಗೆದುಕೊಳ್ಳುತ್ತದೆ.
ಹೃದಯ ವೈಫಲ್ಯ ಕಾಯಿಲೆಯು ದೀರ್ಘಕಾಲಿಕ/ಪ್ರಗತಿಯಾಗುತ್ತ ಹೋಗುವ ಸ್ಥಿತಿಯಾಗಿದ್ದು, ಹೃದಯವನ್ನು ಪಂಪ್ ಮಾದುವುದಕ್ಕೆ ಕಾರಣವಾದ ಸ್ನಾಯುಗಳು ಕೃಶವಾಗುತ್ತವೆ ಅಥವಾ ಕಾಲಾಂತರದಲ್ಲಿ ಗಡುಸಾಗುತ್ತ ಹೋಗುತ್ತವೆ.

ಬೆಂಗಳೂರಿನ ಶ್ರೀ ಜಯದೇವ ಹೃದಯನಾಳೀಯ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯ ಹೃದ್ರೋಗ ಶಾಸ್ತ್ರ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರ ಪ್ರಕಾರ, “ದಕ್ಷಿಣ ಪೂರ್ವ ಏಷಿಯಾದಲ್ಲಿ ಶ್ರೀ ಜಯದೇವ ಹೃದಯನಾಳೀಯ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆ ಹೃದಯ ಆರೈಕೆಗೆ ಅತಿದೊಡ್ಡ ಆಸ್ಪತ್ರೆ. 2017 ರಲ್ಲಿ, ತೀವ್ರ ಹೃದಯರೋಗ ಘಟಕಕ್ಕೆ ದಾಖಲಾದ ರೋಗಿಗಳ ಪೈಕಿ 2000 ರೋಗಿಗಳು ಹೃದಯ ವೈಫಲ್ಯದಿಂದ ಬಳಲುತ್ತಿದ್ದರು. ಇವರ ಪೈಕಿ ಪುರುಷರ ಪ್ರಮಾಣ 65% ಮತ್ತು ಮಹಿಳೆಯರ ಪ್ರಮಾಣ 35%”.

ಈ ಕಾಯಿಲೆಯು ಪ್ರಮುಖವಾದ ಹಾಗೂ ಗಂಭೀರವಾದ ಆರೋಗ್ಯ-ಹಣಕಾಸು ಹೊರೆಯನ್ನು ತರುವಂಥದ್ದು. ಪ್ರತಿವರ್ಷ ಈ ಕಾಯಿಲೆಯ ವಿಶ್ವ ಆರ್ಥಿಕ ಹೊರೆ 108 ಬಿಲಿಯನ್ ಡಾಲರ್. ಇದರಲ್ಲಿ ನೇರ ಹಾಗೂ ಪರೋಕ್ಷ ವೆಚ್ಚಗಳು ಒಳಗೊಂಡಿವೆ. ಮುಂದುವರೆಸುತ್ತಾ ಡಾ. ಸಿ.ಎನ್. ಮಂಜುನಾಥ್ ಹೇಳುತ್ತಾರೆ, “ಮತ್ತೆ ಮತ್ತೆ ಆಸ್ಪತ್ರೆಗೆ ದಾಖಲಾಗುವ ಹೃದಯ ಸಂಬಂಧಿತ ಕಾಯಿಲೆಗಳಲ್ಲಿ ಗೃದಯ ವೈಫಲ್ಯ ಮುಖ್ಯ ಕಾರಣವಾಗಿದೆ. ಇದು ರೋಗಿಗಳಿಗಷ್ಟೇ ನರಳಾಟ ತರುವಂಥದ್ದಲ್ಲ , ಜೊತೆಗೆ ಕುಟುಂಬದ ಆರ್ಥಿಕ ಭಾರವನ್ನೂ ಹೆಚ್ಚಿಸುತ್ತದೆ. ಸಾವಿನ ಪ್ರಮಾಣ ಹೆಚ್ಚಾಗಲು ಇದೂ ಒಂದು ಮುಖ್ಯ ಕಾರಣ”.

ಭಾರತದ ಕಾರ್ಡಿಯೋಲಾಜಿಕಲ್ ಸೊಸೈಟಿಯ ಅಧ್ಯಕ್ಷ ಡಾ. ಕೆ. ಸರತ್ ಚಂದ್ರ ಅವರ ಪ್ರಕಾರ, “ ಭಾರತೀಯ ರೋಗಿಗಳಲ್ಲಿ ಅಧಿಕ ಸಾವುಗಳೊಂದಿಗೆ ಹೃದಯ ವೈಫಲ್ಯವು ಪ್ರಗತಿಯಾಗುವ ಕಾಯಿಲೆಯಾದ್ದರಿಂದ, ಹೃದಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚಿಂತಿಸುವ ಮತ್ತು ಆತಂಕಪಡುವ ಕಾರಣಗಳಿವೆ. ಭಾರತದಲ್ಲಿ ಹೃದಯ ವೈಫಲ್ಯವನ್ನು ಸಾರ್ವಜನಿಕ ಆರೋಗ್ಯ ಆದ್ಯತೆಯಾಗಿ  ಗುರುತಿಸುವ ತುರ್ತು ಅವಶ್ಯಕತೆ ಇದೆ. ಇಂದು, ಹೃದಯ ವೈಫಲ್ಯಕ್ಕೆ ಅತ್ಯಾಧುನಿಕ ಚಿಕಿತ್ಸಾ ವಿಕಲ್ಪಗಳು ಲಭ್ಯವಿದೆ. ಜೀವನಶೈಲಿ ಬದಲಾವಣೆ ಕಡ್ಡಾಯ . ಜೊತೆಗೆ ಔಷಧಿಗಳ ಸೇವನೆಯಿಂದ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು, ಜೀವನ ಗುಣಮಟ್ಟ ಸುಧಾರಿಸಬಹುದು ಮತ್ತು ಸಾವಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ.”

ಪ್ರಕಟಿಸಿರುವ ಅಧ್ಯಯನದಲ್ಲಿ, ಹೃದಯ ವೈಫಲ್ಯಕ್ಕೆ ಚಿಕಿತ್ಸೆ ನೀಡುವಲ್ಲಿ ಕಂಡುಹಿಡಿಯಲಾದ ಅತ್ಯಾಧುನಿಕ ಚಿಕಿತ್ಸೆಯ ವಿಕಲ್ಪಗಳು , 8 ತಿಂಗಳ ಅವಧಿಯಲ್ಲಿ ಹೃದಯ ವೈಫಲ್ಯವಿರುವ ರೋಗಿಗಳಲ್ಲಿ ದೈಹಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ 10 ರಲ್ಲಿ 7 ಜನರಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು. ಅಧ್ಯಯನ ಮುನ್ನಡೆಸಿದ ಮೂರು ವರ್ಷಗಳ ಅನುಸರಣಾ ಅವಧಿಯಲ್ಲಿ ರೋಗಿಯ ಜೀವನ ಗುಣಮದಲ್ಲಿ ಸುಧಾರಣೆ ಮುಂದುವರೆದಿತ್ತು.

ದೈನಂದಿನ ಚಟುವಟಿಕೆಗಳ ಚಿಕಿತ್ಸೆಯ ಧನಾತ್ಮಕ ಫಲಿತಾಂಶ ವನ್ನು ವಿಶ್ಲೇಷಣೆಯು ಸಂಶೋಧಿಸಿದ್ದು , ಹೃದಯ ವೈಫಲ್ಯವಿರುವ ರೋಗಿಗಳ ಜೀವನ ಗುಣಮಟ್ಟ ಕೊನೆಗೂ ಸುಧಾರಣೆ ಕಂಡಿತು ಎನ್ನುತ್ತದೆ.

  • ಉಡುಪು ಧರಿಸುವುದು
  • ಸ್ನಾನ
  • ಮೆಟ್ಟಿಲು ಹತ್ತುವುದು
  • 100 ಮೀಟರ್ ನಡೆಯುವುದು
  • ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಭೇಟಿಯಗೌವುದು
  • ಜಾಗಿಂಗ್
  • ಕೈತೋಟದ ಕೆಲಸ
  • ಹವ್ಯಾಸಗಳು
  • ಮನೆಗೆಲಸ ಮಾಡುವುದು
  • ನಿಕಟ/ಲೈಂಗಿಕ ಸಂಬಂಧ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com