ಬೆನ್ನು ನೋವಿನ ಸಮಸ್ಯೆಯಿಂದ ಜೀವನದ ಗುಣಮಟ್ಟ ಹಾಳಾಗುವುದಷ್ಟೇ ಅಲ್ಲದೇ ದಿನನಿತ್ಯದ ಕೆಲಸಗಳಿಗೂ ಅಡಚಣೆ ಉಂತಾಗುತ್ತದೆ. ಬೆನ್ನು ಮೂಳೆಯ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅತ್ಯುತ್ತಮ. ಬೆನ್ನು ಮೂಳೆಯ ಆರೋಗ್ಯದ ಬಗ್ಗೆ ಆಕಾಶ್ ಹೆಲ್ತ್ ಕೆರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆರ್ಥೋಪೆಡಿಕ್ ಸರ್ಜನ್ ಡಾ. ಆಶಿಶ್ ಚೌಧರಿ ಮಾತನಾಡಿದ್ದು, ಮೊಬೈಲ್ ಫೋನ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಬಳಕೆಯಿಂದಾಗಿ ಬೆನ್ನೆಲುಬಿನ ಆರೋಗ್ಯ ಹದಗೆಡಲಿದೆ. ಯಾವಾಗಲೂ ಈ ರೀತಿಯ ಗ್ಯಾಡ್ಜೆಟ್ಸ್ ಗಳನ್ನು ಬಳಕೆ ಮಾಡುವುದು ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಬೆನ್ನು, ಕುತ್ತಿಗೆ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.