ತಮ್ಮ ತಂದೆಯಂತೆ ಕಾಣುವ ಶಿಶುಗಳು ಹೆಚ್ಚು ಆರೋಗ್ಯವಂತರಾಗುತ್ತಾರೆ: ಅಧ್ಯಯನ

ತಮ್ಮ ತಂದೆಯಂತೆ ಕಾಣುವ ಶಿಶುಗಳು ಹೆಚ್ಚು ಆರೋಗ್ಯವಂತರಾಗುತ್ತಾರೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್ : ತಮ್ಮ ತಂದೆಯಂತೆ ಕಾಣುವ ಶಿಶುಗಳು ಹೆಚ್ಚು ಆರೋಗ್ಯವಂತರಾಗುತ್ತಾರೆ  ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಅಂತಹ  ಶಿಶುಗಳು ತಮ್ಮ ತಂದೆಯೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಹೆಚ್ಚು ಆರೋಗ್ಯವಂತಾಗಿರುತ್ತಾರೆ ಎಂದು ಆರ್ಥಿಕ ಆರೋಗ್ಯಕ್ಕೆ ಸಂಬಂಧಿಸಿದ ನಿಯತಕಾಲಿಕೆ ತಿಳಿಸಿದೆ.

ಮಕ್ಕಳ ಬೆಳವಣಿಗೆಯಲ್ಲಿ ತಂದೆ ಪ್ರಮುಖ ಪಾತ್ರ ವಹಿಸುತ್ತಾರೆ. ಇದು ಸ್ವಯಂಪ್ರೇರಣೆಯಾಗಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಸಂಶೋಧನೆಯಿಂದ ತಿಳಿದುಬಂದಿದೆ ಎಂದು ನ್ಯೂಯಾರ್ಕಿನ ಬಿಂಗ್ ಹ್ಯಾಮ್ ಟನ್ ವಿಶ್ವವಿದ್ಯಾಲಯದ ಪ್ರೋಫೆಸರ್ ಸೊಲೊಮನ್ ಪೊಲಾಚೆಕ್ ಹೇಳಿದ್ದಾರೆ.

ಮಗು ತಾಯಿ ಜೊತೆಯಲ್ಲಿರುವ 715 ಕುಟುಂಬಗಳನ್ನು ಹಾಗೂ ತಂದೆಯ ಜೊತೆಗಿರುವ ಶಿಶುಗಳನ್ನು ಸಂಶೋಧನೆಗೊಳಪಡಿಸಲಾಗಿದ್ದು, ತಂದೆಯಂತೆ ಕಾಣುವ ಶಿಶುಗಳು ಹೆಚ್ಚು ಆರೋಗ್ಯವಾಗಿರುವುದು ಕಂಡುಬಂದಿದೆ. ವಿಶೇಷವಾಗಿ ದುರ್ಬಲ ಕುಟುಂಬವನ್ನೂ ಕೂಡಾ ಈ ಅಧ್ಯಯನಕ್ಕೆ ಬಳಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ಲಾಲನೆ ಪಾಲನೆಯಲ್ಲಿ ತಂದೆ  ವಿಶೇಷವಾದ ಗಮನ ತೆಗೆದುಕೊಳ್ಳುವುದರಿಂದ ತಂದೆಯಂತೆ ಕಾಣುವ ಶಿಶುಗಳು ಹೆಚ್ಚು ಆರೋಗ್ಯವಂತರಾಗಿರುವುದು ಕಂಡುಬಂದಿದೆ. ಮನೆಯಲ್ಲಿ ಹೆಚ್ಚು ಕಾಲ ಇಲ್ಲದ ತಂದೆಯವರಲ್ಲಿಯೂ  ಈ ಬಗ್ಗೆ ಸಕಾರಾತ್ಮಕ ಧೋರಣೆ ಮೂಡಿಸುವಲ್ಲಿ ಈ ಅಧ್ಯಯನ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com