ತಂಬಾಕಿನ ಹೊಗೆ ನಿಮ್ಮ ಹೃದಯದ ಮೇಲೆ ಹೇಗೆ ಪರಿಣಾಮ ಬೀರಬಹುದು

ಸಿಗರೇಟು ಎಳೆಯುವುದರಿಂದ ಹೊಗೆ ನೇರವಾಗಿ ಶ್ವಾಸಕೋಶಕ್ಕೆ ಹೋಗುವುದರಿಂದ ಶ್ವಾಸಕೋಶ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಸಿಗರೇಟು ಎಳೆಯುವುದರಿಂದ ಹೊಗೆ ನೇರವಾಗಿ ಶ್ವಾಸಕೋಶಕ್ಕೆ ಹೋಗುವುದರಿಂದ ಶ್ವಾಸಕೋಶ ಮಾತ್ರವಲ್ಲದೆ ಇಡೀ ಹೃದಯ ರಕ್ತನಾಳದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಹೃದಯ ಕಾಯಿಲೆ ಬರಲು ಅಧಿಕ ರಕ್ತದ ಒತ್ತಡದ ನಂತರ ತಂಬಾಕು ಸೇವನೆ ಎರಡನೇ ಕಾರಣವಾಗುತ್ತದೆ. ವಿಶ್ವಾದ್ಯಂತ ಸುಮಾರು ಶೇಕಡಾ 12ರಷ್ಟು ಹೃದಯಾಘಾತ ಸಾವುಗಳು ತಂಬಾಕಿನ ಸೇವನೆ ಮತ್ತು ಸಿಗರೇಟು ಸೇವನೆಯಿಂದ ಉಂಟಾಗುತ್ತದೆ.

ತಂಬಾಕಿನ ಸಿಗರೇಟಿನಲ್ಲಿ 900 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಉತ್ಪಾದಿಸುವ ಸಾವಯವ ವಸ್ತುಗಳ ಸುಡುವಿಕೆಯಿದೆ. ತಂಬಾಕನ್ನು ಸೇವಿಸುತ್ತಾ ಹೋದರೆ ದೀರ್ಘಾವಧಿಯಲ್ಲಿ ರಕ್ತನಾಳಗಳನ್ನು ದಪ್ಪವಾಗಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ರಕ್ತನಾಳಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದ ರಕ್ತ ನಾಳಗಳಲ್ಲಿ ಹೆಪ್ಪುಗಟ್ಟಿ ಅಂತಿಮವಾಗಿ ಪಾರ್ಶ್ಯವಾಯು ಅಥವಾ ಬಾಹ್ಯ ಹೃದ್ರೋಗ ಬರಬಹುದು.

ತಂಬಾಕು ಸೇವಿಸುತ್ತಿರುವವರ ಹೃದಯದಲ್ಲಿ ಅಥೆರೊಮಾ ಎಂಬ ದಪ್ಪ ಕೊಬ್ಬು ಸಂಗ್ರಹವಾಗುತ್ತದೆ. ಇದು ನಂತರ ಅಪಧಮನಿಗಳ ಒಳ ರೇಖೆಗೆ ಹಾನಿ ಮಾಡುತ್ತದೆ ಮತ್ತು ಅವುಗಳನ್ನು ಮತ್ತಷ್ಟು ಕಿರಿದಾಗಿಸುತ್ತದೆ ಎನ್ನುತ್ತಾರೆ ಧಲ್ಲ್ ಆಸ್ಪತ್ರೆಯ ಹೃದ್ರೋಗ ತಜ್ಞ ಮತ್ತು ನಿರ್ದೇಶಕ ತಪನ್ ಘೋಷ್.

ಅಪಧಮಿನಿಗಳ ಒಳ ರೇಖೆ ಕಿರಿದಾದರೆ ಗಂಟಲೂತ, ಪಾರ್ಶ್ವವಾಯು ಅಥವಾ ಹೃದ್ರೋಗ ಉಂಟಾಗುವ ಸಾಧ್ಯತೆಯಿದೆ. ಅಲ್ಲದೆ ಸಿಗರೇಟಿನಲ್ಲಿರುವ ನಿಕೊಟಿನ್ ನಿಂದ ರಕ್ತದೊತ್ತಡ ಹೆಚ್ಚಾಗಿ ಹೃದಯದಲ್ಲಿ ಹರಿದಾಡುವ ಆಮ್ಲಜನಕ ಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿಕೊಟಿನ್ ನಿಂದ ರಕ್ತನಾಳಗಳು ದಪ್ಪಾಗಿ ರಕ್ತ ಸರಿಯಾಗಿ ಚಲಿಸಲು ಅಡ್ಡಿಯುಂಟಾಗುತ್ತದೆ. ಅಲ್ಲದೆ ಅಧಿಕ ರಕ್ತದೊತ್ತಡ ಅಥವಾ ಅಧಿಕ ಒತ್ತಡಕ್ಕೂ ಕಾರಣವಾಗಬಹುದು ಎನ್ನುತ್ತಾರೆ ಅಪೊಲೊ ಆಸ್ಪತ್ರೆಯ ಹಿರಿಯ ಸಲಹೆಗಾರ ಮುಕೇಶ್ ಗೋಯೆಲ್.

ತಂಬಾಕಿನಲ್ಲಿರುವ ಕಾರ್ಬನ್ ಮೊನೊಕ್ಸೈಡ್ ರಕ್ತದಲ್ಲಿ ಹಿಮೋಗ್ಲೋಬಿನ್ ಜೊತೆ ಆಮ್ಲಜನಕಕ್ಕಿಂತ ಸುಲಭವಾಗಿ ಬೆರೆಯುತ್ತದೆ. ಹೀಗಾಗಿ ದೇಹದಲ್ಲಿ ಆಮ್ಲಜನಕದ ಪೂರೈಕೆ ಮೇಲೆ ಪರಿಣಾಮ ಬೀರುತ್ತದೆ.

ತಂಬಾಕಿನಿಂದ ಬರುವ ಕಾಯಿಲೆಯನ್ನು ತಡೆಗಟ್ಟಬೇಕಾದರೆ ತಂಬಾಕು ಮತ್ತು ಸಿಗರೇಟು ಸೇವನೆಯಿಂದ ದೂರವುಳಿಯುವುದೇ ಪರಿಹಾರ ಎನ್ನುತ್ತಾರೆ ವೈದ್ಯರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com