ಆರೋಗ್ಯಕರ ಹೃದಯಕ್ಕಾಗಿ ಈ ಸಲಹೆಗಳನ್ನು ಅಳವಡಿಸಿಕೊಳ್ಳಿ!

ಕೆಲವೊಂದು ಅರೋಗ್ಯಕರ ಜೀವನ ಶೈಲಿ ವಿಧಾನ ಅಳವಡಿಸಿಕೊಳ್ಳುವ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳು ಹತ್ತಿರ ಸುಳಿಯದಂತೆ ಮುನ್ನಚ್ಚರಿಕೆ ವಹಿಸಬೇಕಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ನಮ್ಮ ದೇಶದಲ್ಲಿ  ಹೃದಯ ಸಂಬಂಧಿತ ಸಾವುಗಳು ಸಾಮಾನ್ಯ ಎಂಬಂತಾಗಿದೆ. ಮಧುಮೇಹ, ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್, ಧೂಮಪಾನ ಹಾಗೂ ಅನುವಂಶಿಕ ಅಂಶಗಳು ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಲು ಕಾರಣವಾಗುತ್ತಿವೆ.

ಅನಾರೋಗ್ಯಕರ ಜೀವನಶೈಲಿ ಅಭ್ಯಾಸ ಕೂಡಾ  ಹೃದಯ ಸಂಬಂಧಿತ ಕಾಯಿಲೆಗೆ ಕಾರಣವಾಗಿದೆ. ಆಗ್ನೇಯ ಏಷ್ಯಾದ ಜನರಲ್ಲಿ ಅನುವಂಶಿಕ ಕಾರಣದಿಂದ  ಹೃದಯ ಸಂಬಂಧಿ ರೋಗಗಳು  ಮೊದಲಿಗೆ ಹೆಚ್ಚಾಗಿತ್ತು. ಆರೋಗ್ಯಕರ ಜೀವನಶೈಲಿಯಿಂದ ಇದನ್ನು  ತಡೆಗಟ್ಟಬಹುದಾಗಿದೆ.

ಆದಾಗ್ಯೂ, ಕೆಲವೊಂದು ಅರೋಗ್ಯಕರ ಜೀವನ ಶೈಲಿ ವಿಧಾನ ಅಳವಡಿಸಿಕೊಳ್ಳುವ ಮೂಲಕ  ಹೃದಯ ಸಂಬಂಧಿತ ಕಾಯಿಲೆಗಳು ಹತ್ತಿರ ಸುಳಿಯದಂತೆ ಮುನ್ನಚ್ಚರಿಕೆ ವಹಿಸಬೇಕಾಗಿದೆ.

ಈ ಸಂಬಂಧ ದೆಹಲಿಯ ಇಂದ್ರಪ್ರಸ್ಥಅಪೊಲೊ ಆಸ್ಪತ್ರೆಯ ವೈದ್ಯ ಡಾ. ರಾಜೀವ್ ರಜಪೂತ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಆರೋಗ್ಯಕರ ಆಹಾರ ಸೇವನೆ: ಆರೋಗ್ಯಕರ ಆಹಾರ ಸೇವನೆ ಅತಿ ಮುಖ್ಯವಾಗಿದೆ. ಸಮತೋಲಿನ ಆಹಾರದಿಂದ ದೇಹಕ್ಕೆ ಅಗತ್ಯವಾದ ಪೌಷ್ಠಿಕಾಂಶಗಳು ದೊರೆಯುತ್ತವೆ. ಆದರೆ, ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶ ಇರುವ ಜಂಕ್ ಪುಡ್ , ಉಪ್ಪು, ಸಕ್ಕರೆಯಿಂದ ಹೃದಯ ಕೆಡುತ್ತದೆ. ಇದರ ಬಗ್ಗೆ ಸೆಕೆಂಡ್ ಕೂಡಾ ಯೋಚಿಸದೆ ಜನರು ಸೇವನೆ ಮಾಡುವುದು ದುರದೃಷ್ಟಕರ. ದೇಹಕ್ಕೆ ಅಗತ್ಯವಾದಷ್ಟು ಕ್ಯಾಲೋರಿಯ ಆಹಾರದಲ್ಲಿ ಪ್ರೋಟೀನ್, ವಿಟಮಿನ್, ಖನಿಜಾಂಶ , ಹಾಗೂ ಕಡಿಮೆ ಪ್ರಮಾಣದ ಕೊಬ್ಬಿನಾಂಶ ಇರಬೇಕಾಗುತ್ತದೆ.

 ಜಡ ಜೀವನಶೈಲಿಯಿಂದ ಹೊರಬನ್ನಿ :ಅನೇಕ ಜನರು ನಿಯಮಿತವಾಗಿ ವ್ಯಾಯಾಮ ಮಾಡುವುದಿಲ್ಲ. ನಿರರ್ಥಕ ಜಡ ಜೀವನಶೈಲಿಯೂ ಹೃದಯ ಸಂಬಂಧಿತ ರೋಗಕ್ಕೆ ಕಾರಣವಾಗಿದೆ. ಬೊಚ್ಚು ಹೆಚ್ಚಾದ್ದಂತೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಹೃದಯ ಸಂಬಂಧಿ  ಕಾಯಿಲೆಗಳು ಹೆಚ್ಚಾಗುತ್ತವೆ.

ಪ್ರತಿದಿನ ವ್ಯಾಯಾಮ  :ಹೃದಯವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ವ್ಯಾಯಾಮ ಪ್ರಮುಖ ಪಾತ್ರ ವಹಿಸುತ್ತದೆ. ಕಾರ್ಡಿಯೋ - ವ್ಯಾಯಾಮದಿಂದ   ಪಂಪಿಂಗ್ ಜಾಸ್ತಿಯಾಗಿ ಹೃದಯದ ಸ್ನಾಯುಗಳು ಬಲಿಷ್ಟಗೊಳ್ಳುತ್ತವೆ. ಪ್ರತಿದಿನ ವ್ಯಾಯಾಮ ಮಾಡುವುದರಿಂದ ರಕ್ತದೊತ್ತಡ , ಕೊಲೆಸ್ಟರಾಲ್, ಕಡಿಮೆಯಾಗಿ  ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲಿತ ಪ್ರಮಾಣದಲ್ಲಿ ಇಡುತ್ತದೆ.

 ಆದಷ್ಟು  ಒತ್ತಡವನ್ನು ಕಡಿಮೆ ಮಾಡಿ :ನಗರ ಪ್ರದೇಶದಲ್ಲಿ ವಾಸಿಸುವ  ಬಹುತೇಕ ಮಂದಿ ಒತ್ತಡದಿಂದ ಬಳಲುತ್ತಿರುತ್ತಾರೆ.  ಇಂತಹ ಒತ್ತಡ ಸಂದರ್ಭದಲ್ಲಿ ಪ್ರತಿಯೊಂದು ಅಂಗಾಂಗಳು  ಪರಿಣಾಮಕ್ಕೊಳಗಾಗುತ್ತವೆ. ಅಡ್ರಿನಾಲೈನಂತಹ ಹಾರ್ಮೋನುಗಳು ದೇಹದಲ್ಲಿ ಹರಿಯುತ್ತವೆ. ಒತ್ತಡ ಬಯಸುವ ಕೆಲಸದಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ.

7-8 ಗಂಟೆ ಸುಖ ನಿದ್ರೆ ಅತ್ಯಗತ್ಯ :ಸಮಯದ ಅಭಾವದಿಂದ ಕೆಲ ಜನರು ಕಡಿಮೆ ನಿದ್ರೆ ಮಾಡುತ್ತಾರೆ . ಇಂತಹ ಅಭ್ಯಾಸದಿಂದ  ದೇಹಕ್ಕೆ ವಿಶೇಷವಾಗಿ ಹೃದಯಕ್ಕೆ  ತೊಂದರೆಯಾಗುತ್ತದೆ.  ದಿನಕ್ಕೆ 7 ರಿಂದ 8 ಗಂಟೆ ಕಾಲ ನಿದ್ರೆ ಮಾಡುವುದು  ಆರೋಗ್ಯಕ್ಕೆ ಉತ್ತಮ. ಇದರಿಂದಾಗಿ ಹೃದಯಕ್ಕೆ ಸಂಬಂಧಿತ ರೋಗಗಳನ್ನು ತಡೆಗಟ್ಟಬಹುದಾಗಿದೆ.

 ಧೂಮಪಾನ, ಮಧ್ಯಪಾನ ತ್ಯಜಿಸಿ :ತಂಬಾಕು ಸೇವನೆಯಿಂದ ಹೃದಯ ಹಾನಿಯಾಗುತ್ತದೆ. ಧೂಮಪಾನದಿಂದ ಹೃದಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.  ಧೂಮಪಾನ ಹೊಗೆ ಸೇವನೆ ಕೂಡಾ  ಹಾನಿಕಾರಕ. ಮಧ್ಯಪಾನದಿಂದ ಲಿವರ್ ಹಾನಿಗೊಂಡು ಬೇಗನೆ ಸಾವು ಬರಬಹುದು.

 ನಿಯಮಿತ ತಪಾಸಣೆ :ನಿಯಮಿತ ಆರೋಗ್ಯ ತಪಾಸಣೆಯಿಂದ ಪ್ರಮುಖ ರೋಗಗಳು ಬಾರದಂತೆ ತಡೆಗಟ್ಟಬಹುದು. ಆರಂಭಿಕ ಹಂತದಲ್ಲಿಯೇ ತಪಾಸಣೆ ಮೂಲಕ   ಹೃದಯ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು. ಆ ಮೂಲಕ  ಸಮಸ್ಯೆ ದೊಡ್ಡದಾಗದಂತೆ ಮುಂಜಾಗ್ರತೆ ವಹಿಸಬಹುದು. ನಿಯಮಿತ ತಪಾಸಣೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com