ತಾಯಿಯ ಮುಟ್ಟಿನ ವಯಸ್ಸಿಗೂ ಪುತ್ರನ ಪ್ರೌಢಾವಸ್ಥೆ ವಯಸ್ಸಿಗೂ ಇದೆ ನಂಟು!

ಮಹಿಳೆಯೊಬ್ಬಳು ತನ್ನ ಮೊದಲ ಮುಟ್ಟಿನ ಅನುಭವವನ್ನು ಹೊಂದುವ ವಯಸ್ಸು ಹಾಗೂ ಆಕೆಯ ಪುತ್ರ ಪ್ರೌಢಾವಸ್ಥೆ ಅನುಭವಿಸುವ ವಯಸ್ಸು ಒಂದಕ್ಕೊಂದು....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಮಹಿಳೆಯೊಬ್ಬಳು  ತನ್ನ ಮೊದಲ ಮುಟ್ಟಿನ ಅನುಭವವನ್ನು ಹೊಂದುವ ವಯಸ್ಸು ಹಾಗೂ ಆಕೆಯ ಪುತ್ರ ಪ್ರೌಢಾವಸ್ಥೆ ಅನುಭವಿಸುವ ವಯಸ್ಸು ಒಂದಕ್ಕೊಂದು ಸಂಬಂಧ ಹೊಂದಿದೆ ಎಂದು ಇತ್ತೀಚಿನ ಸಂಶೋಧನೆ ಬಹಿರಂಗಪಡಿಸಿದೆ.
ಆದರೆ ತಾಯಂದಿರು ತಮ್ಮ ವಯಸ್ಸಿನ ಹೆಣ್ಣು ಮಗಳೊಡನೆ ಹೆಚ್ಚು ಸಂಬಂಧ ಹೊಂದಿದ್ದಾರೆ ಆದರೆ  ಅವರ ಪುತ್ರರ ಪ್ರೌಢಾವಸ್ಥೆಯ ಕುರಿತು  ಸಂಬಂಧದ ಬಗ್ಗೆ ಅಷ್ಟೇನೂ ಸ್ಪಷ್ಟತೆ ಇಲ್ಲ.
ಹ್ಯೂಮನ್ ರಿಪ್ರೊಡಕ್ಷನ್ ಎನ್ನುವ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆ ವರದಿ ಪ್ರಕಾರ ಮಹಿಳೆಯರು ತಮ್ಮ ವಯಸ್ಸಿನವರಿಗಿಂತ ತಮ್ಮ ವಯಸ್ಸಿಗಿಂತ ಮುಂಚಿತವಾಗಿ ಮುಟ್ಟಿನ ರಕ್ತಸ್ರಾವವನ್ನು ಹೊಂದಿರುವ ತಾಯಂದಿರಿಗೆ ತಮ್ಮ ಸಹವರ್ತಿಗಿಂತ ಮುಂಚಿತವಾಗಿ ಪ್ರೌಢಾವಸ್ಥೆ ಹೊಂದಿದ ಮಗನಿದ್ದರೆಂದು ಸೂಚಿಸಿದೆ.
"ತಾಯಂದಿರಲ್ಲಿ ಮೊದಲ ಮುಟ್ಟಿನ ರಕ್ತಸ್ರಾವ ಮತ್ತು ಅವರ ಹೆಣ್ಣು ಮಕ್ಕಳಲ್ಲಿ ಮೊದಲ ಮುಟ್ಟಿನ ರಕ್ತಸ್ರಾವದ ನಡುವಿನ ಸಂಬಂಧವು ಹಲವಾರು ಅಧ್ಯಯನಗಳಲ್ಲಿ ವರದಿಯಾಗಿದೆ" ಎಂದು ಡೆನ್ಮಾರ್ಕ್ ನ  ಆರ್ಹಸ್ ವಿಶ್ವವಿದ್ಯಾನಿಲಯದ ಸಂಶೋಧಕ ನಿಸ್ ಬ್ರಿಕ್ಸ್ ಹೇಳಿದರು.
"ನಮ್ಮ ಅಧ್ಯಯನದ ನವೀನತೆಯು ಹೆಣ್ಣು ಮಕ್ಕಳಲ್ಲಿ ಪ್ರಬುದ್ಧ ಬೆಳವಣಿಗೆಯ ಇತರ ಗುರುತುಗಳನ್ನೂ ಒಲಗೊಂಡಿದೆ. ಉದಾಹರಣೆಗೆ ಸ್ತನ ಹಾಗೂ ಗುಪ್ತ ಕೂದಲು  ಬೆಳವಣಿಗೆ ಹಂತ ಇತ್ಯಾದಿ."
ಅಧ್ಯಯನದ ಪ್ರಕಾರ, ಸಂಶೋಧಕರು 15,822 ಮಕ್ಕಳನ್ನು ಪರೀಕ್ಷಿಸಿದ್ದಲ್ಲೆ ಗರ್ಭಧಾರಣೆಯ ಸಮಯದಲ್ಲಿ ಎರಡು ಬಾರಿ ತಾಯಂದಿರನ್ನು ಸಂದರ್ಶಿಸಿದರು ಮತ್ತು ಅವರ ಮಕ್ಕಳು ಏಳು ವರ್ಷದವರಿದ್ದಾಗ ಅದ್ಯಯನಕ್ಕೆ ಅಗತ್ಯವಾದ ಪ್ರಶ್ನೆಗಳಿಗೆ ಉತ್ತರಿಸಲು ಕೇಳಿದ್ದರು.
ವಿಶೇಹವೆಂದರೆ ವಯಸ್ಸಿಗೆ ಮುನ್ನ ಮುತ್ತಾದ ತಾಯಂದಿರ ಮಕ್ಕಳು ಸಹ ಬೇಗನೆ ಎಂದರೆ ಒಂದೂವರೆ ಅಥವಾ ಎರಡು ತಿಂಗಳ ಮುನ್ನವೇ ಪ್ರೌಢಾವಸ್ಥೆ ಹೊಂದುತ್ತಾರೆ. ಹೇಗಾದರೂ, ಬಾಲಕಿಯರಲ್ಲಿ, ಸ್ತನ ಬೆಳವಣಿಗೆಯಲ್ಲಿ ಅತಿದೊಡ್ಡ ವ್ಯತ್ಯಾಸ ಕಂಡುಬಂದಿದೆ,
ಕಿರಿ ವಯಸ್ಸಿನಲ್ಲೇ ಪ್ರೌಢಾವಸ್ಥೆ ಹೊಂದುವುದರಿಂದ ವರ್ಷಗಳು ಉರುಳಿದಂತೆ  ಸ್ತನ ಮತ್ತು ವೃಷಣ ಕ್ಯಾನ್ಸರ್, ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಸಮಸ್ಯೆಗಳು ತಲೆದೋರುವ ಸಾಧ್ಯತೆ ಹೆಚ್ಚಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com