ಹೆಚ್ಚು ವಾಕಿಂಗ್ ಮಾಡಿ ಮತ್ತು ಪಾರ್ಶ್ವವಾಯು ತೀವ್ರತೆಯಿಂದ ಪಾರಾಗಿ!

ದಿನವೊಂದಕ್ಕೆ ಕನಿಷ್ಟ 35 ನಿಮಿಷ ನಡಿಗೆ, ಅಥವಾ ಸೂರ್ಯನ ಬೆಳಕಿನಲ್ಲಿ ದೈಹಿಕ ಚಟುವಟಿಕೆ ನಡೆಸುವವರುವಾರದಲ್ಲಿ ಎರಡು ದಿನ ಕನಿಷ್ಟ ಮೂರು ಗಂಟೆಗಳವರೆಗೆ ಈಜುವವರ.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ವಾಷಿಂಗ್ಟನ್: ದಿನವೊಂದಕ್ಕೆ ಕನಿಷ್ಟ 35 ನಿಮಿಷ ನಡಿಗೆ, ಅಥವಾ ಸೂರ್ಯನ ಬೆಳಕಿನಲ್ಲಿ ದೈಹಿಕ ಚಟುವಟಿಕೆ ನಡೆಸುವವರುವಾರದಲ್ಲಿ ಎರಡು ದಿನ ಕನಿಷ್ಟ ಮೂರು ಗಂಟೆಗಳವರೆಗೆ ಈಜುವವರು ಸಾಮಾನ್ಯವಾಗಿ ದೈಹಿಕ ವ್ಯಾಯಾಮ ಮಾಡದವರಿಗಿಂತ ಕಡಿಮೆ ಪ್ರಮಾಣದಲ್ಲಿ ಪಾರ್ಶ್ವವಾಯು ಆಘಾತಕ್ಕೆ ಒಳಗಾಗಲಿದ್ದಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಈ ಸಂಬಂಧ ಅಧ್ಯಯನಕ್ಕೆ ಒಳಪಟ್ಟವರಿಗೆ ವಿರಾಮದ ಸಮಯದಲ್ಲಿ ಅವರು ಎಷ್ಟು ಸಮಯ ವಾಕ್ ಮಾಡುತ್ತಾರೆ, ದೈಹಿಕ ಚಟುವಟಿಕೆಯ ಸರಾಸರಿ ಪ್ರಮಾಣ ಎಷ್ಟಿರಲಿದೆ, ಆ ವ್ಯಾಯಾಮದ ತೀವ್ರತೆ ಏನು ಎನ್ನುವ ಕುರಿತು ಪ್ರಶ್ನಿಸಲಾಗಿತ್ತು.
ಸಂಶೋಧಕರಾದ ಲೇಖಕ ಕ್ಯಾಥರಿನಾ ಎಸ್. ಸನ್ನರ್ಹಗನ್ ಹೇಳಿದಂತೆ " ಪಾರ್ಶ್ವವಾಯುವು ಗಂಭೀರ ಅಂಗವೈಕಲ್ಯತೆಯ ಒಂದು ಪ್ರಮುಖ ಕಾರಣವಾಗಿದೆ, ಆದ್ದರಿಂದ ಪಾರ್ಶ್ವವಾಯು ಬರದಂತೆ ತಡೆಗಟ್ಟುವ ವಿಧಾನಗಳನ್ನು ಕಂಡುಕೊಳ್ಳುವುದು ಬಹಳ ಮುಖ್ಯ. ಪ್ರತಿ ವಾರ ಒಂದು ಸಣ್ಣ ಪ್ರಮಾಣದಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ಪಾರ್ಶ್ವವಾಯು ಆಘಾತವನ್ನು ತಡೆಯಲು  ಅಥವಾ ಅದರ ತೀವ್ರತೆಯನ್ನು ಕಡಿಮೆಗೊಳಿಸಲು ಸಾಧ್ಯವಿದೆ"
ವಾರಕ್ಕೆ ಕನಿಷ್ಠ ನಾಲ್ಕು ಗಂಟೆಗಳವರೆಗೆ ವಾಕಿಂಗ್ ಅಗತ್ಯವೆನ್ನಲಾಗಿದ್ದು ಈಜು, ಚುರುಕಾದ ವಾಕಿಂಗ್, ಅಥವಾ ವಾರಕ್ಕೆ ಎರಡರಿಂದ ಮೂರು ಗಂಟೆಗಳವರೆಗೆ ತೀವ್ರ ವ್ಯಾಯಾಮದ ಅಗತ್ಯವಿದೆ. ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ.52ರಷ್ಟು ಜನರು ಪಾರ್ಶ್ವವಾಯು ಆಘಾತಕ್ಕೆ ಒಳಗಾಗುವುದಕ್ಕೆ ಮುನ್ನ  ದೈಹಿಕವಾದ ವ್ಯಾಯಾಮಗಳನ್ನು ನಡೆಸದೆ ನಿಷ್ಕ್ರಿಯರಾಗಿದ್ದರು ಎನ್ನಲಾಗಿದೆ.
ದೈಹಿಕವಾಗಿ ನಿಷ್ಕ್ರಿಯವಾಗಿರದ ಜನರಿಗೆ ಹೋಲಿಸಿದಾಗ ಈ ವ್ಯತ್ಯಾಸ ಸ್ಪಷ್ಟವಾಗುತ್ತಿದ್ದು ದೈಹಿಕ ಚಟುವಟಿಕೆ ನಡೆಸುವವರಲ್ಲಿ ಪಾರ್ಶ್ವವಾಯು ಆಘಾತವು ಸೌಮ್ಯ ಪರಿಣಾಮವನ್ನು ತರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
"ದೈಹಿಕ ಚಟುವಟಿಕೆಯು ಮಿದುಳಿನ ಮೇಲೆ ರಕ್ಷಣಾ ಪರಿಣಾಮವನ್ನು ಬೀರಬಹುದು ಮತ್ತು ನಮ್ಮ ಸಂಶೋಧನೆಯು ಆ ಸಾಕ್ಷ್ಯವನ್ನು ತೋರಿಸುತಿದೆ.  ದೈಹಿಕ ಚಟುವಟಿಕೆಯು ಪಾರ್ಶ್ವವಾಯು ತೀವ್ರತೆಯ ಮೇಲೆ ಗೆ ಪ್ರಭಾವ ಬೀರುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ."
ದೈಹಿಕ ಚಟುವಟಿಕೆಯ ವ್ಯತ್ಯಾಸವು ಪಾರ್ಶ್ವವಾಯುವಿನ ತೀವ್ರತೆಗೆ ಹೆಚ್ಚಿನ ಪ್ರಮಾಣದಲ್ಲಿ ಸಂಬಂಧ ಹೊಂದಿಲ್ಲ ಕಿರಿ ವಯೋಮಾನದವರು ಮತ್ತು ಹಿರಿಯರ ನಡುವಿನ ಈ ಕುರಿತ ವ್ಯತ್ಯಾಸವು ಕೇವಲ ಶೇ.6.8ರಷ್ಟು ಮಾತ್ರವೇ ಇದೆ ಎಂದು ಸನ್ನರ್ಹಗನ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com