ಕೊಬ್ಬು ಕರಗಿಸುವುದು ಗುರಿಯಾಗಬೇಕೇ ಹೊರತು ತೂಕ ಇಳಿಸುವುದಲ್ಲ!

ತೂಕ ಇಳಿಸಿಕೊಳ್ಳುವುದು ಎಂದರೇನು ಎಂಬುದರ ಅರ್ಥ ಹಲವು ಮಂದಿಗೆ ತಿಳಿದಿಲ್ಲ, ಅವರ ಹೃದಯ ನೋಡೋಕೆ ಚೆನ್ನಾಗಿರಬೇಕು, ಜೊತೆಗೆ ಅವರ ಎತ್ತರಕ್ಕೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ತೂಕ ಇಳಿಸಿಕೊಳ್ಳುವುದು ಎಂದರೇನು ಎಂಬುದರ ಅರ್ಥ ಹಲವು  ಮಂದಿಗೆ ತಿಳಿದಿಲ್ಲ, ಅವರ ಹೃದಯ ನೋಡೋಕೆ ಚೆನ್ನಾಗಿರಬೇಕು, ಜೊತೆಗೆ ಅವರ ಎತ್ತರಕ್ಕೆ ತಕ್ಕ ತೂಕ ಹೊಂದಿರಬೇಕು, ನೊಡಲು ಚೆನ್ನಾಗಿದ್ದೇನೆ ಎಂಬ ಭಾವನೆ ಬರಬೇಕು ಎಂದು ತಿಳಿದಿದ್ದಾರೆ, ಆದರೆ ನಿಜವಾಗಿಯೂ ಎಲ್ಲರಿಗೂ ಸರಿಯಾಗಿ ತಿಳಿದಿಲ್ಲ.
ನಾವು ತೂಕ ಮಾಡುವ ಯಂತ್ರದ ಮೇಲೆ ನಿಂತಾಗ ತೋರಿಸುವ ನಮ್ಮ ದೇಹದ ತೂಕ ನಮ್ಮ ಎತ್ತರಕ್ಕೆ ತಕ್ಕನಾಗಿರಬೇಕು.  ನಮ್ಮ ಕಾಲಿನಿಂದ ತಲೆಯವರೆಗೆ ಇರುವ ಒಟ್ಟು ತೂಕವನ್ನು ಇಲ್ಲಿ ಗಮನಿಸಬೇಕು. ನಮ್ಮ ದೆಹಲದ ತೂಕದಲ್ಲಿ ಕಡಿಮೆಯಾಗಿದೆ ಎಂದರೇ, ನಾವು ದೈನಂದಿನ ಜೀವನದಲ್ಲಿ ದೇಹದಲ್ಲಿನ ನೀರನ್ನು ಕಳೆದುಕೊಂಡಿರುತ್ತೆವ, ದೇಹದ ನೀರು ಇಳಿಸುವುದು ತುಂಬಾ ಸುಲಭ, ಹಾಗೂ ಐದು ವಾರದಲ್ಲಿ ಇದನ್ನು ಮಾಡಬಹುದು.
ಈ ರೀತಿ ದೇಹದಲ್ಲಿನ ನೀರು ಇಳಿಸಿಕೊಳ್ಳುವುದನ್ನು ದೇಹದ ತೂಕ ಕಡಿಮೆಯಾಗಿದೆ ಎಂದು ಕೊಳ್ಳುತ್ತೇವೆ, ಆದರೆ ನಮ್ಮ ನಿಮ್ಮ ದೈನಂದಿನ ಜೀವನದಲ್ಲಿ ಮತ್ತೆ ಇದೇ ತೂಕ ವಾಪಸ್ ಬರಬಹುದು. ನೀರನ್ನು ಉಳಿಸಿಕೊಳ್ಳುವ ನಮ್ಮ ದೇಹದ ಸಾಮರ್ಥ್ಯವು ಪ್ರತಿದಿನ ಭಿನ್ನವಾಗಿರುತ್ತದೆ. ನಮ್ಮ ಆಹಾರ, ದೈನಂದಿನ ವೇಳಾಪಟ್ಟಿ, ದಿನಚರಿ ಮತ್ತು ಹಾರ್ಮೋನುಗಳು ಇದರ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿವೆ.
ಹೀಗಿರುವಾಗ ದೇಹ ತೂಕ ಕಡಿಮೆಯಾಗಿದೆ ಎಂದು ಹೇಗೆ ನಿರ್ಧರಿಸುವುದು, ತೂಕ ಕಳೆದುಕೊಳ್ಳುವುದು ಎಂದರೇ ಕೊಬ್ಬು ಕರಗಿಸುವುದಾಗಿದೆ.
ಆರೋಗ್ಯಯುತ ವ್ಯಕ್ತಿ ತನ್ನ ದೇಹದಲ್ಲಿ ಸುಮಾರು 15-20% ರಷ್ಟು ಪ್ರಮಾಣದಲ್ಲಿ ಕೊಬ್ಬು ಇರಬೇಕು. ನಾವು ಹೆಚ್ಚಿನ ಆಹಾರ ತಿನ್ನುತ್ತೇವೆ, ಆದರೆ ಇಂದಿನ ಜೀವನ ಶೈಲಿಯಲ್ಲಿ ತಿಂದ ಅಷ್ಟು ಆಹಾರವನ್ನು ಎನರ್ಜಿಯಾಗಿ ಬದಲಾಯಿಸುವಷ್ಟು ನಾವು ಕಸರತ್ತು ಮಾಡುವುದಿಲ್ಲ,  ಹೀಗಾಗಿ ಜೀರ್ಣವಾಗದೇ ಉಳಿದ ಆಹಾರ ಕೊಬ್ಬಾಗಿ ಪರಿವರ್ತನೆಯಾಗುತ್ತದೆ, 
ದೇಹದ ಕೊಬ್ಬಿನಲ್ಲಿ ಎರಡು ರೀತಿಯಿರುತ್ತದೆ. ಒಂದು ನಮ್ಮ ಚರ್ಮದ ಕೆಳಗೆ ಇರುವುದು, ಇದನ್ನು ನಾವು ಸುಲಭವಾಗಿ ಕರಗಿಸಬಹುದು, ಇದರಿಂದ ಯಾವುದೇ ತೊಂದರೆಯಿಲ್ಲ, ಮತ್ತೊಂದು ರೀತಿಯ ಕೊಬ್ಬು ಎಲ್ಲರಿಗೂ ಕಾಣುವಂತದ್ದು, ಹೊಟ್ಟೆಯಲ್ಲಿ ಮತ್ತು ತೊಡೆಯಲ್ಲಿ ಸಂಗ್ರಹವಾಗಿರುವ ಕೊಬ್ಬು. ಇದು ಅಪಾಯಕಾರಿ, ಇಲ್ಲಿ ಶೇಖರವಾಗುವ ಕೊಬ್ಬು ದೇಹದ ಇತರ ಅಂಗಾಂಗಳ ಮೇಲೆ ಪರಿಣಾಮ ಬೀರುತ್ತದೆ., ಇದರಿಂದ ಹಲವು ಕಾಯಿಲೆಗಳು ಬರುತ್ತವೆ, ಮಧುಮೇಹ, ಹೃದಯ ರೋಗ, ಥೈರಾಯಿಡ್ ಮತ್ತು ಪಿಸಿಒಡಿಗೆ ಕಾರಣವಾಗುತ್ತದೆ, 
ಹೀಗಾಗಿ ನಾವು ಕರಗಿಸಬೇಕಾಗಿರುವುದು ಹೊಟ್ಟೆ ಮತ್ತು ತೊಡೆಯಲ್ಲಿ ಶೇಖರವಾಗಿರುವ ಕೊಬ್ಬನ್ನು,  ನಿಯಮಿತ ಆಹಾರ ಶೈಲಿ, ಜೀವನ ಶೈಲಿ ಉತ್ತಮ ಅಬ್ಯಾಸ, ವ್ಯಾಯಾಮ ಹಾಗೂ ನಿಯಮಿತ ಜೀವನ ಶೈಲಿ ರೂಢಿಸಿಕೊಂಡರೇ   ಕೊಬ್ಬು ಕರಗಿಸಬಹುದಾಗಿದೆ.
ಸುಲಭಾಗಿ ಕೊಬ್ಬು ಕರಗಿಸುವುದು ರಾಕೆಟ್  ಸೈನ್ಸ್ ಅಲ್ಲ, ಅದು ನಿಮ್ಮ ಆಹಾರದಲ್ಲಿ ಪಥ್ಯ, ವ್ಯಾಯಾಮ ಹಾಗೂ ಜೀವನ ಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com