ನಿಮ್ಮ ಊಟದ ವಿಧಾನವೇ ನಿಮ್ಮ ಆರೋಗ್ಯ ನಿರ್ಧರಿಸಿಲಿದೆ, ಇಲ್ಲಿದೆ ಮಾಹಿತಿ!

ತಿನ್ನುವಾಗ, ಊಟ ಮಾಡುವಾಗ ಎಚ್ಚರಿಕೆಯಿಂದಿರಬೇಕೆನ್ನುವುದು ಎಲ್ಲರಿಗೆ ತಿಳಿದಿರುವ ವಿಚಾರ. ಹೀಗೆ ಎಚ್ಚರಿಕೆಯಿಂದ ತಿಂದರಷ್ಟೇ ನಮ್ಮ ಆರೋಗ್ಯ ವೃದ್ದಿಯಾಗಲಿದೆ ಎನ್ನುವುದು ಸಹ ಸತ್ಯ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತಿನ್ನುವಾಗ, ಊಟ ಮಾಡುವಾಗ ಎಚ್ಚರಿಕೆಯಿಂದಿರಬೇಕೆನ್ನುವುದು ಎಲ್ಲರಿಗೆ ತಿಳಿದಿರುವ ವಿಚಾರ. ಹೀಗೆ ಎಚ್ಚರಿಕೆಯಿಂದ ತಿಂದರಷ್ಟೇ ನಮ್ಮ ಆರೋಗ್ಯ ವೃದ್ದಿಯಾಗಲಿದೆ ಎನ್ನುವುದು ಸಹ ಸತ್ಯ. ಆದರೆ ನಾವೆಷ್ಟು ಜನ ಹೀಗೆ ಊಟ ತಿಂಡಿ ಮಾಡುವಾಗ ಎಚ್ಚರಿಕೆಯಿಂದಿರುತ್ತೇವೆ? ಎಷ್ಟೋ ಮಂದಿ ಊಟ, ತಿಂಡಿ ಮಾಡುವ ವೇಳೆ ಊಟದ ವಿಷಯ ಬಿಟ್ಟು ಬೇರೆಲ್ಲೋ ಗಮನ ಹರಿಸಿರುತ್ತಾರೆ. ಹೆಚ್ಚಿನ ಜನರು ಬೇರೆ ಕೆಲಸಗಳನ್ನು ಮಾಡುತ್ತಲೇ ಊಟ, ತಿಂಡಿ ಮುಗಿಸುವುದೂ ಇದೆ.
ನಗರಗಳಲ್ಲಿ ವಾಸಿಸುವ ಮಕ್ಕಳು ಊಟ, ತಿಂಡಿ ಮಾಡುವ ವೇಳೆ ಹೆಚ್ಚಾಗಿ ಟಿವಿ ನೋಡುತ್ತಾ ಇರುವುದು ಸಾಮಾನ್ಯ.ಹೀಗೆ ತಿನ್ನುವ ನಡವಳಿಕೆ ಮುಂದಿನ ದಿನಗಳಲ್ಲಿ ಆ ಮಕ್ಕಳು ಮಧುಮೇಹ, ಸ್ಥೂಲಕಾಯದಂತಹಾ ಅನೇಕ ದೀರ್ಘಕಾಲದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇನ್ನು ಹಿರಿಯರು ಸಹ ಊಟದ ಟೇಬಲ್ ಮೇಲೆ ತಮ್ಮ ಮೊಬೈಲ್ ಗಳನ್ನಿಟ್ಟುಕೊಂಡು ಊಟ ಮಾಡುತ್ತಾರೆ. ಹೀಗೆ ಊಟ ಮಾಡುವ ವೇಳೆ ಈಮೇಲ್ ನೋಡುತ್ತಲೋ, ಸಂದೇಶ(ಮೆಸೇಜ್) ಕಳಿಸುತ್ತಲೋ,  ವೀಡಿಯೊಗಳನ್ನು ವೀಕ್ಷಿಸುತ್ತಲೋ ಊಟ ಮಾಡುತ್ತೇವೆ, ಹೀಗೆ ನಾವು ಸಾಕಷ್ಟು ಸಮಯ ತಿನ್ನುವುದಕ್ಕೆ ತೆಗೆದುಕೊಳ್ಳುತ್ತೇವೆ. ಇನ್ನು ಬೆಳಗಿನ ಉಪಹಾರದ ವೇಳೆ ವೃತ್ತಪತ್ರಿಕೆ ಓದುವುದು ಸಹ ನಮ್ಮ ಹವ್ಯಾಸವಾಗಿದೆ. ಹೀಗೆ ಓದುವುದು ಬೇಡವಾದ ತಿಂಡಿ ಬಿಡುವುದಕ್ಕೆ ಸಹ ಒಂದು ನೆಪ. ಆದರೆ ಡೈನಿಂಗ್ ಟೇಬಲ್ ಮೇಲೆ ಮೊಬೈಲ್ ಬಳಕೆ ಮಾಡುವುದಕ್ಕಿಂತ ಇದು ತುಸು ಭಿನ್ನವಾಗಿದೆ. ಇನ್ನು ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ಕೆಲಸದ ಸ್ಥಳದಲ್ಲೇ ಕಂಪ್ಯೂಟರ್ ನೋಡುತ್ತಲೋ, ಸಿನಿಮಾ ವೀಕ್ಷಿಸುತ್ತಲೋ ಊಟ, ತಿಂಡಿಗಳನ್ನು ಮುಗಿಸುವುದು ಸಾಮಾನ್ಯ.ಅಲ್ಲದೆ ನಾವು ಪ್ರಯಾಣಿಸುವ ವೇಳೆ ಸಹ ಚಿಪ್ಸ್, ಬೇರೆ ಬೇರ್ವ್ ತರಹದ ತಿಂಡಿಗಳನ್ನು ತಿನ್ನುತ್ತೇವೆ. ನಮ್ಮ ವಾಹನದಲ್ಲೇ ನಮ್ಮ ಊತವನ್ನೂ ಹೊತ್ತೊಯ್ಯುವುದು ನಮ್ಮ ಇಂದಿನ ವಾಡಿಕೆಯಾಗಿದೆ.
ನಾವು ಬಹು ಹಂತದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಇದು ಅನಿವಾರ್ಯ! ಹೀಗೆನ್ನುವ ಮೂಲಕ ನಾವು ಕೆಲಸದ ನಡುವೆಯೇ ತಿನ್ನುತ್ತೇವೆ ಎಂದು ನಮ್ಮನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ.ಆದರೆ ಒಮ್ಮೆ ಯೋಚಿಸಿ ನೋಡಿ ದಿನಕ್ಕೆ ಮೂರು ಹೊತ್ತು ತಿನ್ನಲಿಕ್ಕೆ ಒಮ್ಮೆಗೆ ಹತ್ತು ನಿಮಿಷದಂತೆ 30 ನಿಷಗಳಷ್ಟೇ ಸಾಕಲ್ಲವೆ? ದಿನಕ್ಕೆ ಊಟ ತಿಂಡಿಗಾಗಿ ಕೇವಲ 30  ನಿಮಿಷ ಬಳಸಲೂ ನಾವು ತಯಾರಿಲ್ಲ. ಹೇಗೆ ಹೇಗೋ ತಿನ್ನುವುದು, ಯಾವುದೋ ಸಮಯಕ್ಕೆ ತಿನ್ನುವುದು, ರಾತ್ರಿ ತಡವಾಗಿ ಊಟ ಮಾಡುವುದು ಈ ಎಲ್ಲವೂ ಒಂದಲ್ಲ ಒಂದು ಹಂತದಲ್ಲಿ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಒಂದು ವೇಳೆ ನೀವು ದೇಹಕ್ಕೆ ಬೇಕಾದ ಎಲ್ಲಾ ಪೌಷ್ಟಿಕಾಂಶ ಒದಗಿಸಬಲ್ಲ ಉತ್ತಮ ಆಹಾರ ತಿನ್ನುತ್ತಿದ್ದರೂ ಸಹ ಸರಿಯಾದ ಕ್ರಮದಲ್ಲಿ ತಿನ್ನದೆ ಹೋದರೆ ಇದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ.
ನೀವು ಊಟ-ತಿಂಡಿ ಮಾಡುವ ವೇಳೆ ಹೇಗೆ ಸರಿಯಾದ ಕ್ರಮ ಅನುಸರಿಸಬೇಕು ಎಂಬ ಕುರಿತು ಕೆಲ ಸಲಹೆಗಳು ಮುಂದಿವೆ-
  • ಡೈನಿಂಗ್ ಟೇಬಲ್ ಮುಂದೆ ಕುರ್ಚಿಯಲ್ಲಿ ಕುಳಿತು ಊಟ ಮಾಡಿರಿ, ಸೋಫಾ ಆಗಲಿ, ಮೃದುವಾದ ಆಸನಗಳಾಗಲಿ ಬೇಡ.
  • ಆಹಾರದ ಪರಿಮಳ, ಬಣ್ಣ,, ಇವುಗಳಿಗೆ ಗಮನ ನೀಡಲು ಮೊದಲಿಗೆ ಚಿಕ್ಕ ಪ್ರಮಾಣದಲ್ಲಿ ಆಹಾರವನ್ನು ಬಾಯಿಗೆ ಹಾಕಿಕೊಳ್ಳಿ. ಇದು ನಿಮ್ಮ ದೇಹದ ಪಂಚೇಂದ್ರಿಯಗಳೂ ತಿನ್ನುವ ಆಹಾರದ ಮೇಲೆ ಕೇಂದ್ರೀಕರಣಗೊಳ್ಳುವಂತೆ ಮಾಡಲಿ.
  • ಊಟ, ತಿಂಡಿ ಮಾಡುವ ವೇಳೆ ಮೊಬೈಲ್ ಫೋನ್ ಗಳಿಂದ ದೂರವಿರಿ, ಟಿವಿಯನ್ನು ಆಫ್ ಮಾಡಿರಿ.
  • ಗಡಿಬಿಡಿಯಾಗಿ, ಬೇಗ ಬೇಗನೇ ಊಟ ಮುಗಿಸಬೇಡ್.ಅಲ್ಲದೆ ಊಟದ ವೇಳೆ ವಾದ, ವಿವಾದಗಳು ಬೇಡ. ಮನಸ್ಸಿನಲ್ಲಿ ಯಾವುದೇ ಕ್ಷೋಭೆಗಳಿಲ್ಲದೆ ಶಾಂತಚಿತ್ತವಾಗಿ ಊಟ ಮಾಡಿರಿ.
  • ಪ್ರತಿ ದಿನವೂ ಸರಿಯಾದ ಸಮಯಕ್ಕೆ ಊಟ ಮಾಡಿರಿ. ದಿನ ದಿನವೂ ಊಟದ ಸಮಯದಲ್ಲಿ ವ್ಯತ್ಯಾಸವಾಗುವುದು ಬೇಡ.
  • ನಿಮಗೆ ತೃಪ್ತಿಯಾಗುವವರೆಗೆ ಮಾತರ್ ಊಟ ಮಾಡಿರಿ. ಹೊಟ್ಟೆ ಬಿರಿಯುವಷ್ಟು ತಿನ್ನುವುಉದ್ ಒಳ್ಳೆಯದಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com