ಬೆಂಗಳೂರು: ಪದೇ ಪದೇ ಮರುಕಳಿಸುವ ಪಾರ್ಶ್ವವಾಯು (ಸ್ಟ್ರೋಕ್) ತಡೆಯುವ ಸಲುವಾಗಿ ಬೆಂಗಳುರು ಮಣಿಪಾಲ್ ಆಸ್ಪತ್ರೆ ಹೊಸ ಮಾರ್ಗವೊಂದನ್ನು ಶೋಧಿಸಿದೆ.ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.
90 ವರ್ಷದ ರೋಗಿಯೊಬ್ಬರ ಹೃದಯದ ಭಾಗವನ್ನು ಮುಚ್ಚಿ ಆ ಮೂಲಕ ರಕ್ತ ಗಡ್ಡೆಕಟ್ಟುವುದನ್ನು ನಿಲ್ಲಿಸಲು ಮಾರ್ಗಭಂಜಕ ತಂತ್ರವನ್ನು ಆಸ್ಪತ್ರೆಯ ಹೃದಯರೋಗ ವಿಭಾಗದ ಸಂಶೋಧಕ ಪರಿಣತ ಮುಖ್ಯಸ್ಥ ಡಾ. ರಂಜನ್ ಶೆಟ್ಟಿ ಬಳಕೆ ಮಾಡಿದ್ದಾರೆ.
ಪಾರ್ಶ್ವವಾಯು (ಸ್ಟ್ರೋಕ್) ಭಾರತದಲ್ಲಿ ಸಾವು ಹಾಗೂ ಅಂಗ ವೈಕಲ್ಯತೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಈ ಶಸ್ತ್ರಚಿಕಿತೆ ಸಂಬಂಧ ವಿವರಿಸಿದ ರಂಜನ್ ಶೆಟ್ಟಿ "ಮಧ್ಯ ಕರ್ನಾಟಕ ಭಾಗದವರಾದ ರೋಗಿಗೆ ಪದೇ ಪದೇ ಪಾರ್ಶ್ವವಾಯು ಆಘಾತವಾಗುತ್ತಿತ್ತು. ಅವರನ್ನು ಪರಿಶೀಲಿಸಿದ ಬಳಿಕ ರಕ್ತ ತಿಳಿಯಾಗಲು ಆ ಪ್ರಕಾರ ಆಘಾತದ ಪರಿಣಾಮ ತಗ್ಗಿಸಲು ಔಷಧಿ ನೀಡಲಾಗಿತ್ತು. ಆದರೆ ಅದರಿಂದ ಅವರಿಗೆ ಇನ್ನಷ್ಟು ಪ್ರತಿಕೂಲತೆ ಉಂಟಾಗಿತ್ತು. ರೋಗಿಗೆ ಮೂತ್ರ ಹಾಗೂ ತ್ವಚೆಯಲ್ಲಿ ರಕ್ತಸ್ರಾವವಾಗುತ್ತಿತ್ತು.ಹಾಗಾಗಿ ನಾವು ಅವರಿಗೆ ನೀಡಿದ್ದ ಔಷದಹಗಳನ್ನು ತೆಗೆದುಕೊಳ್ಳದಂತೆ ಕೇಳಿದೆವು.
"ನಾವು ನವೀನ ಹಾಗೂ ಪರಿಣಾಮಕಾರಿ ಉಪಕರಣವೊಂದರ ಸಹಾಯದಿಂದ ಇವರ ಸಮಸ್ಯೆಗೆ ಪರಿಹಾರ ಕಂಡುಕೊಂಡೆವು.ಎಡ ಹೃತ್ಕರ್ಣದ ಅಪೆಂಡೀಜ್ ಅನ್ನು ಕಾರ್ಡಿಯಾಕ್ ಅಕ್ಲೂಡರ್ ಬಳಸಿ ಮುಚ್ಚಲಾಗಿತ್ತು.ಇದರ ನಂತರ ಅವರಿಗೆ ರಕ್ತ ತಿಳಿಯಾಗುವ ಔಷಧ ಸೇವನೆ ನಿಲ್ಲಿಸುವಂತೆ ಸೂಚಿಸಲಾಗಿತ್ತು. ಇದೀಗ ಅವರ ಶಸ್ತ್ರಚಿಕಿಯ್ತ್ಸೆ ಅಭೂತಪೂರ್ವವಾದ ಯಶಸ್ಸು ಕಂಡಿದೆ."
ಆಸ್ಪತ್ರೆಯ ವೃದ್ದ ರೋಗಿಗಳ ವಿಭಾಗದ ಮುಖ್ಯಸ್ಥರಾದ ಅಮರ್ ನಾಥ್ ಮಾತನಾಡಿ "ಎಟ್ರಿಯಲ್ ಫೈಬ್ರಿಲೇಷನ್ ತೊಂದರೆ ಇರುವ ರೋಗಿಗಳಲ್ಲಿ ಸಾವಿಗೆ ಹಾಗೂ ವೈಕಲ್ಯಕ್ಕೆ ಪಾರ್ಶ್ವವಾಯು ಪ್ರಮುಖ ಕಾರಣವಾಗಿದೆ. ಈ ಪ್ರಕರಣದಲ್ಲಿ ರೋಗಿಗೆ ರಕ್ತ ಸೋರಿಕೆಯಾಗುತ್ತಿದ್ದು ಇದರ ಕುರಿತು ಗಮನ ನೀಡುವುದು ಅಗತ್ಯವಿತ್ತು. ಜತೆಗೆ ರೋಗಿಯ ವಯಸ್ಸು ಆತಂಕವನ್ನು ತಂದಿತ್ತು. ಆದರೆ ಉಪಕರಣದ ಅಳವಡಿಕೆಗೆ ಅವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.ಈಗ ಅವರ ಆರೋಗ್ಯ ಗುಣಮಟ್ಟ ಸುಧಾರಿಸಿದೆ. ಅನಿಗದಿತ ಪಾರ್ಶ್ವವಾಯು ಆಘಾತ ತಡೆಯುವುದಕ್ಕಾಗಿ ವೃದ್ದರಿಗೆ ಈ ಉಪಕರಣ ಅಳವಡಿಸಬಹುದು" ಎಂದರು.
Advertisement