ಕೊರೋನಾ ಮಹಾಮಾರಿಯಿಂದ ಭಾರತವನ್ನು ಬಿಸಿಜಿ ಲಸಿಕೆ ರಕ್ಷಿಸುತ್ತಿದೆಯೇ?

ಕ್ಷಯರೋಗಕ್ಕೂ, ಕೊರೋನಾ ಸೋಂಕಿನ ನಡುವೆ ಸಂಬಂಧ ಇದೆಯೇ? ಎಂಬ ಅನುಮಾನಗಳು ಈಗ ಪ್ರಬಲಗೊಳ್ಳುತ್ತಿವೆ. ಎರಡೂ ಅಂಟು ಜಾಡ್ಯ ಎಂಬುದು ಸ್ಪಷ್ಟವಾಗಿದೆ. ಮನುಷ್ಯನ ಎಂಜಲು ಮತ್ತಿತರ ದೇಹದ ದ್ರವಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ತಲುಪಲಿದೆ.
ಕೊರೋನಾವೈರಸ್
ಕೊರೋನಾವೈರಸ್
Updated on

ವಾಷಿಂಗ್ಟನ್: ಕ್ಷಯರೋಗಕ್ಕೂ, ಕೊರೋನಾ ಸೋಂಕಿನ ನಡುವೆ ಸಂಬಂಧ ಇದೆಯೇ? ಎಂಬ ಅನುಮಾನಗಳು ಈಗ ಪ್ರಬಲಗೊಳ್ಳುತ್ತಿವೆ. ಎರಡೂ ಅಂಟು ಜಾಡ್ಯ ಎಂಬುದು ಸ್ಪಷ್ಟವಾಗಿದೆ. ಮನುಷ್ಯನ ಎಂಜಲು ಮತ್ತಿತರ ದೇಹದ ದ್ರವಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ತಲುಪಲಿದೆ. ಎರಡು ರೋಗ ಲಕ್ಷಣಗಳ ನಡುವೆ ಹಲವು ಹೋಲಿಕೆಗಳಿದ್ದು, ರೋಗಗಳು ಶ್ವಾಸಕೋಶಕ್ಕೆ ಸಂಬಂಧಿಸಿವೆ. ಹೀಗಾಗಿ ಬಿಸಿಜಿ ಲಸಿಕೆ ಭಾರತವನ್ನು ಕೋವಿಡ್ -೧೯ ಹಿಡಿತದಿಂದ ರಕ್ಷಿಸುತ್ತಿದೆ ಎಂದು ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡೆಸಿದ ಪ್ರಾಥಮಿಕ ಅಧ್ಯಯನ ಹೇಳಿದೆ.

ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ರಿಸರ್ಚ್ ಮೆಡ್ರ್ಯಾಕ್ಟಿವ್ ವೆಬ್‌ಸೈಟ್ ನಡೆಸಿದ ಅಧ್ಯಯನದ ಪ್ರಕಾರ, ಈ ಲಸಿಕೆ ಕೊರೋನಾ ಪ್ರಕರಣಗಳಲ್ಲಿ ಸಾವುಗಳ ಪ್ರಮಾಣವನ್ನೂ ತಗ್ಗಿಸಿದೆ ಎಂದು ಹೇಳಿದೆ.

ಕ್ಷಯರೋಗ(ಟಿಬಿ) ಕಾಯಿಲೆ ವ್ಯಾಪಕವಾಗಿರುವ ದೇಶಗಳಲ್ಲಿ(ಬಿಸಿಜಿ) ವ್ಯಾಕ್ಸಿನೇಷನ್ ನಡೆಸಲಾಗುತ್ತದೆ, ಈ ಲಸಿಕೆ ಬಳಸಲಾಗುತ್ತಿರುವ ಹಲವು ದೇಶಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಿದ್ದು, ಸಾವುಗಳ ಪ್ರಮಾಣವೂ ಕಡಿಮೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ನ್ಯೂಯಾರ್ಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕ ಗೊನ್ಜಾಲೋ ಒಟಾಜು ಹೇಳಿದ್ದಾರೆ.

ಚೀನಾದ ನೆರೆಯಲ್ಲೇ ಇರುವ ಜಪಾನ್ ದೇಶದಲ್ಲಿ ಲಾಕ್ ಡೌನ್ ಕ್ರಮ ಕೈಗೊಳ್ಳದಿದ್ದರೂ, ಕೊರೋನಾ ಸೋಂಕು ಏಕೆ ವ್ಯಾಪಕವಾಗಿ ಹರಡಲಿಲ್ಲ ಎಂಬ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ . ಬಿಸಿಜಿ ಲಸಿಕೆ ಕೇವಲ ಕ್ಷಯರೋಗಕ್ಕೆ ಮಾತ್ರವಲ್ಲದೆ ಇತರ ಸಾಂಕ್ರಾಮಿಕ ರೋಗಗಳಿಗೂ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. 
ಹಾಗಾಗಿ ಬಿಸಿಜಿ ಲಸಿಕೆ ಬಳಸುತ್ತಿರುವ ದೇಶಗಳಲ್ಲಿ ಕೋವಿಡ್ -೧೯ ಸೋಂಕು ಪ್ರಸರಣ ಪ್ರಮಾಣ ಕಡಿಮೆ ಇರುವುದನ್ನು ತೋರಿಸುತ್ತಿದೆ ಎಂದು ಪ್ರೊ. ಒಟಾಜು ಹೇಳಿದ್ದಾರೆ.

ಅಮೆರಿಕ, ಇಟಲಿ, ಬ್ರಿಟನ್, ಸ್ಪೇನ್ ಮತ್ತು ಜರ್ಮನಿಯಂತಹ ಶ್ರೀಮಂತ ರಾಷ್ಟ್ರಗಳನ್ನು ಕೊರೋನಾ ಸೋಂಕು ಪೀಡಿಸುತ್ತಿದೆ. ಇದಕ್ಕೆ ಕಾರಣ ಈ ಎಲ್ಲ ದೇಶಗಳಲ್ಲಿ ಕ್ಷಯ ರೋಗಗಳು ಅತ್ಯಲ್ಪವಾಗಿದ್ದು, ಟಿಬಿ ತಡೆಗಟ್ಟಲು ಬಿಸಿಜಿ ಲಸಿಕೆ ಹಾಕಿಸಬೇಕೆಂಬ ಯಾವುದೇ ನಿಯಮಗಳಿಲ್ಲ. ಕೊರೋನಾ ಹುಟ್ಟಿದ ಚೀನಾದಲ್ಲಿ ಸಹ ಬಿಸಿಜಿ ಲಸಿಕೆ ಬಳಕೆ ಕಡಿಮೆ ಪ್ರಮಾಣದಲ್ಲಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಈಗಾಗಲೇ ಕೊರೋನಾ ಮಹಾಮಾರಿಯನ್ನು ಯಶಸ್ವಿಯಾಗಿ ನಿಯಂತ್ರಿಸುವಲ್ಲಿ ಸಮರ್ಥವಾಗಿವೆ.

ಈ ದೇಶಗಳಲ್ಲಿ ಬಿಸಿಜಿ ಲಸಿಕೆ ಹಾಕಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದೇ ರೀತಿ ಬಿಸಿಜಿ ಲಸಿಕೆ ಭಾರತದಲ್ಲಿ ೧೯೪೮ರಿಂದಲೂ ವ್ಯಾಪಕವಾಗಿ ಬಳಸಲಾಗುತ್ತದೆ. ಹಾಗಾಗಿ ಈ ದೇಶಗಳಲ್ಲಿ ಕೊರೋನಾ ರೋಗದ ಹರಡುವಿಕೆ ಕಡಿಮೆ ಇದೆ ಎಂದು ಒಟಾಜು ವಿವರಿಸಿದ್ದಾರೆ.

ಕೊರೋನಾಗೆ ಲಸಿಕೆ ಸಂಶೋಧಿಸಲು ಕನಿಷ್ಠ ಎರಡು ವರ್ಷ ಸಮಯ ಬೇಕಿದೆ. ಹಾಗಾಗಿ ಅಮೆರಿಕ ಮತ್ತು ಇಟಲಿಯಂತಹ ದೇಶಗಳು ತುರ್ತು ಸೇವೆ ಒದಗಿಸುವ ವೈದ್ಯರು, ದಾದಿಯರು, ಪೊಲೀಸ್ ಮತ್ತು ನೈರ್ಮಲ್ಯ ಕಾರ್ಮಿಕರಿಗೆ ವೈರಸ್ ನಿಂದ ರಕ್ಷಿಸಲು ಬಿಸಿಜಿ ಲಸಿಕೆ ಹಾಕುವಂತೆ ಶಿಫಾರಸು ಮಾಡುತ್ತಿವೆ. ಪ್ರಪಂಚದ ಉಳಿದ ಭಾಗಗಳು ಇದನ್ನೂ ಅನುಸರಿಸಲು ಮುಂದಾಗಿವೆ. ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದ ರೋಗನಿರೋಧಕ ವಿಭಾಗದ ಪ್ರಾಧ್ಯಾಪಕ ಎಲೀನರ್ ಫಿಶ್ ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ. ನೆದರ್ಲ್ಯಾಂಡ್ ಕೊರೋನಾ ನಿಗ್ರಹಿಸಲು ತನ್ನ ೨೦೦ ಮಂದಿ ವೈದ್ಯಕೀಯ ಸಿಬ್ಬಂದಿಗೆ ಬಿಸಿಜಿ ಲಸಿಕೆ ಪ್ರಾಯೋಗಿಕವಾಗಿ ಹಾಕಿಸಿದ್ದು, ಫಲಿತಾಂಶ ಹೊಬರಲು ಇನ್ನೂ ಮೂರು ತಿಂಗಳು ಬೇಕಾಗಲಿದೆ. ಈ ಕುರಿತು ಸಂಪೂರ್ಣ ಸಂಶೋಧನೆ ನಡೆಸುವ ಅವಶ್ಯಕತೆಯಿದೆ ಎಂದು ಪ್ರೊಫೆಸರ್ ಒಟಾಜು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com