ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ತಾಪಮಾನದ ಇಳಿಕೆಯಿಂದಾಗುವ ಹೃದಯಾಘಾತದ ಅಪಾಯ ತಪ್ಪಿಸಿ!

ಚಳಿಗಾಲದಲ್ಲಿ ಹೃದಯಕ್ಕೆ ಸಂಬಂಧಿಸಿದ ರೋಗಗಳು, ಉಸಿರಾಟದಲ್ಲಿ ಏರುಪೇರು ಮತ್ತಿತರ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಂಭವವಿರುತ್ತದೆ
Published on

ಚಳಿಗಾಲದಲ್ಲಿ ಹೃದಯಕ್ಕೆ ಸಂಬಂಧಿಸಿದ ರೋಗಗಳು, ಉಸಿರಾಟದಲ್ಲಿ ಏರುಪೇರು ಮತ್ತಿತರ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಂಭವವಿರುತ್ತದೆ. ಆದಾಗ್ಯೂ, ಜನರು ಶೀತ, ಜ್ವರ ಮತ್ತು ಅಲರ್ಜಿ ಮುಂತಾದ ಸಾಮಾನ್ಯ ಕಾಯಿಲೆಗಳತ್ತ ಹೆಚ್ಚು ಗಮನ ಹರಿಸುತ್ತಾರೆ. ತಾಪಮಾನದಲ್ಲಿ ಕುಸಿತ ಹೃದಯ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೃದಯಾಘಾತದಂತಹ ಸಮಸ್ಯೆಗೂ ಕಾರಣವಾಗಬಹುದು. 

ಈ ಹೃದಯಾಘಾತವು ಕಡಿಮೆ ತಾಪಮಾನ, ಗಾಳಿಯ ಒತ್ತಡ, ಗಾಳಿ ಮತ್ತು ತೇವಾಂಶದಂತಹ ವಿವಿಧ ಅಂಶಗಳಿಂದ ಹೊರಹೊಮ್ಮಬಹುದು. ಆದ್ದರಿಂದ ಚಳಿಗಾಲವು ಹೃದಯ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಅರಿತುಕೊಳ್ಳುವುದರಿಂದ ಹೆಚ್ಚಿನ ಸಮಯದವರೆಗೂ ಹೃದಯಾಘಾತವಾಗದಂತೆ ತಡೆಗಟ್ಟಬಹುದಾಗಿದೆ.

ಚಳಿಗಾಲ ಹೃದ್ರೋಗ ಹೊಂದಿರುವ ಜನರಿಗೆ ಸವಾಲು ಉಂಟುಮಾಡಬಹುದು ಅಥವಾ ಹೃದಯ ಅನಾರೋಗ್ಯರ್ರೆ ಕಾರಣವಾಗಬಹುದು. ಹೃದಯ ಬಡಿತ ಹೆಚ್ಚಳ,  ರಕ್ತದೊತ್ತಡ ಹೆಚ್ಚಳ,  ಹೃದಯ ಬಡಿತ ಕಡಿಮೆಯಾಗುವುದು ಮತ್ತು ಹೃದಯದಿಂದ ಪಂಪ್ ಮಾಡುವುದು ಗಣನೀಯವಾಗಿ ಕಠಿಣವಾಗಬಹುದು, ರಕ್ತ ಹೆಪ್ಪುಗಟ್ಟುವಿಕೆ ಪ್ರವೃತ್ತಿಯು ಹೆಚ್ಚಳವಾಗಲಿದೆ.

ಚಳಿಗಾಲದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು: ಬೆಚ್ಚನೆಯ ಬಟ್ಟೆ ಧರಿಸಬೇಕು, ಶೀತ ವಾತಾವರಣದಲ್ಲಿರುವುದನ್ನು ಆದಷ್ಟು ಕಡಿಮೆ ಮಾಡಿ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು, ಇದು ಹೆಚ್ಚಾದಷ್ಟು ಹೃದಯಾಘಾತ ವಾಗುವ ಸಾಧ್ಯತೆಯೂ ಹೆಚ್ಚಾಗಿುತ್ತದೆ. ಹೆಚ್ಚಿಗೆ ತಿನ್ನುವುದನ್ನು ಕಡಿಮೆ ಮಾಡಬೇಕು, ಏಕೆಂದರೆ ರಕ್ತನಾಳಗಳು ಇದ್ದಕ್ಕಿದ್ದಂತೆ ಹಿಗ್ಗಲು ಕಾರಣವಾಗುವುದರಿಂದ ಕಡಿಮೆ ರಕ್ತದೊತ್ತಡ ಸಮಸ್ಯೆ ಸೃಷ್ಟಿಯಾಗಬಹುದು.ಮದ್ಯ ಸೇವನೆ ಮಿತವಾಗಿರಲಿ. ಒಳಾಂಗಣ ವ್ಯಾಯಾಮ ಮಾಡಿ, ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸಿ ಮತ್ತು ಪ್ರತಿನಿತ್ಯ ನೀರನ್ನು ಕುಡಿಯಬೇಕು, ಇದರಿಂದ ದೇಹಕ್ಕೆ ಶಕ್ತಿ ದೊರೆಯಲಿದೆ.

ಹೃದಯಾಘಾತದ ಲಕ್ಷಣಗಳು: ಎದೆಯಲ್ಲಿ ನೋವು ಅಥವಾ ಅಸ್ವಸ್ಥತೆ ಕೆಲವೊಮ್ಮೆ ಆಗಬಹುದು, ಒತ್ತಡದಂತಹ ಭಾವನೆ ಕಾಡುವುದು, ತೋಳುಗಳು, ಬೆನ್ನು, ಕುತ್ತಿಗೆ ಅಥವಾ ದವಡೆ ಸೇರಿದಂತೆ ದೇಹದಲ್ಲಿ ನೋವು ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ, ಲಘು ತಲೆ ನೋವು ಅಥವಾ ವಾಕರಿಕೆ ಭಾವನೆ, ಮೇಲಿನ ಯಾವುದೇ ರೋಗಲಕ್ಷಣಗಳನ್ನು ಯಾರಾದರೂ ಅನುಭವಿಸುತ್ತಿದ್ದರೆ ಅವರು ತಕ್ಷಣ ಆಸ್ಪತ್ರೆ ಅಥವಾ ಆರೋಗ್ಯ ಪೂರೈಕೆದಾರರನ್ನು ಸಂಪರ್ಕಿಸಬೇಕು ಎಂದು ಆಸ್ಟರ್ ಸಿಎಂಐ ಆಸ್ಪತ್ರೆ ಹೃದ್ರೋಗ ವಿಭಾಗದ ಹಿರಿಯ ಸಮಾಲೋಚಕರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com