'ಕೋವಿಡ್-19 ವಿರುದ್ಧ ಹೋರಾಡಲು ಅಶ್ವಗಂಧ ಸಹಕಾರಿ'

ಕೋವಿಡ್-19 ವಿರುದ್ಧ ಹೋರಾಡಲು ಆಯುರ್ವೇದದ ಔಷಧ, ಗಿಡಮೂಲಿಕೆಗಳು ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಅಧ್ಯಯನ ವರದಿಯೊಂದು ಪ್ರಕಟವಾಗಿದೆ. 
'ಅಶ್ವಗಂಧ ಕೋವಿಡ್-19 ವಿರುದ್ಧ ಹೋರಾಡಲು ಸಹಕಾರಿ'
'ಅಶ್ವಗಂಧ ಕೋವಿಡ್-19 ವಿರುದ್ಧ ಹೋರಾಡಲು ಸಹಕಾರಿ'

ನವದೆಹಲಿ: ಕೋವಿಡ್-19 ವಿರುದ್ಧ ಹೋರಾಡಲು ಆಯುರ್ವೇದದ ಔಷಧ, ಗಿಡಮೂಲಿಕೆಗಳು ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಅಧ್ಯಯನ ವರದಿಯೊಂದು ಪ್ರಕಟವಾಗಿದೆ. 

ಆಯುರ್ವೇದದ ಮೂಲಿಕೆ ಅಶ್ವಗಂಧ ಕೋವಿಡ್-19 ವೈರಾಣು ತಡೆಗಟ್ಟುವುದಕ್ಕೆ ಅತ್ಯಂತ ಪರಿಣಾಮಕಾರಿ ಔಷಧವಾಗಿ ಕೆಲಸ ಮಾಡಬಲ್ಲದು ಎಂದು ಐಐಟಿ-ದೆಹಲಿ ಹಾಗೂ ಜಪಾನ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಇಂಡಸ್ಟ್ರಿಯಲ್ ಸೈನ್ಸ್-ಟೆಕ್ನಾಲಜಿಯ ಸಹಯೋಗದಲ್ಲಿ ನಡೆದ ಜಂಟಿ ಸಂಶೋಧನೆಯಿಂದ ಸಾಬೀತಾಗಿದೆ. 

ಅಶ್ವಗಂಧ ಹಾಗೂ ಪ್ರೋಪೋಲಿಸ್ ನಲ್ಲಿರುವ ಸಂಯುಕ್ತಗಳು ಕೊರೋನಾ ತಡೆಗೆ ಪರಿಣಾಮಕಾರಿಯಾದ ಔಷಧವಾಗಬಲ್ಲದು ಎಂದು ಸಂಶೋಧನಾ ತಂಡ ಹೇಳಿದೆ. ವೈರಾಣು ದ್ವಿಗುಣಗೊಳ್ಳುವ ಎಂಜೈಮ್ ನ್ನು ಗುರಿಯಾಗಿರಿಸಿಕೊಂಡು ಈ ಸಂಶೋಧನೆ ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com