ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ರಸವಪೂರ್ವ, ನಂತರದ ಆತಂಕ, ಖಿನ್ನತೆಯನ್ನು ತಡೆಗಟ್ಟುವುದು ಹೇಗೆ?

ಮಗುವಿನ ಆಗಮನ ಪ್ರತಿಯೊಬ್ಬ ಹೆಣ್ಣಿನ ಬಾಳಲ್ಲಿ ಅತ್ಯಂತ ಉತ್ಸಾಹದ ಸಮಯ ಮತ್ತು ಅಷ್ಟೇ ಸವಾಲು ಕೂಡ. ಗರ್ಭ ಧರಿಸಿದ ಸಮಯದಲ್ಲಿ ಶೇಕಡಾ 15ರಷ್ಟು ಮಹಿಳೆಯರು ಖಿನ್ನತೆ, ಆತಂಕಕ್ಕೆ ಒಳಗಾಗುತ್ತಾರೆ ಮತ್ತು ಹೆರಿಗೆಯ ನಂತರ ಕೂಡ ಅದೇ ರೀತಿಯ ಅನುಭವ ಎದುರಿಸುತ್ತಾರೆ.
Published on

ಬೆಂಗಳೂರು: ಮಗುವಿನ ಆಗಮನ ಪ್ರತಿಯೊಬ್ಬ ಹೆಣ್ಣಿನ ಬಾಳಲ್ಲಿ ಅತ್ಯಂತ ಉತ್ಸಾಹದ ಸಮಯ ಮತ್ತು ಅಷ್ಟೇ ಸವಾಲು ಕೂಡ. ಗರ್ಭ ಧರಿಸಿದ ಸಮಯದಲ್ಲಿ ಶೇಕಡಾ 15ರಷ್ಟು ಮಹಿಳೆಯರು ಖಿನ್ನತೆ, ಆತಂಕಕ್ಕೆ ಒಳಗಾಗುತ್ತಾರೆ ಮತ್ತು ಹೆರಿಗೆಯ ನಂತರ ಕೂಡ ಅದೇ ರೀತಿಯ ಅನುಭವ ಎದುರಿಸುತ್ತಾರೆ. ಆತಂಕ ಮತ್ತು ಖಿನ್ನತೆ ಇವೆರಡೂ ಅತ್ಯಂತ ಸಾಮಾನ್ಯ ಪರಿಸ್ಥಿತಿಗಳು.

10ರಲ್ಲಿ ಒಬ್ಬ ಮಹಿಳೆ ಮತ್ತು ಪ್ರತಿ 20ರಲ್ಲಿ ಓಬ್ಬ ಪುರುಷ ಪ್ರಸವಪೂರ್ವ ಖಿನ್ನತೆಗೊಳಗಾಗುತ್ತಾರೆ. ಮಹಿಳೆ ಗರ್ಭಿಣಿಯಾಗಿದ್ದಾಗ ಯಾವೆಲ್ಲಾ ಅನುಭವಗಳನ್ನು ಎದುರಿಸುತ್ತಾರೆಯೋ ಅವೆಲ್ಲಕ್ಕೂ ಗರ್ಭದಲ್ಲಿರುವ ಮಗು ಸಹ ಒಡ್ಡಿಕೊಳ್ಳುತ್ತದೆ. ಪರಿಸರದಲ್ಲಿನ ಶಬ್ದಗಳು, ತಾಯಿ ಸೇವಿಸುವ ಆಹಾರ ಮತ್ತು ಅನುಭವಿಸುವ ಭಾವನೆಗಳು ಇದರಲ್ಲಿ ಸೇರಿವೆ. ಒತ್ತಡ, ಆತಂಕದಂತಹ ಭಾವನೆಗಳು ತಾಯಿಯ ದೇಹದಲ್ಲಿ ನಿರ್ದಿಷ್ಟ ಹಾರ್ಮೋನುಗಳನ್ನು ಹೆಚ್ಚಿಸಬಹುದು, ಇದು ಭ್ರೂಣದಲ್ಲಿರುವ ಮಗುವಿನ ಬೆಳವಣಿಗೆ, ಅದರ ಮೆದುಳಿನ ಮೇಲೆ ಪರಿಣಾಮ ಬೀರಬಹುದು. ಕೆಲವು ಸಾಂದರ್ಭಿಕ ನಕಾರಾತ್ಮಕ ಆಲೋಚನೆಗಳು, ಅಹಿತಕರ ಭಾವನೆಗಳು ಮಗುವಿನ ಜನನದ ಬಗ್ಗೆ ಚಿಂತೆ, ನಿದ್ರೆಯ ಕೊರತೆ, ಪರಿಸರ ಒತ್ತಡ, ಪೋಷಕರಾದ ಮೇಲೆ ಹೇಗೆ ಜವಾಬ್ದಾರಿ ನಿರ್ವಹಿಸುವುದು ಎಂಬ ಚಿಂತೆ ಇವೆಲ್ಲವೂ ಖಿನ್ನತೆ ಮತ್ತು ಆತಂಕಕ್ಕೆ ಕಾರಣವಾಗಿರುತ್ತವೆ.

ಇನ್ನು ಪುರುಷರ ವಿಚಾರ ಬಂದಾಗ, ತಂದೆಯಾಗುವುದು ಭಾವನಾತ್ಮಕ ಬದಲಾವಣೆಗಳನ್ನು ತರುತ್ತದೆ. ಕೆಲವು ಪುರುಷರು ತಮ್ಮ ಪತ್ನಿ ಗರ್ಭವತಿಯಾಗಿರುವಾಗ ತಯಾರಿ ನಡೆಸುತ್ತಿದ್ದರೂ ಸಹ, ಕೆಲವರು ನವಜಾತ ಶಿಶುವನ್ನು ಹೊಂದುವ ವಾಸ್ತವತೆಯಿಂದಾಗಿ ಅತಿಯಾದ ಭಾವನೆಯನ್ನು ಅನುಭವಿಸಬಹುದು. ಪಿತೃತ್ವವು ಮಾತೃತ್ವದಷ್ಟೇ ಸವಾಲಿನದ್ದಾಗಿದೆ.

ನೀವು ಮೊದಲ ಬಾರಿಗೆ ಪೋಷಕರಾಗಿದ್ದಾಗ ನಿಮ್ಮ ಆರಾಮ ವಲಯದಿಂದ ಒತ್ತಡ, ಗೊಂದಲ ಮತ್ತು ಹೊರಗುಳಿಯುವುದು ಸಾಮಾನ್ಯ ಮತ್ತು ಸಾಮಾನ್ಯವಾಗಿದೆ. ಆರಂಭದಲ್ಲಿ ಪೋಷಕರಾಗುವವರಿಗೆ ಕುಟುಂಬ ಮತ್ತು ಸ್ನೇಹಿತರಿಂದ ಹೆಚ್ಚುವರಿ ಬೆಂಬಲ ಬೇಕಾಗುತ್ತದೆ, ವಿಶೇಷವಾಗಿ ಆರಂಭದಲ್ಲಿ. ಭಾವನಾತ್ಮಕ ಬೆಂಬಲ ಕೂಡ ಅಗತ್ಯವಿದೆ.

ಖಿನ್ನತೆಯಿಂದ ಬಳಲುತ್ತಿದ್ದೀರಿ ಎಂಬುದಕ್ಕೆ ಕೆಲವು ಸೂಚನೆಗಳು:

  • ದುಃಖ, ಅಸಹಾಯಕ ಮತ್ತು ಹತಾಶ ಭಾವನೆ
  • ನಕಾರಾತ್ಮಕ ಆಲೋಚನೆಗಳು
  • ನಕಾರಾತ್ಮಕ ಆಲೋಚನೆಗಳಿಂದಾಗಿ ಚೆನ್ನಾಗಿ ನಿದ್ರೆ ಮಾಡುತ್ತಿಲ್ಲ
  • ಆಸಕ್ತಿದಾಯಕವೆಂದು ಕಂಡುಕೊಳ್ಳುವ ಚಟುವಟಿಕೆಗಳಲ್ಲಿ ಆಸಕ್ತಿಯ ಕೊರತೆ
  • ಹಸಿವಿನ ಕೊರತೆ
  • ಅಳುವುದು,ಕೋಪ,ಆಕ್ರೋಶ

ವೈದ್ಯರ ಸಹಾಯ ಯಾವಾಗ ಪಡೆಯಬೇಕು?
ನೀವು ಎರಡು ವಾರ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಮೇಲೆ ತಿಳಿಸಿದ ಲಕ್ಷಣಗಳನ್ನು ಹೊಂದಿದ್ದರೆ ಅಥವಾ ಅದಕ್ಕೂ ಮೊದಲೇ ಗುರುತಿಸಲು ಸಾಧ್ಯವಾದರೆ ವೈದ್ಯಕೀಯ ನೆರವು ಪಡೆಯುವುದು ಉತ್ತಮ.

ಮಾನಸಿಕ ಆರೋಗ್ಯ ಹೆಚ್ಚಿಸುವುದು ಹೇಗೆ?

  • ವಾಸ್ತವಿಕ ನಿರೀಕ್ಷೆಗಳನ್ನು ಹೊಂದಿಸಿ
  • ಅಗತ್ಯವಿರುವಾಗ ವಿಶ್ರಾಂತಿ ತೆಗೆದುಕೊಳ್ಳಿ
  • ಮನೆಗಳು ಅಥವಾ ಉದ್ಯೋಗಗಳನ್ನು ಸ್ಥಳಾಂತರಿಸುವಂತಹ ಬದಲಾವಣೆಗಳನ್ನು ತಪ್ಪಿಸಿ ಏಕೆಂದರೆ ಅದರಿಂದ ಸಾಕಷ್ಟು ಸವಾಲುಗಳು ಎದುರಾಗಬಹುದು.
  • ಆರೋಗ್ಯಕರ ತಿನಿಸುಗಳನ್ನು ಸೇವಿಸಿ, ಹೆಚ್ಚಾಗಿ ನೀರು ಕುಡಿಯುತ್ತಿರಿ.
  • ಆಲ್ಕೋಹಾಲ್, ತಂಬಾಕು ಇತ್ಯಾದಿಗಳನ್ನು ವ್ಯರ್ಜಿಸಿ.
  • ನಿಮ್ಮನ್ನು ದೈಹಿಕವಾಗಿ ಸಕ್ರಿಯವಾಗಿರಿಸಿಕೊಳ್ಳಿ (ವ್ಯಾಯಾಮ, ಕಸರತ್ತು, ಯೋಗ, ಧ್ಯಾನ ಇತ್ಯಾದಿ)
  • ಸಮೀಪ ಬಂಧುಗಳು, ಸ್ನೇಹಿತರು, ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿರಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com