ನೀವು ನಿಮ್ಮ ಹೃದಯದ ಮಾತು ಕೇಳುತ್ತಿದ್ದೀರಾ?

ಜೀವನಶೈಲಿಯ ಬದಲಾವಣೆಗಳು ಉಸಿರಾಟದ ತೊಂದರೆ, ಎದೆ ನೋವು, ಶೀತ ಬೆವರು ಮತ್ತು ಲಘು ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ, ಆದರೆ ಅದು ಮಾರಕವಾಗುವ ಮೊದಲು ತಜ್ಞರ ಸಲಹೆಯನ್ನು ಪಡೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

Published: 29th September 2020 10:36 PM  |   Last Updated: 29th September 2020 10:36 PM   |  A+A-


Heart

ಹೃದಯ

Posted By : Prasad SN
Source : Online Desk

ನಮ್ಮ ಪ್ರಸ್ತುತದ ಅತ್ಯಂತ ಕೆಟ್ಟ ಸಾಂಕ್ರಾಮಿಕ ಪಿಡುಗು ಅಂಟಿ ಎಂಟು ತಿಂಗಳುಗಳಿಗಿಂತ ಹೆಚ್ಚು ಸಮಯವಾಗಿದ್ದು ಮತ್ತು ಅದು ಕಡಿಮೆಯಾಗುವುದರಿಂದ ಬಹು ದೂರ ಎಂದು ನಮಗೆ ತಿಳಿದಿದೆ, ಮಾರಣಾಂತಿಕ ವೈರಸ್ನ್ ತೀವ್ರತೆಯು ಅದರ ಪ್ರಭಾವವು ಶ್ವಾಸಕೋಶಕ್ಕೆ ಮಾತ್ರ ಸೀಮಿತವಾಗಿಲ್ಲದೆ SSARS-CoV-2 ಸಹ ಹೃದಯವನ್ನು ಆಕ್ರಮಿಸುತ್ತಿದೆ ಎಂಬುದನ್ನು ವಿವರಿಸುತ್ತದೆ. ಇಲ್ಲಿ ನಾಲ್ಕರಲ್ಲಿ ಒಂದು ಸಾವು ಹೃದಯ ಸಂಬಂಧಿ ಕಾಯಿಲೆ (ಸಿವಿಡಿ)ಗೆ ಸಂಬಂಧಿಸಿದೆ ಎಂಬ ವಿಷಯವು ನಮ್ಮಂತಹ ದೇಶಕ್ಕೆ ಸತ್ಯವು ಆತಂಕಕಾರಿಯಾಗಿದೆ. ನ್ಯಾಷನಲ್ ಕ್ರೈಮ್ ರೆಕಾಡ್ರ್ಸ್ ಬ್ಯೂರೋದ ವರದಿಯ ಪ್ರಕಾರ, ಎಲ್ಲಾ ಸಿವಿಡಿಗಳಲ್ಲಿ, ಪರಿಧಮನಿಯ ಕಾಯಿಲೆಯಿಂದ ಹೆಚ್ಚಾಗಿ ಸಂಭವಿಸುವ ಹೃದಯಾಘಾತವು ಐದು ವರ್ಷಗಳಲ್ಲಿ 53 ಪ್ರತಿಶತದಷ್ಟು ಹೆಚ್ಚಾಗಿದ್ದು 2014 ರಲ್ಲಿ 18,309 ಮತ್ತು 2019 ರಲ್ಲಿ 28,005 ಸಾವುಗಳು ಸಂಭವಿಸಿವೆ. 2020 ಕ್ಕೆ ಬಂದರೆ, ಮತ್ತು ಈ ವೈರಸ್ಗೆರ ತುತ್ತಾಗುವ ಅಪಾಯವಿರುವ ರೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಂಕ್ರಾಮಿಕ ರೋಗವನ್ನು ನಾವು ಎದುರಿಸುತ್ತೇವೆ. ವಿಪರ್ಯಾಸವೆಂದರೆ, ಆತಂಕಕಾರಿಯಾದ ಯಾವುದೇ ಹೃದಯ ಸಂಬಂಧಿ ರೋಗಲಕ್ಷಣಗಳ ಬಗ್ಗೆ ರೋಗಿಗಳು ಇನ್ನಷ್ಟು ಜಾಗರೂಕರಾಗಿರಬೇಕಾದ ಸಮಯದಲ್ಲಿ ಕೋವಿಡ್-19 ರ ಸೋಂಕಿನ ಭಯದ ಸಂಶಯದಿಂದ ಆಸ್ಪತ್ರೆಯ ಸೌಲಭ್ಯಗಳನ್ನು ಆಗಾಗ್ಗೆ ಪಡೆಯುವ ಬಗ್ಗೆ ಅನೇಕರು ನಿರ್ಲಕ್ಷಿಸುತ್ತಿದ್ದಾರೆ. ಸರಳ ಜೀವನಶೈಲಿಯ ಬದಲಾವಣೆಗಳು ಉಸಿರಾಟದ ತೊಂದರೆ, ಎದೆ ನೋವು, ಶೀತ ಬೆವರು ಮತ್ತು ಲಘು ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ, ಆದರೆ ಅದು ಮಾರಕವಾಗುವ ಮೊದಲು ತಜ್ಞರ ಸಲಹೆಯನ್ನು ಪಡೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಾವು ವಿಶ್ವ ಹೃದಯ ದಿನವನ್ನು ಆಚರಿಸುತ್ತಿರುವಾಗ ಈ ರೋಗದ ಹೊರೆಯನ್ನು ನಿಭಾಯಿಸಲು ಚುರುಕಾದ ಜೀವನಶೈಲಿ ಆಯ್ಕೆಗಳು ಮತ್ತು ಸುಧಾರಿತ ವೈದ್ಯಕೀಯ ಉಪಚಾರಗಳು ನಮಗೆ ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸೋಣ. ಏಕೆಂದರೆ ಇದು ಹೃದಯದ ವಿಷಯವಾದ್ದರಿಂದ ಸಣ್ಣ ಅಪಾಯಗಳು ಸಹ ತೀವ್ರವಾದ ಹಾನಿಗಳಿಗೆ ಕಾರಣವಾಗಬಹುದು.

ಸಿವಿಡಿಗಳ ಕಾರಣದ ಬಗ್ಗೆ ಬೆಳಕು ಚೆಲ್ಲುತ್ತಾ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ. ಸಂಜಯ್ ಮೆಹ್ರೋತ್ರಾ ಅವರು ಹೇಳಿದರು ``ನಮ್ಮ ಜೀವನಶೈಲಿಯ ಪ್ರಸ್ತುತ ಸ್ಥಿತಿಯನ್ನು ಗಮನಿಸಿದರೆ, ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಎರಡು ವಿಷಯಗಳೆಂದರೆ ಆಹಾರ ಕ್ರಮಗಳು ಮತ್ತು ದೈಹಿಕ ಕೊರತೆ ಚಟುವಟಿಕೆ. ಜಡ ಜೀವನಶೈಲಿಯು ಕಳಪೆ ಆಹಾರ ಮಾದರಿಗೆ ಕಾರಣವಾಗುತ್ತಿದೆ. ಸಂಸ್ಕರಿಸಿದ ಆಹಾರ, ಕಡಿಮೆ ಪ್ರೋಟೀನ್ ಆಹಾರ ಮತ್ತು ಕೆಲಸದ ಒತ್ತಡವು ದೇಹದ ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾಗುವ ಪ್ರಮುಖ ಅಂಶಗಳಾಗಿದ್ದು, ಸಮಯಾನಂತರ ನಿಮ್ಮ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಅಪಧಮನಿಗಳನ್ನು ಮುಚ್ಚಿಹಾಕುತ್ತದೆ ಮತ್ತು ಅದು ಹೃದಯಾಘಾತಕ್ಕೆ ಕಾರಣವಾಗುವ ತಡೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಆರೋಗ್ಯಕರ ಆಹಾರ ಮತ್ತು ವ್ಯಾಯಾಮದಂತಹ ಸರಿಯಾದ ಕ್ರಮಗಳನ್ನು ಅನುಸರಿಸುವುದು ಮತ್ತು ನಿಮ್ಮ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದು ಕಡ್ಡಾಯವಾಗಿದೆ.''

ಸಿವಿಡಿಗಳ ಸೂಕ್ಷ್ಮ ಪರಿಶೀಲನೆ: ಗಮನಾರ್ಹವಾದ ಜೀವನಶೈಲಿಯ ಬದಲಾವಣೆಗಳು
ಕೊಬ್ಬು, ಕೊಲೆಸ್ಟ್ರಾಲ್, ಪ್ಲೇಟ್ಲೆಗಟ್ಗಳು ಮತ್ತು ಕ್ಯಾಲ್ಸಿಯಂ ಶೇಖರಣೆಯಿಂದಾಗಿ ಪರಿಧಮನಿಯ ಅಪಧಮನಿಗಳಲ್ಲಿ ತಡೆಯುಂಟಾದಾಗ ಅದು ಹೃದಯಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ, ಇದನ್ನು ಪರಿಧಮನಿಯ ಕಾಯಿಲೆ ಎಂದು ಕರೆಯಲಾಗುತ್ತದೆ. ಈಗ, ದೊಡ್ಡ ಕಾಳಜಿ ಎಂದರೆ, ನಾವು ಹೃದಯರಕ್ತನಾಳದ ಫಿಟ್ನೆನಸ್ ಅನ್ನು ಹೇಗೆ ಗಮನಿಸಬಹುದು? ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುವಲ್ಲಿ ಸರಳವಾದ ವಿಷಯಗಳು ಪ್ರಮುಖವಾಗುತ್ತವೆ. ಉದಾಹರಣೆಗೆ, ನಿಯಮಿತ ವ್ಯಾಯಾಮವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಹೃದಯವನ್ನು ಬಲಪಡಿಸುತ್ತದೆ. ಇದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಂದಿನ ಪ್ರಮುಖ ಪ್ರಶ್ನೆಯೆಂದರೆ- ಎಷ್ಟು ವ್ಯಾಯಾಮ ಸಾಲುತ್ತದೆ ಅಥವಾ ಅಗತ್ಯವಿದೆ? ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ವಾರಕ್ಕೆ 150 ನಿಮಿಷಗಳ, ಅಂದರೆ ದಿನವೊಂದಕ್ಕೆ ಸರಿಸುಮಾರು 30 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಶಿಫಾರಸು ಮಾಡುತ್ತದೆ. ಅಷ್ಟೇ ಅಲ್ಲದೇ ``ವಾರಕ್ಕೆ ಕನಿಷ್ಠ 2 ದಿನಗಳ (ಪ್ರತಿರೋಧ ಅಥವಾ ತೂಕದಂತಹ) ಮಧ್ಯಮದಿಂದ ಹೆಚ್ಚಿನ ತೀವ್ರತೆಯ ಸ್ನಾಯು ಬಲಪಡಿಸುವ ಚಟುವಟಿಕೆ.'' ಯನ್ನು ಸಹ ಶಿಫಾರಸು ಮಾಡುತ್ತದೆ.

ಅಧಿಕ ತೂಕವು ಅಧಿಕ ರಕ್ತದ ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಪರಿಧಮನಿಯ ಹೃದಯ ಕಾಯಿಲೆಗಳಿಗೆ ಕಾರಣವಾಗುವ ರಕ್ತದಲ್ಲಿನ ಗ್ಲೂಕೋಸ್ನ  ಏರಿಳಿತದಂತಹ ಇತರ ಸಮಸ್ಯೆಗಳನ್ನು ಜನರಿಗೆ ತಂದೊಡ್ಡುತ್ತದೆ. ಆಹಾರಕ್ರಮವು ಉಪಯೋಗಕ್ಕೆ ಬರುವುದು ಇಲ್ಲಿಯೇ. ಪರಿಷ್ಕರಿಸಿದ ಆಹಾರಗಳು (ಪ್ಲೇಕ್) ಪದರವನ್ನು ನಿರ್ಮಿಸಲು ಕೊಡುಗೆ ನೀಡುತ್ತವೆ. ಆದ್ದರಿಂದ, ಕಡಿಮೆ ಕೊಬ್ಬು ಮತ್ತು ಕಡಿಮೆ ಉಪ್ಪು ಇರುವ ಆಹಾರವನ್ನು ಶಿಫಾರಸು ಮಾಡಲಾಗುತ್ತದೆ. ಆಂಥೋಸ್ಯಾನಿನ್ಗುಳಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಆಂಥೋಸ್ಯಾನಿನ್ಗಳು ಹೃದ್ರೋಗಕ್ಕೆ ಕಾರಣವಾಗುವ ಆಕ್ಸಿಡೇಟಿವ್ ಒತ್ತಡದಿಂದ ನಿಮ್ಮನ್ನು ರಕ್ಷಿಸುತ್ತವೆ. ತಜ್ಞರು ಬೀನ್ಸ್ ನಂತಹ ನಿರೋಧಕ ಪಿಷ್ಟದಿಂದ ಸಮೃದ್ಧವಾಗಿರುವ ಆಹಾರವನ್ನು ಸೂಚಿಸುತ್ತಾರೆ, ಇದು ಹೃದಯದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೆಣಬು, ಚಿಯಾ ಮತ್ತು ಅಗಸೆಯಂತಹ ಬೀಜಗಳು ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗಳ ವಿಭಾಗದ ಮುಖ್ಯಸ್ಥರು ಮತ್ತು ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ರಂಜನ್ ಶೆಟ್ಟಿ, ಹೇಳುತ್ತಾರೆ “ನಾವು ಫಿಟ್ನೆನಸ್ ಬಗ್ಗೆ ಮಾತನಾಡುವಾಗ, ಅದನ್ನು ಮೌಲ್ಯಮಾಪನ ಮಾಡುವ ಒಂದು ಪ್ರಮುಖ ವಿಧಾನವೆಂದರೆ ಕಾಲಾನುಕ್ರಮಕ್ಕಿಂತ ವ್ಯಕ್ತಿಯ ದೈಹಿಕ ವಯಸ್ಸನ್ನು ಮೌಲ್ಯಮಾಪನ ಮಾಡುವುದು. ಸಾಂಕ್ರಾಮಿಕವು ಅನೇಕ ಜನರ ಫಿಟ್ನೆಸ್ ಯೋಜನೆಗಳನ್ನು ತೀವ್ರವಾಗಿ ನಿಲ್ಲಿಸಿದೆ. ಅರ್ಥಮಾಡಿಕೊಳ್ಳಬೇಕಾದ ಇನ್ನೊಂದು ಮುಖ್ಯ ವಿಷಯವೆಂದರೆ, ಹೃದ್ರೋಗದ ಲಕ್ಷಣಗಳು ವಯಸ್ಸಾದವರ ಸಮಸ್ಯೆಯೆಂದು ನಾವು ಭಾವಿಸಿದರೆ, ಇನ್ನು ಮುಂದೆ ಅದು ಸಾಧ್ಯವಿಲ್ಲ. ಅನೇಕ ಯುವಕರು ಸಿವಿಡಿಗೆ ತುತ್ತಾಗುವುದನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ ಆರೋಗ್ಯಕರ ಜೀವನಕ್ಕೆ ಒತ್ತು ನೀಡಬೇಕಿದೆ.

ಇಂದು, ನಾವು 40 ವರ್ಷಕ್ಕಿಂತ 70 ವರ್ಷದ ಜನರು ಹೆಚ್ಚು ಸಕ್ರಿಯವಾಗಿರುವುದನ್ನು ನೋಡುತ್ತಿದ್ದೇವೆ. ಇದಕ್ಕೆ ಕಾರಣ ಅವರು ತಮ್ಮ ಜೀವನಶೈಲಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೆ. ಹೃದಯ ಆರೈಕೆ ಎಂದರೆ ಕೇವಲ ಸಾಕಷ್ಟು ವ್ಯಾಯಾಮ ಅಥವಾ ಸರಿಯಾದ ಆಹಾರವಷ್ಟೇ ಅಲ್ಲ. ಇದು ಇವೆರಡರ ಆರೋಗ್ಯಕರ ಸಮತೋಲನವಾಗಿದೆ. ಸಾಂಕ್ರಾಮಿಕದ ಏಕಾಏಕಿ ಸ್ಫೋಟದ ನಂತರ, ಹೆಪ್ಪುಗಟ್ಟುವಿಕೆಯ ಜೊತೆಗೆ ಹೃದಯದ ಸಮಸ್ಯೆಗಳ ಸಂಖ್ಯೆಯ ಹೆಚ್ಚಳವನ್ನೂ ನಾವು ಕಾಣುತ್ತಿದ್ದೇವೆ. ವೈರಸ್ ಸೋಂಕಿಗೆ ಒಳಗಾದ ಯಾರಿಗಾದರೂ, ನೀವು ಉಸಿರಾಟದ ತೊಂದರೆ, ತಲೆತಿರುಗುವಿಕೆ ಅಥವಾ ಎದೆ ನೋವು ಮುಂತಾದ ಯಾವುದೇ ರೋಗಲಕ್ಷಣಗಳು ಕಂಡು ಬಂದರೆ, ಕೂಡಲೇ ವೈದ್ಯಕೀಯ ಸಲಹೆ ಪಡೆಯಿರಿ.”

ವೈದ್ಯಕೀಯ ಉಪಚಾರವನ್ನು ಪಡೆಯುವುದು: ತಂತ್ರಜ್ಞಾನದ ಪಾತ್ರ
ಸಿವಿಡಿ ಹೊರೆಗೆ ನಾವು ಒತ್ತು ನೀಡುತ್ತಿದ್ದರೂ ಸಹ, ಈ ಹೊರೆಯನ್ನು ಎದುರಿಸುವಲ್ಲಿ ತಂತ್ರಜ್ಞಾನವು ವಹಿಸಿದ ಪಾತ್ರವನ್ನು ಒತ್ತಿಹೇಳುವುದು ಮುಖ್ಯ. ದಶಕಗಳಿಂದೀಚೆಗೆ ವೈದ್ಯಕೀಯ ಪ್ರಗತಿಗಳು ಸಿವಿಡಿಗಳನ್ನು ಚುರುಕಾದ ಆವಿಷ್ಕಾರಗಳೊಂದಿಗೆ ಪರಿಹರಿಸಲು ಸಹಾಯ ಮಾಡಿವೆ. ಉದಾಹರಣೆಗೆ, ಪರಿಧಮನಿಯ ಸ್ಟೆಂಟ್ಗನಳನ್ನು ತೆಗೆದುಕೊಂಡರೆ, ಹಿಂದಿನ ತಲೆಮಾರಿನ ಸ್ಟೆಂಟ್ಗೆಳಿಗೆ ಹೋಲಿಸಿದರೆ ಇತ್ತೀಚಿನ ಪೀಳಿಗೆಯ ಪ್ಲಾಟಿನಂ ಕ್ರೋಮಿಯಂ ಪರಿಧಮನಿಯು ಸಣ್ಣ ಪ್ರೊಫೈಲ್ಗನಳನ್ನು ಹೊಂದಿದೆ, 10000 ಕ್ಕೂ ಹೆಚ್ಚು ರೋಗಿಗಳ ಕ್ಲಿನಿಕಲ್ ಡೇಟಾದಿಂದ ಬೆಂಬಲಿತವಾದ ತೆಳುವಾದ ಸ್ಟ್ರಟ್ಗ,ಳನ್ನು ಹೊಂದಿದೆ. ರೋಗಿಗಳ ವಿಶಾಲ ಶ್ರೇಣಿಯೊಂದಿಗೆ ಚೆನ್ನಾಗಿ ಅಧ್ಯಯನ ಮಾಡಲ್ಪಟ್ಟ ಸ್ಟೆಂಟ್ ಅನ್ನು ಆಯ್ಕೆ ಮಾಡುವುದು ಯಾವಾಗಲೂ ಸೂಕ್ತವಾಗಿದೆ. ಇದರೊಂದಿಗೆ, ಇಂಟ್ರಾವಾಸ್ಕುಲರ್ ಅಲ್ಟ್ರಾಸೌಂಡ್ (ಐವಿಯುಎಸ್) ನಂತಹ ತಂತ್ರಜ್ಞಾನಗಳನ್ನು ಸಹ ನಾವು ಹೊಂದಿದ್ದೇವೆ, ಇದು ನೈಜ ಸಮಯದ ಚಿತ್ರವನ್ನು ರಚಿಸುವ ಮೂಲಕ ಅಪಧಮನಿಯನ್ನು ಹೆಚ್ಚು ನಿಖರವಾಗಿ ನೋಡಲು ವೈದ್ಯರಿಗೆ ಅನುವು ಮಾಡಿಕೊಡುವ ಮೂಲಕ ಉಪಚಾರದ ಕಾರ್ಯವಿಧಾನಗಳಿಗೆ ಮಾರ್ಗದರ್ಶನ ನೀಡುತ್ತದೆ.

ಜೀವನಶೈಲಿಯ ಬದಲಾವಣೆಗಳು `ಆರೋಗ್ಯಕರ ಹೃದಯ' ದ ಕಥೆಯ ಒಂದು ಭಾಗವಾಗಿದ್ದರೆ, ಇನ್ನೊಂದು ಹೊಸದಾಗಿ ಲಭ್ಯವಿರುವ ತಂತ್ರಜ್ಞಾನವಾಗಿದ್ದು ಅದು ಉತ್ತಮ ಜೀವನವನ್ನು ನಡೆಸಲು ನಿಮಗೆ ಸಹಾಯ ಮಾಡುತ್ತದೆ. ರೋಗಲಕ್ಷಣಗಳನ್ನು ತಪಾಸಣೆ ಮಾಡುವುದರಿಂದ ಹಿಡಿದು ಸರಿಯಾದ ಸಮಯದಲ್ಲಿ ವೈದ್ಯಕೀಯ ಉಪಚಾರವನ್ನು ಪಡೆಯುವವರೆಗೆ, ಹೃದಯ ರಕ್ಷಣೆಯು ಜೀವನಶೈಲಿಯನ್ನು ಬದಲಿಸುವ ಮತ್ತು ಕಥೆಯಲ್ಲಿ ತಂತ್ರಜ್ಞಾನವು ವಹಿಸುವ ಪಾತ್ರವನ್ನು ಅರ್ಥಮಾಡಿಕೊಳ್ಳುವ ಸಂಯೋಜನೆಯಾಗಿದೆ. ನಮ್ಮ ಹೃದಯಗಳನ್ನು ಹೆಚ್ಚಿನ ಅಪಾಯಕ್ಕೆ ತಳ್ಳಿದ ಸಾಂಕ್ರಾಮಿಕ ರೋಗದ ವಿರುದ್ಧ ನಾವು ಹೋರಾಡುವಾಗ, ಜಾಗರೂಕರಾಗಿರುವುದು ಮತ್ತು ಜಾಗೃತರಾಗಿರುವುದು ಬಹಳ ಮುಖ್ಯ!

Stay up to date on all the latest ಆರೋಗ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp