ಕಳೆದ 30 ವರ್ಷಗಳಲ್ಲಿ ಹೈಪರ್ ಟೆನ್ಷನ್ ಪ್ರಮಾಣ ದುಪ್ಪಟ್ಟು

ಅತ್ಯಧಿಕ ಆದಾಯ ಹೊಂದಿರುವ ದೇಶಗಳಾದ ಕೆನಡಾ, ಸ್ವಿಜರ್ ಲೆಂಡ್, ಯುಕೆ, ಸ್ಪೇನ್ ನಲ್ಲಿ ಹೈಪರ್ ಟೆನ್ಷನ್ ಕಡಿಮೆ ಪ್ರಮಾಣದಲ್ಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ 30 ವರ್ಷಗಳಲ್ಲಿ ಜಗತ್ತಿನಾದ್ಯಂತ ಹೈಪರ್ ಟೆನ್ಷನ್ ದುಪ್ಪಟ್ಟಾಗಿದೆಯೆಂದು ಸಂಶೋಧನಾ ವರದಿ ತಿಳಿಸಿದೆ. 30 ವರ್ಷಗಳ ಹಿಂದೆ 64 ಕೋಟಿ ಮಂದಿ ಹೈಪರ್ ತೆನ್ಷನ್ ನಿಂದ ಬಳಲುತ್ತಿದ್ದರು. ಅದೇ ಈಗ 120 ಕೋಟಿಗೆ ಏರಿಕೆಯಾಗಿದೆ.

ಪ್ರತಿಷ್ಟಿತ ಲ್ಯಾನ್ಸೆಟ್ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಾಯೋಜಿಸಿತ್ತು. 

ಸುಮಾರು184 ದೇಶಗಳಲ್ಲಿ 10 ಕೋಟಿಗೂ ಹೆಚ್ಚು ಜನರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಹೈಪರ್ ಟೆನ್ಷನ್ ಅನ್ನು ರಕ್ತದೊತ್ತಡ ಬಳಸಿ ಮಾಪನ ಮಾಡಲಾಗುತ್ತದೆ.

ಜಗತ್ತಿನಲ್ಲಿ ಅಧಿಕ ರಕ್ತದೊತ್ತಡದಿಂದ ಪ್ರತಿ ವರ್ಷ 85 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. 

ಅತ್ಯಧಿಕ ಆದಾಯ ಹೊಂದಿರುವ ದೇಶಗಳಾದ ಕೆನಡಾ, ಸ್ವಿಜರ್ ಲೆಂಡ್, ಯುಕೆ, ಸ್ಪೇನ್ ನಲ್ಲಿ ಹೈಪರ್ ಟೆನ್ಷನ್ ಕಡಿಮೆ ಪ್ರಮಾಣದಲ್ಲಿದೆ.

ಆದರೆ, ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳಾದ ಪೆರುಗ್ವೆ, ಹಂಗೇರಿ, ಪೋಲೆಂಡ್ ಕ್ರೊವೇಶಿಯಾ ಮುಂತಾದ ರಾಷ್ಟ್ರಗಳಲ್ಲಿ ಹೈಪರ್ ಟೆನ್ಷನ್ ನಿಂದ ಬಳಲುತ್ತಿರುವ ಸಂಖ್ಯೆ ಅಧಿಕವಾಗಿದೆ. ಸಂಶೋಧನೆಯಿಂದ ತಿಳಿದು ಬಂದಿರುವ ಅಚ್ಚರಿಯ ಸಂಗತಿಗಳಲ್ಲಿ ಇದೊಂದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com