ಕಳೆದ ಆರು ತಿಂಗಳಲ್ಲಿ ಶೇ.35ರಿಂದ ಶೇ.40ರಷ್ಟು ಮಧುಮೇಹ, ಅಧಿಕ ರಕ್ತದೊತ್ತಡ ರೋಗಿಗಳ ಹೆಚ್ಚಳ: ಕೋವಿಡ್ ಕಾರಣ?
ಕಳೆದ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಕೇವಲ 6 ತಿಂಗಳಲ್ಲಿ ರಾಜ್ಯದಲ್ಲಿ 59 ಸಾವಿರದ 632 ಮಂದಿ ಡಯಾಬಿಟಿಸ್ ಮತ್ತು ಬಿಪಿ ರೋಗಿಗಗಳು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ ಎಂದು ರಾಷ್ಟ್ರೀಯ ಡಯಾಬಿಟಿಸ್ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದ ಅಂಕಿಅಂಶ ಹೇಳುತ್ತದೆ.
Published: 12th November 2021 01:59 PM | Last Updated: 12th November 2021 01:59 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಕೇವಲ 6 ತಿಂಗಳಲ್ಲಿ ರಾಜ್ಯದಲ್ಲಿ 59 ಸಾವಿರದ 632 ಮಂದಿ ಡಯಾಬಿಟಿಸ್ ಮತ್ತು ಬಿಪಿ ರೋಗಿಗಗಳು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ ಎಂದು ರಾಷ್ಟ್ರೀಯ ಡಯಾಬಿಟಿಸ್ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದ ಅಂಕಿಅಂಶ ಹೇಳುತ್ತದೆ.
ಹೊಸದಾಗಿ ಡಯಾಬಿಟಿಸ್ ಕಂಡುಬಂದ ರೋಗಿಗಳಲ್ಲಿ ಶೇಕಡಾ 35ರಿಂದ ಶೇಕಡಾ 40ರಷ್ಟು ರೋಗಿಗಳಿಗೆ ಕೋವಿಡ್-19 ಸೋಂಕು ತಾಗಿ ಅದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು.
ಇದಕ್ಕೆ ಎರಡು ರೀತಿಯಲ್ಲಿ ಕಾರಣಗಳನ್ನು ಹುಡುಕಬಹುದು: ದೇಹದ ಕಾರ್ಯವಿಧಾನದಲ್ಲಿನ ಬದಲಾವಣೆಗಳಿಂದಾಗಿ ಕೋವಿಡ್ ಸ್ವತಃ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಮಧ್ಯಮದಿಂದ ಗಂಭೀರವಾದ ಕೋವಿಡ್ ಸೋಂಕನ್ನು ಹೊಂದಿರುವ ರೋಗಿಗಳಿಗೆ ಸ್ಟೀರಾಯ್ಡ್‌ಗಳನ್ನು ಹಾಕಲಾಗುತ್ತದೆ. ಸ್ಟೀರಾಯ್ಡ್‌ಗಳು ಮಧುಮೇಹವನ್ನು ತೊಡೆದುಹಾಕುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ, ಇದು ಟೈಪ್ -2 ಮಧುಮೇಹವನ್ನು ಹೆಚ್ಚಿಸುವ ಅಪಾಯವನ್ನು ಹೊಂದಿರುತ್ತದೆ ಎಂದು ಆಸ್ಟರ್ ಆರ್‌ವಿ ಆಸ್ಪತ್ರೆಯ ಮಧುಮೇಹ ತಜ್ಞ ಡಾ ಮಂಜುನಾಥ್ ಮಾಳಿಗೆ ಹೇಳುತ್ತಾರೆ.
ಈಗಾಗಲೇ ಕರ್ನಾಟಕದಲ್ಲಿ 4.24 ಲಕ್ಷ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಿದ್ದಾರೆ. ಅದರ ಜೊತೆಗೆ ಇದೀಗ ಹೊಸ ರೋಗಿಗಳ ಸೇರ್ಪಡೆ ಮತ್ತಷ್ಟು ಆತಂಕವುಂಟುಮಾಡಿದೆ. ಬಿಪಿ, ಡಯಾಬಿಟಿಸ್ ರೋಗಗಳು ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ, ಗ್ರಾಮೀಣ ಪ್ರದೇಶಗಳ ಜನರಲ್ಲಿ ವಿಶೇಷವಾಗಿ ಹಳ್ಳಿಗಳಿಂದ 2 ನೇ ಹಂತದ ನಗರಗಳಿಗೆ ವಲಸೆ ಬಂದವರಲ್ಲಿ ಕೂಡ ಕಂಡುಬರುತ್ತಿದೆ. ಕೊರೋನಾ ಸೋಂಕು ಬಿಪಿ, ಡಯಾಬಿಟಿಸ್ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ವರದಿಯಾಗುತ್ತಿದೆ ಎಂದು ವೈದ್ಯ ಡಾ ಸುಬ್ಬರಾವ್ ವಿ ಹೇಳುತ್ತಾರೆ.
ಕೋವಿಡ್ ರೋಗಿಗಗಳಲ್ಲಿ ಶೇಕಡಾ 30ರಿಂದ ಶೇಕಡಾ 40ರಷ್ಟು ಮಂದಿಯಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಕಂಡುಬರುತ್ತಿದೆ ಎಂದು ಖಾಸಗಿ ಆಸ್ಪತ್ರೆಗಳ ವೈದ್ಯರು ಹೇಳುತ್ತಾರೆ. ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಮಾಲೋಚಕ ಡಾ ವೈಶಾಲಿ ಶರ್ಮ, ವ್ಯಕ್ತಿಯಲ್ಲಿ ಸಾರ್ಸ್ -ಕೋವಿಡ್-2 ಸೋಂಕು ಒತ್ತಡಕ್ಕೆ ಒಳಗಾಗುತ್ತದೆ. ಈ ಶಾರೀರಿಕ ದೀರ್ಘಕಾಲದ ಒತ್ತಡವು ಬದಲಾದ ರೋಗನಿರೋಧಕ ಸ್ಥಿತಿ ಮತ್ತು ರೆನಿನ್ ಆಂಜಿಯೋಟೆನ್ಸಿನ್ ಅಲ್ಡೋಸ್ಟೆರಾನ್ ವ್ಯವಸ್ಥೆಯ ಸಕ್ರಿಯಗೊಳಿಸುವಿಕೆಯೊಂದಿಗೆ ಕೋವಿಡ್ ನಂತರ ಹೊಸ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಪ್ರಕರಣಗಳಿಗೆ ಕಾರಣವಾಗಿದೆ ಎನ್ನುತ್ತಾರೆ.
ಕೋವಿಡ್ ಮತ್ತು ಮಧುಮೇಹದ ನಡುವೆ ದ್ವಿಮುಖ ಸಂಬಂಧವಿದೆ ಎಂದು ಆಸ್ಪರ್ ಸಿಎಂಐ ಆಸ್ಪತ್ರೆಯ ಡಾ ಮಹೇಶ್ ಡಿ ಎಂ ಹೇಳುತ್ತಾರೆ.
ಮಧುಮೇಹವು ಕೋವಿಡ್ ಅನ್ನು ಹೆಚ್ಚಿಸುವ ಅಪಾಯ ಹೊಂದಿದ್ದರೂ, ಕೋವಿಡ್ -19 ರೋಗಿಗಳಲ್ಲಿ ಮಧುಮೇಹ ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಮಧುಮೇಹದ ಚಯಾಪಚಯ ತೊಡಕುಗಳು ಕಂಡುಬರುತ್ತವೆ. ಕೋವಿಡ್-ಪ್ರೇರಿತ ಮಧುಮೇಹವನ್ನು ಆರಂಭಿಕ ಹಂತಗಳಲ್ಲಿ, ರಕ್ತದಲ್ಲಿನ ಸಕ್ಕರೆ ಮಟ್ಟವು ತುಂಬಾ ಹೆಚ್ಚಿಲ್ಲದಿದ್ದಾಗ ಮತ್ತು ಜೀವನಶೈಲಿಯ ಮಾರ್ಪಾಡುಗಳಾದ ಆಹಾರ ನಿಯಂತ್ರಣ ಮತ್ತು ನಿಯಮಿತ ವ್ಯಾಯಾಮದಿಂದ ನಿಯಂತ್ರಿಸಬಹುದು ಎಂದು ವೈದ್ಯರು ಹೇಳುತ್ತಾರೆ.