ವೈದ್ಯಕೀಯ ಕ್ಷೇತ್ರದ ಅದ್ಭುತ: ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗೆ ಹಂದಿ ಮೂತ್ರಪಿಂಡ ಕಸಿ ಆಪರೇಷನ್‌ ಸಕ್ಸಸ್‌!

ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಅದ್ಭುತ ಸಂಭವಿಸಿದೆ. ಅಂಗಾಂಗಳ ಕಸಿಯಲ್ಲಿ ಹೊಸ ಅಧ್ಯಾಯಕ್ಕೆ  ಹೆಜ್ಜೆ ಇರಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನ್ಯೂಯಾರ್ಕ್: ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಅದ್ಭುತ ಸಂಭವಿಸಿದೆ. ಅಂಗಾಂಗಳ ಕಸಿಯಲ್ಲಿ ಹೊಸ ಅಧ್ಯಾಯಕ್ಕೆ  ಹೆಜ್ಜೆ ಇರಿಸಲಾಗಿದೆ.

ಅಮೇರಿಕಾದ ಕೆಲ ವಿಜ್ಞಾನಿಗಳು ಇತ್ತೀಚೆಗೆ ಹಂದಿಯ ಮೂತ್ರಪಿಂಡವನ್ನು ಮಾನವ ದೇಹಕ್ಕೆ ತಾತ್ಕಲಿಕವಾಗಿ ಕಸಿಮಾಡಿದ್ದರು. ಈ ಆಪರೇಷನ್‌ ಯಶಸ್ವಿಯಾಗಿದೆ ಮಾನವ ದೇಹದಲ್ಲಿ ಹಂದಿ ಮೂತ್ರಪಿಂಡ ಸಹಜವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅಂಗಾಂಗ ಕಸಿ ಸಾಮಾನ್ಯವಾಗಿದ್ದರೂ. ಅಂಗಾಂಗಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳವ ನಿಟ್ಟಿನಲ್ಲಿ ವಿಜ್ಞಾನಿಗಳು ಬಹಳಷ್ಟು ವರ್ಷಗಳಿಂದ ಪ್ರಯೋಗ ಮಾಡುತ್ತಿದ್ದಾರೆ. ಪ್ರಾಣಿಗಳ  ಅಂಗಾಂಗಳನ್ನು ಮನುಷ್ಯರಿಗೆ ಅಳವಡಿಸುವ ಸಂಬಂಧ ಸಂಶೋಧನೆ ನಡೆಯುತ್ತಿದೆ. 

ಇದರ ಭಾಗವಾಗಿ, ನ್ಯೂಯಾರ್ಕ್‌ನ ಎನ್‌ ವೈ ಯು ಲಾಂಗನ್ ಆರೋಗ್ಯ ಕೇಂದ್ರದ ವಿಜ್ಞಾನಿಗಳು ಹೊಸ ಪ್ರಯೋಗ ನಡೆಸಿದ್ದಾರೆ. ಮೆದುಳು ನಿಷ್ಕ್ರಿಯಗೊಂಡ ರೋಗಿಗೆ ಹಂದಿ ಮೂತ್ರಪಿಂಡ ಕಸಿ ಮಾಡಲು ನಿರ್ಧರಿಸಿದ್ದರು. ರೋಗಿಯ ಸಂಬಂಧಿಕರ ಒಪ್ಪಿಗೆಯೊಂದಿಗೆ ಕಳೆದ ತಿಂಗಳು ಆಪರೇಷನ್‌ ನಡೆಸಲಾಯಿತು. ಹಂದಿ ಮೂತ್ರಪಿಂಡವನ್ನು ರೋಗಿಯ ದೇಹದಲ್ಲಿ ಅಳವಡಿಸಿ ಮೂರು ದಿನಗಳ ಕಾಲ ಪರಿಶೀಲಿಸಿದರು. ಮೂತ್ರಪಿಂಡ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ, ರೋಗ ನಿರೋಧಕ ವ್ಯವಸ್ಥೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಕಂಡುಬಂದಿಲ್ಲ ಎಂದು ಸರ್ಜನ್‌ ರಾಬರ್ಟ್ ಮಾಂಟ್ಗೊಮೆರಿ ಹೇಳಿದ್ದಾರೆ.

ಅಂಗಾಂಗ ಕೊರತೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ವಿಜ್ಞಾನಿಗಳು ಕಳೆದ ಕೆಲವು ವರ್ಷಗಳಿಂದ ಹಂದಿಗಳ ಅಂಗಾಂಗಳ ಮೇಲೆ ಗಮನ ಹರಿಸುತ್ತಿದ್ದಾರೆ. ಆದರೆ, ಇಲ್ಲಿ ಕೆಲವು ಸಮಸ್ಯೆಗಳಿವೆ. ಹಂದಿ ಕೋಶಗಳಲ್ಲಿನ ಗ್ಲೂಕೋಸ್ ಮಾನವ ದೇಹದ ವ್ಯವಸ್ಥೆಗೆ  ಹೊಂದಿಕೆಯಾಗುವುದಿಲ್ಲ. ಪರಿಣಾಮವಾಗಿ, ಇದು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡಿ ತಿರಸ್ಕರಿಸಲ್ಪಡುತ್ತದೆ. ಈ ಹಿನ್ನಲೆಯಲ್ಲಿ ಹೊಸದಾಗಿ ನಡೆಸಿದ ಪ್ರಯೋಗದಲ್ಲಿ, ತಳೀಯವಾಗಿ ಮಾರ್ಪಡಿಸಿದ ಹಂದಿಯಿಂದ ಅಂಗವನ್ನು ಹೊರತೆಗೆಯಲಾಯಿತು. 

ಹಂದಿ ಕೋಶಗಳಲ್ಲಿನ ಸಕ್ಕರೆ ಮಟ್ಟವನ್ನು ತೆಗೆದು ಹಾಕಿ ಪ್ರತಿ ರಕ್ಷಣಾ ವ್ಯವಸ್ಥೆಯ ಮೇಲಿನ ದಾಳಿಯನ್ನು ತಡೆಯಲು ವಂಶವಾಹಿಗಳನ್ನು ಮಾರ್ಪಡಿಸಲಾಯಿತು. ತಳೀಯವಾಗಿ ಮಾರ್ಪಡಿಸಿದ ಹಂದಿಗಳನ್ನು ಗಾಲ್‌ ಸೇಪ್‌ ಎಂದು ಕರೆಯಲಾಗುತ್ತದೆ. ಗಾಲ್‌ ಸೇಪ್‌ ಅನ್ನು ಮಾಂಸ ಅಲರ್ಜಿ ಹೊಂದಿದವರಿಗೆ ಆಹಾರವನ್ನಾಗಿ, ಮಾನವ ಚಿಕಿತ್ಸೆಯಲ್ಲಿ ಸಂಪನ್ಮೂಲವಾಗಿ ಬಳಸಲಾಗುತ್ತದೆ. ಇವುಗಳಿಗೆ   ಅಮೆರಿಕಾದ  ಆಹಾರ ಮತ್ತು ಔಷಧ ಆಡಳಿತ 2020ರಲ್ಲಿ ಅನುಮೋದಿಸಿತು.

ಈ ಪ್ರಯೋಗ ಯಶಸ್ವಿಯಾಗಿದೆ, ಅಂಗಾಂಗ ಕಸಿ ಮಾಡುವಲ್ಲಿ ಮಹತ್ವದ ಪ್ರಗತಿಯಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಪ್ರಸ್ತುತ ವಿಶ್ವದಾದ್ಯಂತ ಅಂಗಾಂಗಗಳ ಕೊರತೆ ಇದೆ. ಅಮೆರಿಕಾ ಒಂದರೆಲ್ಲೇ ಒಂದು ಲಕ್ಷಕ್ಕೂ ಹೆಚ್ಚಿನ ಜನರು ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. ಅವರಲ್ಲಿ 90,000 ಕ್ಕಿಂತಲೂ ಹೆಚ್ಚು ಜನರು ಮೂತ್ರಪಿಂಡ ಬಾಧಿತರು. ಅಮೆರಿಕನ್ ನೆಟ್ವರ್ಕ್ ಫಾರ್ ಆರ್ಗನ್ ಶೇರಿಂಗ್ ಪ್ರಕಾರ, ಒಬ್ಬ ವ್ಯಕ್ತಿಗೆ ಮೂತ್ರಪಿಂಡ ಹೊಂದಿಸಲು ಸರಾಸರಿ ಮೂರರಿಂದ ಐದು ವರ್ಷಗಳು ಬೇಕಾಗುತ್ತದೆ. ಇದರೊಂದಿಗೆ, ವಿಜ್ಞಾನಿಗಳು ಪ್ರಾಣಿಗಳಿಂದ ಅಂಗಾಂಗಳನ್ನು ಸಂಗ್ರಹಿಸಿ ಮನುಷ್ಯರಲ್ಲಿ ಅಳವಡಿಸುವ ವಿಷಯ ಸಂಬಂಧ ವ್ಯಾಪಕವಾದ ಪ್ರಯೋಗ ನಡೆಸುತ್ತಿದ್ದಾರೆ.

ವಾಸ್ತವವಾಗಿ, ಪ್ರಾಣಿಗಳ ಅಂಗಗಳನ್ನು ಮನುಷ್ಯರಿಗೆ ಅಳವಡಿಸುವ ಪ್ರಯೋಗಗಳು 17 ನೇ ಶತಮಾನದಿಂದಲೂ ನಡೆಯುತ್ತಿವೆ. 20 ನೇ ಶತಮಾನದಲ್ಲಿ, ಕೆಲವು ವಿಜ್ಞಾನಿಗಳು ಬಬೂನ್ ಹೃದಯವನ್ನು ಮಗುವಿಗೆ ಅಳವಡಿಸಿ 21 ದಿನಗಳವರೆಗೆ ಬದುಕುವಂತೆ ಮಾಡಿದ್ದರು. ಇಂತಹ ಪ್ರಯೋಗಗಳು ಯಶಸ್ವಿಯಾದರೆ .. ಮಾನವ ಅಂಗಾಂಗ ಲಭ್ಯವಾಗುವವರೆಗೆ ಕೆಲ ಸಮಯ ಪ್ರಾಣಿಗಳ ಅಂಗಾಂಗಳ ಕಸಿ ಮಾಡಿ ಮಾನವ ಜೀವಗಳನ್ನು ಉಳಿಸಬಹುದು ಎಂಬುದು ವಿಜ್ಞಾನಿಗಳ ಆಶಯವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com