ಮಧುಮೇಹ ಹೆಚ್ಚಲು ಕರಿದ ಆಹಾರಗಳಾದ ಸಮೋಸ, ಚಿಪ್ಸ್ ಪಾತ್ರ ದೊಡ್ಡದು: ICMR ವರದಿ

ಮಧುಮೇಹದ ಅಪಾಯವನ್ನು ತಗ್ಗಿಸಲು ಕಡಿಮೆ ಪ್ರಮಾಣದಲ್ಲಿ ಅಡ್ವಾನ್ಸ್ಡ್ ಗ್ಲೈಕೇಶನ್ ಎಂಡ್ (AGEs) ಆಹಾರವನ್ನು ಅಳವಡಿಸಿಕೊಳ್ಳುವುದು ಪರಿಣಾಮಕಾರಿ ತಂತ್ರವಾಗಿದೆ ಎಂದು ವರದಿ ಸೂಚಿಸುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಸಂಸ್ಕರಿಸಿದ ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳಲ್ಲಿ ಅಡ್ವಾನ್ಸ್ಡ್ ಗ್ಲೈಕೇಶನ್ ಎಂಡ್-ಪ್ರೊಡಕ್ಟ್‌ಗಳಲ್ಲಿ (AGEs) ಅಧಿಕವಾಗಿರುವ ಕಾರಣ ಮಧುಮೇಹಿಗಳು ಇಂತಹ ಆಹಾರ ಸೇವಿಸಿದರೆ ಸಮಸ್ಯೆ ತೀವ್ರವಾಗುತ್ತದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕ್ಲಿನಿಕಲ್ ಪ್ರಯೋಗವು ತಿಳಿಸಿದೆ.

ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್, ಮಧುಮೇಹದಲ್ಲಿ ಸುಧಾರಿತ ಸಂಶೋಧನೆಗಾಗಿ ICMR ಕೇಂದ್ರದಿಂದ ಈ ಪ್ರಯೋಗ ನಡೆಸಲ್ಪಟ್ಟಿದ್ದು, ಈ ಅಧ್ಯಯನವು ಭಾರತದಲ್ಲಿ ಇದೇ ಮೊದಲನೆಯದಾಗಿದೆ. ಮಧುಮೇಹದ ಅಪಾಯವನ್ನು ತಗ್ಗಿಸಲು ಕಡಿಮೆ ಪ್ರಮಾಣದಲ್ಲಿ ಅಡ್ವಾನ್ಸ್ಡ್ ಗ್ಲೈಕೇಶನ್ ಎಂಡ್ (AGEs) ಆಹಾರವನ್ನು ಅಳವಡಿಸಿಕೊಳ್ಳುವುದು ಪರಿಣಾಮಕಾರಿ ತಂತ್ರವಾಗಿದೆ ಎಂದು ಸೂಚಿಸುತ್ತದೆ.

ಕೆಂಪು ಮಾಂಸ, ಫ್ರೆಂಚ್ ಫ್ರೈಗಳು, ಕರಿದ ಪದಾರ್ಥಗಳು, ಬೇಕರಿ ಉತ್ಪನ್ನಗಳು, ಪರೋಟ, ಸಮೋಸಾಗಳು ಮತ್ತು ಸಕ್ಕರೆಯ ಆಹಾರ ಗಳಲ್ಲಿ AGEs ಹೆಚ್ಚಿರುತ್ತದೆ. ಬಯೋಟೆಕ್ನಾಲಜಿ ಇಲಾಖೆಯಿಂದ ಧನಸಹಾಯ ಪಡೆದ ಸಂಶೋಧನೆಯ ವರದಿಯು ಕಳೆದ ವಾರ ಇಂಟರ್ನ್ಯಾಷನಲ್ ಜರ್ನಲ್ ಆಫ್ ಫುಡ್ ಸೈನ್ಸಸ್ ಅಂಡ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾಗಿದೆ ಎಂದು NDTV ವರದಿ ಮಾಡಿದೆ.

ಸುಧಾರಿತ ಗ್ಲೈಕೇಶನ್ ಎಂಡ್-ಉತ್ಪನ್ನಗಳು (AGEs) ಗ್ಲೈಕೇಶನ್ ಮೂಲಕ ರೂಪುಗೊಂಡ ಹಾನಿಕಾರಕ ಸಂಯುಕ್ತಗಳಾಗಿವೆ, ಈ ಪ್ರಕ್ರಿಯೆಯಲ್ಲಿ ಪ್ರೋಟೀನ್‌ಗಳು ಅಥವಾ ಲಿಪಿಡ್‌ಗಳನ್ನು ಆಲ್ಡೋಸ್ ಸಕ್ಕರೆಯನ್ನು, ಒಂದು ರೀತಿಯ ಕಾರ್ಬೋಹೈಡ್ರೇಟ್‌ಗಳಿಂದ ಮಾರ್ಪಡಿಸಲಾಗುತ್ತದೆ. AGEs ಗಳ ಅಧಿಕ ಸೇವನೆಯಿಂದ ಉರಿಯೂತ, ಆಕ್ಸಿಡೇಟಿವ್ ಒತ್ತಡ, ಇನ್ಸುಲಿನ್ ಉತ್ಪಾದನೆ ಕಡಿಮೆ ಮಾಡುತ್ತದೆ. ಹೀಗಾಗಿ ವಿವಿಧ ಆರೋಗ್ಯ ಸಮಸ್ಯೆಗಳು ಉಟಾಗುತ್ತವೆ.

12 ವಾರಗಳ ಕಾಲ ನಡೆದ ಅಧ್ಯಯನದಲ್ಲಿ 23 ಅಥವಾ ಅದಕ್ಕಿಂತ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (BMI) ಹೊಂದಿರುವ 38 ಅಧಿಕ ತೂಕ ಮತ್ತು ಸ್ಥೂಲಕಾಯದ ವಯಸ್ಕರನ್ನು ಒಳಗೊಂಡಿತ್ತು.

ಸಂಶೋಧಕರು ಎರಡು ಆಹಾರಗಳ ಪರಿಣಾಮಗಳನ್ನು ಹೋಲಿಸಿ ನೋಡಿದ್ದಾರೆ. ಒಂದು ಹೆಚ್ಚು AGE ಮತ್ತು ಇನ್ನೊಂದರಲ್ಲಿ ಕಡಿಮೆ AGE ಇರುವ ಆಹಾರ ಪದಾರ್ಥಗಳನ್ನು ಪರೀಕ್ಷಿಸಲಾಯಿತು. ಕಡಿಮೆ-AGE ಇರುವ ಆಹಾರದಲ್ಲಿ ಭಾಗವಹಿಸಿದವರಿಗೆ ಸುಧಾರಿತ ಇನ್ಸುಲಿನ್ ಸಂವೇದನೆ ಮತ್ತು ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟ ಕಂಡು ಬಂತು. ಆದರೆ ಹೆಚ್ಚಿನ AGeಇರುವ ಆಹಾರ ಸೇವಿಸಿದವರಲ್ಲಿ ಅಧಿಕ ಮಟ್ಟದ ಉರಿಯೂತವನ್ನು ಕಂಡು ಬಂದಿದೆ.

ಸಾಂದರ್ಭಿಕ ಚಿತ್ರ
ಆಹಾರ ಸುರಕ್ಷತಾ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನದಲ್ಲಿ ಕೇರಳ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಮಧುಮೇಹದ ಅಪಾಯವನ್ನು ತಗ್ಗಿಸಲು, ಹಸಿರು ಎಲೆಗಳ ತರಕಾರಿಗಳು, ಹಣ್ಣುಗಳು, ಮೀನುಗಳು, ಬೇಯಿಸಿದ ಆಹಾರಗಳು ಮತ್ತು ಕೆಂಪು ಅನ್ನದಲ್ಲಿ ಕಡಿಮೆ ಪ್ರಮಾಣದಲ್ಲಿ AGE ಇರುತ್ತದೆ ಹೀಗಾಗಿ ಇಂತಹ ಆಹಾರ ಸೇವಿಸಲು ಸಂಶೋಧಕರು ಶಿಫಾರಸ್ಸ ಮಾಡಿದ್ದಾರೆ.

ಕಡಿಮೆ-AGE ಆಹಾರಗಳು ಹೆಚ್ಚಿನ AGE ಆಹಾರಗಳಿಗೆ ಹೋಲಿಸಿದರೆ ಇನ್ಸುಲಿನ್ ಸೂಕ್ಷ್ಮತೆ ಮತ್ತು ಉರಿಯೂತದಲ್ಲಿ ಸುಧಾರಣೆಗಳನ್ನು ತೋರಿಸಿದೆ. ಈ ಅಧ್ಯಯನವು ಭಾರತದಲ್ಲಿ ಮೊದಲನೆಯದು, ಕಡಿಮೆ AGE ಆಹಾರಗಳು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ತಂತ್ರವಾಗಿದೆ ಎಂದು ಸೂಚಿಸುತ್ತದೆ ಎಂದು ಈ ಅಧ್ಯಯನವು ತೀರ್ಮಾನಿಸಿದೆ.

ಹುರಿಯುವುದು, ಕರಿಯುವುದು ಹಾಗು ಗ್ರಿಲ್ಲಿಂಗ್ ಮಾಡುವಂತಹ ಅಡುಗೆ ವಿಧಾನಗಳು AGE ಮಟ್ಟವನ್ನು ಹೆಚ್ಚಿಸುತ್ತವೆ, ಆದರೆ ಬೇಯಿಸಿದ ಆಹಾರದಲ್ಲಿ Age ಪ್ರಮಾಣ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೈಲೈಟ್ ಮಾಡಿದ್ದಾರೆ.

ಇತ್ತೀಚಿನ ಮಾಹಿತಿಯು 101 ಮಿಲಿಯನ್ ಭಾರತೀಯರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಸೂಚಿಸುತ್ತದೆ, ದೈಹಿಕ ನಿಷ್ಕ್ರಿಯತೆ ಮತ್ತು ಅನಾರೋಗ್ಯಕರ ಆಹಾರ ಹಾಗೂ ಜೀವನ ಶೈಲಿಯ ಬದಲಾವಣೆಯಿಂದ ಮಧು ಮೇಹಿಗಳ ಪ್ರಮಾಣ ಹೆಚ್ಚುತ್ತಿದೆ.

ಭಾರತದಲ್ಲಿ ಮಧುಮೇಹ ಸಾಂಕ್ರಾಮಿಕ ರೋಗವು ಪ್ರಾಥಮಿಕವಾಗಿ ಸ್ಥೂಲಕಾಯತೆ, ದೈಹಿಕ ನಿಷ್ಕ್ರಿಯತೆ ಮತ್ತು ವಯಸ್ಸಾದವರಲ್ಲಿ ಅನಾರೋಗ್ಯಕರ ಆಹಾರ ಸೇವನೆಯಿಂದ ಉಂಟಾಗುತ್ತದೆ ಎಂದು ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ಡಾ. ವಿ ಮೋಹನ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com