ನವದೆಹಲಿ: ಕರ್ನಾಟಕದ ಸುಪ್ರಸಿದ್ಧ ರಂಗೋಲಿ ಚಿತ್ರಕಲಾವಿದ, ಚಿತ್ರ ಪ್ರಾಧ್ಯಾಪಕ ಬಿ.ಪಿ. ಬಾಯರಿ ಎಂದೇ ಪ್ರಖ್ಯಾತರಾದ ದಿವಂಗತ ಬಾರ್ಕೂರು ಪರಮೇಶ್ವರ ಬಾಯಿರಿ ಅವರ ಜನ್ಮಶತಮಾನೋತ್ಸವವನ್ನು ದಿಲ್ಲಿಯಲ್ಲಿ ಮೇ 29ರಂದು ಆಚರಿಸಲಾಯಿತು.
ದೆಹಲಿ ಕನ್ನಡಿಗ ಪತ್ರಿಕೆಯ ಆಶ್ರಯದಲ್ಲಿ ಸಾಹಿತಿಗಳು, ಕಲಾವಿದರು, ಪ್ರಾಧ್ಯಾಪಕರು, ವಿಮರ್ಶಕರು, ಬುದ್ಧಿಜೀವಿಗಳು, ಕನ್ನಡ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಶತಮಾನೋತ್ಸವವನ್ನು ಉದ್ಘಾಟಿಸಿದ ದೆಹಲಿ ಕನ್ನಡಿಗ ಪತ್ರಿಕೆಯ ಸಂಪಾದಕ ಬಾ. ಸಾಮಗ ಮಾತನಾಡಿ, ಉಡುಪಿಯ ಶಾಲೆಗಳಲ್ಲಿ ಚಿತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಬಾಯಿರಿ ಅವರು ರಂಗೋಲಿ, ಚುಕ್ಕಿ ಚಿತ್ರಕಲೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿ ಮೆಚ್ಚುಗೆ ಪಡೆದಿದ್ದರು. ದೆಹಲಿ ಕನ್ನಡಿಗ ಪತ್ರಿಕೆ ಬಾಯಿರಿ ಸ್ಮಾರಕ ವಿಶಿಷ್ಠ ರಂಗೋಲಿ ಕಲಾವಿದರೊಬ್ಬರಿಗೆ ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಲಾವಿದೆ ಶ್ರೀಮತಿ ರಂಗನಾಯಕಿ ರಾಮಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಾಯಿರಿ ಅವರ ರಂಗೋಲಿ ಸಂಗ್ರಹದ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.