ಮುಂಬೈ: ತುಳು, ಕನ್ನಡದಲ್ಲಿ ಸುಮಾರು 15 ಕೃತಿಗಳನ್ನು ರಚಿಸಿರುವ ಡಾ. ಕರುಣಾಕರ ಶೆಟ್ಟಿ ಅವರ 4 ನೂತನ ಕೃತಿಗಳನ್ನು ಇತ್ತೀಚೆಗೆ ಇಲ್ಲಿನ ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಸಮರಸ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಅಭಿನಯ ಸಾಮ್ರಾಜ್ಯ ಮುಂಬೈ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕ ಅಧ್ಯಕ್ಷ ಎಚ್. ಬಿ.ಎಲ್. ರಾವ್ ಬಿಡುಗಡೆಗೊಳಿಸಿದರು.
ಬಿಡುಗಡೆಯಾದ ಕೃತಿಗಳು 'ವಿಚಾರ ವಿಮರ್ಶೆ', ಕತ್ತಲೆ ಸರಿದಾಗ (ಕಥಾ ಸಂಕಲನ), ಶಂಖನಾದ (ಅನುವಾದಿತ ಕತೆಗಳ ಸಂಕಲನ, ಹೊಸಹೆಜ್ಜೆ (ಕವನ ಸಂಕಲನ).
ಸುಜತಾ ಕರುಣಾಕರ ಶೆಟ್ಟಿ, ಎಸ್.ಕೆ. ಸುಂದರ್ ಇದ್ದರು. ಪೂರ್ಣಿಮಾ ಎಸ್. ಶೆಟ್ಟಿ, ಅಮಿತಾ ಭಾಗ್ವತ್, ಜಿ.ಪಿ. ಕುಸುಮಾ ಕೃತಿಗಳನ್ನು ಪರಿಚಯಿಸಿದರು. ಶಿಮಂತೂರು ಚಂದ್ರಹಾಸ ಸುವರ್ಣ ಸ್ವಾಗತಿಸಿದರು, ಹರೀಶ್ ಕೆ. ಹೆಜ್ಮಾಡಿ ನಿರೂಪಿಸಿದರು.
Advertisement