
ಪಣಜಿ(ವಾಸ್ಕೊ): ಬೈನಾ ಕನ್ನಡಿಗರು ಮತ್ತೆ ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ. ಶುಕ್ರವಾರ ಬೆಳಗ್ಗೆ 11ರೊಳಗೆ ಬುಡ್ಡೆಬಾಟ್ ಸ್ಫೋಟ್ಸ್ ಕ್ಲಬ್ ತೆರವುಗೊಳಿಸದಿದ್ದಲ್ಲಿ ಪೊಲೀಸರ ನೇತೃತ್ವದಲ್ಲಿ ಹೊರಹಾಕುವುದಾಗಿ ದಕ್ಷಿಣ ಗೋವಾ ಜಿಲ್ಲಾಧಿಕಾರಿ ಕಚೇರಿ ನೋಟಿಸ್ ಜಾರಿ ಮಾಡಿದೆ.
ಬೈನಾ ಸ್ಫೋಟ್ಸ್ ಕ್ಲಬ್‌ನಲ್ಲಿ ತುರ್ತು ವಸತಿ ಪಡೆದ ಕನ್ನಡಿಗರು ಗುರುವಾರ ಮಧ್ಯಾಹ್ನ ವಾಸ್ಕೊ ಉಪ ಜಿಲ್ಲಾಧಿಕಾರಿ ಗೌರೀಶ ಸಾಂಖವಾಳಕರ ಅವರನ್ನು ಭೇಟಿ ಮಾಡಲು ಸಾಕಷ್ಟು ಪ್ರಯತ್ನಿಸಿದರೂ, ಅವಕಾಶ ನೀಡಲಿಲ್ಲ. 30ಕ್ಕೂ ಅಧಿಕ ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಆದರೆ, ಗೋವಾ ಸರ್ಕಾರ ಏಕಾಏಕಿ ನಮ್ಮನ್ನು ಬೀದಿಪಾಲು ಮಾಡಲು ಹೊರಟಿದೆ.
ಕರ್ನಾಟಕ ಸರ್ಕಾರ ಕೂಡ ಏನೂ ಮಾಡಿಲ್ಲ. ಹೀಗಾಗಿ ನಾವು ಬದುಕುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಉತ್ತಮ ಎಂದೆನಿಸುತ್ತಿದೆ ಎಂದು ಇಲ್ಲಿನ ಕನ್ನಡಿಗರು ಅಳಲು ತೋಡಿಕೊಂಡಿದ್ದಾರೆ.
Advertisement