'ಅಲ್ ಇಖ್ ದಾಂ' ಗೆ ಚಾಲನೆ

'ಅಲ್ ಇಖ್ ದಾಂ' ಗೆ ಚಾಲನೆ
Updated on

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಜಿಸಿಸಿ ರಾಷ್ಟ್ರಗಳಾದ್ಯಂತ ಹಮ್ಮಿಕೊಂಡ "ಅಲ್ ಇಖ್ ದಾಂ" ಕ್ಯಾಂಪೈನ್ ಕಾರ್ಯಕ್ರಮಕ್ಕೆ ದುಬೈಯ ಒರ್ಲಂಜ್ ನಲ್ಲಿ ಕೆಸಿಎಫ್ ಸೆಂಟ್ರಲ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಬಹು ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲಿ ಯವರು ವಿದ್ಯುಕ್ತ ಚಾಲನೆ ನೀಡಿದರು.
ಕ್ಯಾಂಪೈನ್ ಉದ್ಘಾಟಿಸಿ ಮಾತನಾಡಿದ ಅವರು ಕೆಸಿಎಫ್ ಹಮ್ಮಿಕೊಂಡ "ಮುನ್ನಡೆಯ ನೂರು ದಿನಗಳು" (ಅಲ್ ಇಖ್ ದಾಂ) ವಿಷಯದ ಕುರಿತು ವಿವರಣೆ ನೀಡಿದರು. ಅನಿವಾಸಿ ಮುಸ್ಲಿಂ ಕನ್ನಡಿಗರ ಒಕ್ಕೂಟ ಕೆಸಿಎಫ್ ಇಂದು ಜಿಸಿಸಿ ಯಾದ್ಯಂತ ಬಹಳ ಉತ್ತಮ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ. ಕನ್ನಡಿಗ ಅಲ್ಪ ಸಂಖ್ಯಾತ ಮುಸಲ್ಮಾನರ  ಜೀವನ ಮಟ್ಟವನ್ನು ಅಭಿವ್ರದ್ಧಿಗೊಳಿಸಲು , ಕುಂಠಿತಗೊಂಡಿರುವ ಅಲ್ಪ ಸಂಖ್ಯಾತ ಮುಸಲ್ಮಾನರ ವಿಧ್ಯಾಭ್ಯಾಸ ಮಟ್ಟವನ್ನು ಸುಧಾರಿಸಲು, ಸಮಾಜಕ್ಕೆ ಶಾಪವಾಗಿ ಪರಿಣಮಿಸಿರುವ ವರದಕ್ಷಿಣಾ ಬಿಕ್ಷಾಟನೆಯನ್ನು ಆಮೂಲಾಗ್ರ ಕಿತ್ತೆಸೆಯಲು, ಅನಾಗರಿಕತೆಯತ್ತ ಸಂಚರಿಸುತ್ತಿರುವ ಯುವ ಪೀಳಿಗೆಯಲ್ಲಿ ಧಾರ್ಮಿಕತೆಯ ಅರಿವು ಮೂಡಿಸಲು, ಸುಸುಂದರ ಶಾಂತಿ ಸೌಹಾರ್ಧದ ತಾಣ ಕರ್ನಾಟಕದ ಮಣ್ಣಿನಲ್ಲಿ ಕೋಮು ಹಾಗೂ ಭೀಕರತೆಯ ವಿಷ ಬೀಜ ಬಿತ್ತುವ ಕುಬುದ್ದಿ ಶಕ್ತಿಗಳ ವಿರುದ್ದ ಶಾಂತಿ ಸಾಮರಸ್ಯದ ನೀತಿ ಪಾಠ ವಿವರಿಸಲು ಗಗನ ಚುಂಬಿ ಕಟ್ಟಡಗಳ ಬೀಡಾದ ಇಮಾರಾತಿನ ಹ್ರದಯ ಭಾಗದಲ್ಲಿ ರೂಪುಗೊಂಡ ಪ್ರಸ್ತುತ ಸಂಘಟನೆಯು ಇತರ ಸಂಘಟನೆಗಳಿಗಿಂತ ವ್ಯತಿರಿಕ್ತವಾಗಿದೆ. ವಿಭಿನ್ನ ಶೈಲಿಯ ಚಟುವಟಿಕೆಗಳನ್ನು ಹಮ್ಮಿಕೊಂಡು ವರ್ಷಾನುಗಟ್ಟಲೆ ಕಾರ್ಯಾಚರಿಸುತ್ತಿರುವ ಹಲವು ಸಂಘಟನೆಗಳಿಗೆ ಮಾದರೀಯೋಗ್ಯ ಸಂಘಟನೆಯಾಗಿ ಇಂದು ಕೆಸಿಎಫ್ ಮಾರ್ಪಟ್ಟಿದೆ.
ಧಾರ್ಮಿಕ ವಿಧ್ಯಾಭ್ಯಾಸದ ಕೊರತೆಯಿಂದ ನರಳುತ್ತಿರುವ ಉತ್ತರ ಕರ್ನಾಟಕದ ಪಾಮರ ಜನತೆಗೆ ಧಾರ್ಮಿಕ ವಿಜ್ಞಾನವನ್ನು ನೀಡುತ್ತಿರುವ ಕರ್ನಾಟಕ ಎಸ್ಎಸ್ಎಫ್ ನ IHSAN ತಂಡಕ್ಕೆ ಬೆನ್ನೆಲುಬಾಗಿ ನಿಂತಿರುವ ಕೆಸಿಎಫ್ ವಿಧ್ಯಾಭ್ಯಾಸ ಕ್ಷೇತ್ರದಲ್ಲಿ ಪರಿಣಾಮಕಾರಿ ಕ್ರಾಂತಿಯನ್ನು ಸ್ರಷ್ಟಿಸುತ್ತಿದೆ. ಧಾರ್ಮಿಕ ಜ್ಞಾನದ ಗಂಧ ಗಾಳಿಯೂ ಬೀಸದ ಉತ್ತರ ಕರ್ನಾಟಕದ ಜನತೆಯು ಇಂದು ಕೆಸಿಎಫ್ ನ ಸಹಾಯದಿಂದ IHSAN ತಂಡದ ಮೂಲಕ ಧಾರ್ಮಿಕ ಜ್ಞಾನವನ್ನು ಪಡೆದು ಇಸ್ಲಾಮಿನ ಆರಾಧನೆಗಳ ಮಾಧುರ್ಯವನ್ನು ಶ್ರವಿಸುವಂತಾಗಿದ್ದಾರೆ. ಮಾನವತಾ ಸಮಾರಂಭದ ಪೂರ್ವ ಸಿದ್ಧತಾ ಸಭೆಗಳನ್ನು ಯುಎಇ ಯ ಎಲ್ಲಾ ಎಮಿರೇಟ್ಸ್ ಗಳಲ್ಲಿ ಹಮ್ಮಿಕೊಂಡಿದ್ದು ಸಿದ್ಧತೆಗಳು ಬಹಳ ಬಿರುಸಿನಿಂದ ಸಾಗುತ್ತಿದೆ.
ಅದೇ ರೀತಿ ಕರ್ನಾಟಕ ಎಸ್ಎಸ್ಎಫ್ ನ ಪ್ರತೀ ಚಲನ ವಲನಗಳಲ್ಲಿ ಭಾಗಿಯಾಗುತ್ತಾ ಕಾರ್ಯಾಚರಿಸುತ್ತಿರುವ ಕೆಸಿಎಫ್ ಸಂಘಟನೆಯು ಕರ್ನಾಟಕ ಎಸ್ಎಸ್ಎಫ್ ತನ್ನ ಬೆಳ್ಳಿ ಹಬ್ಬ ಪ್ರಯುಕ್ತ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರು ಹಮ್ಮಿಕೊಂಡ ಕರ್ನಾಟಕ ಯಾತ್ರೆಯ ಯಶಸ್ವಿಗಾಗಿ ಅಹರ್ನಿಶಿ ದುಡಿಯುತ್ತಿದೆ. "ಮನುಕುಲವನ್ನು ಗೌರವಿಸಿ" ಎಂಬ ಶೀರ್ಷಿಕೆಯಡಿಯಲ್ಲಿ ಕಾಂತಪುರಂ ಉಸ್ತಾದರು ಗುಮ್ಮಟಗಳ ನಾಡು ಗುಲ್ಬರ್ಗಾದಿಂದ ಬಂದರು ನಾಡು ಮಂಗಳೂರಿನ ತನಕ ಹಮ್ಮಿಕೊಂಡ ಕರ್ನಾಟಕ ಯಾತ್ರೆಯ "ಬ್ರಹತ್ ಮಾನವತಾ ಸಮಾವೇಶ" ಪ್ರಚಾರ ಸಭೆಯು ದುಬೈಯ ಹ್ರದಯ ಭಾಗದಲ್ಲಿ ಹಮ್ಮಿಕೊಂಡಿದೆ.  ಕೆಸಿಎಫ್ ನ ಮುಂದಿನ ನೂರು ದಿನಗಳ ಯೋಜನೆಗಳ ಕುರಿತು ವಿವರಿಸಿದ ಝೈನಿಯವರು, ಈಗಾಗಲೇ ಕೆಸಿಎಫ್ ದೇಶ ವಿದೇಶಗಳಲ್ಲಿ ಸುನ್ನತ್ ಜಮಾಅತಿನ ಬ್ರಹತ್ ಅಲೆಯನ್ನು ಎಬ್ಬಿಸಿದ್ದು ಕೇವಲ ಬೆರಳೆಣಿಕೆಯ ದಿನಗಳ ಅಂತರದಲ್ಲಿ ಕೆಸಿಎಫ್ ಸಂಘಟನೆಯು ಜಿಸಿಸಿ ಯಾದ್ಯಂತ ಒಂದು ಬ್ರಹತ್ ಸಂಘಟನೆಯಾಗಿ ಹೊರ ಹೊಮ್ಮಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅದ್ಯಕ್ಷ ಬಹು ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲರವರು ಕೆಸಿಎಫ್ ನ ಸರ್ವತೋಮುಖ ಅಭಿವ್ರದ್ಧಿಗಾಗಿ ಶ್ರಮಿಸುತ್ತಿರುವ ನಿಷ್ಠಾವಂತ ಕಾರ್ಯಕರ್ತರನ್ನು ಅಭಿನಂದಿಸಿದರು. ಸಂಘಟನೆಯ ಉದ್ದೇಶ ಲಕ್ಷ್ಯವನ್ನು ವಿವರಿಸಿದ ಅವರು ಹ್ರಸ್ವ ಕಾಲದಲ್ಲಿ ಅಭಿನಂದನಾರ್ಹ ಅಭಿವ್ರದ್ದಿಯನ್ನು ಕಂಡ ಹೆಗ್ಗಳಿಕೆಗೆ ಕೆಸಿಎಫ್ ಪಾತ್ರವಾಗಿದೆ ಎಂದು ಅವರು ನುಡಿದರು.

ಬಿಡುವು ವೇಳೆಗಳನ್ನು ಸಂಘಟನೆಗಾಗಿ ಮುಡಿಪಾಗಿಟ್ಟು ಸಂಘಟನೆಯ ಶ್ರೆಯಾಭಿವ್ರದ್ದಿಗಾಗಿ ಶ್ರಮಿಸಲು ಅವರು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅನಿವಾಸಿ ಕನ್ನಡಿಗ, ಯುವ ಉದ್ಯಮಿ ಅಶ್ಫಾಖ್ ಬಜ್ಪೆ ಯವರು, ಕೆಸಿಎಫ್ ಹಮ್ಮಿಕೊಳ್ಳುತ್ತಿರುವ ಎಲ್ಲಾ ಸಂಭ್ರಮಗಳನ್ನು ಕೊಂಡಾಡಿದರು. ಭವಿಷ್ಯದ ದಿನಗಳಲ್ಲಿ ಸಂಘಟನೆಯೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ತನ್ನಿಂದಾದ ದೀನೀ ಹಾಗೂ ಸಮಾಜ ಸೇವೆಗೆ ಶ್ರಮಿಸುವಿನು ಎಂಬ ಹಂಬಲವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ICF RSC ನೇತಾರರು, ಉದ್ಯಮಿಗಳು, ಇತರ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು. ಕೆಸಿಎಫ್ ಹೊರತಂದ "ಮುನ್ನುಡಿ" ಯನ್ನು ICF ಜಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸಖಾಫಿ ಮಂಪಾಡ್ ರವರು ಬಿಡುಗಡೆಗೊಳಿಸಿದರು.
ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಸಂಘಟನಾ ಸಮಿತಿ ಅದ್ಯಕ್ಷ PM ಅಬ್ದುಲ್ ಹಮೀದ್ ಈಶ್ವರಮಂಗಿಲ, ಅಬ್ದುಲ್ ಅಝೀಝ್ ಸಖಾಫಿ ಮಂಪಾಡ್ ಮೊದಲಾದವರು ಸಮಾರಂಭಕ್ಕೆ ಶುಭಾಷಯ ಕೋರಿ ಮಾತನಾಡಿದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವ ಮಂಗಳೂರು ಸ್ವಾಗತಿಸಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಸಂಘಟನಾ ಸಮಿತಿ ಕನ್ ವೀನರ್ ಇಖ್ಬಾಲ್ ಕಾಜೂರು ಕಾರ್ಯಕ್ರಮ ನಿರೂಪಿಸಿದರು.

ವರದಿ : ಜೌಹರಿ ಅಳಿಕೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com