
ದುಬೈ: ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರು ಅ. 25 ರಿಂದ ನ. 02 ರ ತನಕ ಕರ್ನಾಟಕ ರಾಜ್ಯದಲ್ಲಿ ಹಮ್ಮಿಕೊಳ್ಳಲಿರುವ ”ಕರ್ನಾಟಕ ಯಾತ್ರೆ” ಯ ಪ್ರಯುಕ್ತ ಇದೇ ಸೆ. 26 ರ ಶುಕ್ರವಾರದಂದು ಅಪರಾಹ್ನ 03 ಗಂಟೆಗೆ ಸರಿಯಾಗಿ ದುಬೈ ಅಲ್ ಖಿಸೈಸ್ ಇಂಡಿಯನ್ ಅಕಾಡಮಿ ಶಾಲೆಯ ಸಭಾಂಗಣದಲ್ಲಿ ಅನಿವಾಸಿ ಕನ್ನಡಿಗರ ಸಾಂಸ್ಕೃತಿಕ ವೇದಿಕೆಯಾದ ”ಕರ್ನಾಟಕ ಕಲ್ಚರಲ್ ಫೌಂಡೇಶನ್” ಇದರ ಯುಎಇ ಸಮಿತಿ ನೇತೃತ್ವದಲ್ಲಿ ಬೃಹತ್ ಮಾನವತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಮುಸ್ಲಿಂ ವಿದ್ಯಾರ್ಥಿ ಯುವ ಶಕ್ತಿಯ ಕ್ರಿಯಾವೇದಿಕೆಯಾದ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್)ಇದರ ಬೆಳ್ಳಿಹಬ್ಬದ ಪ್ರಯುಕ್ತ ಕರ್ನಾಟಕ ಯಾತ್ರೆ ನಡೆಯಲಿದ್ದು ಅಕ್ಟೋಬರ್ 25 ರ ಶನಿವಾರ ಗುಲ್ಬರ್ಗ ದಿಂದ ಪ್ರಾರಂಭಗೊಂಡು ನವೆಂಬರ್ 02 ರಂದು ಮಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ರಾಜ್ಯದ 20 ಜಿಲ್ಲೆಗಳ ಮೂಲಕ ಹಾದು ಹೋಗುವ ಯಾತ್ರೆಯಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಬೃಹತ್ ಮಾನವತಾ ಸಮಾವೇಶಗಳಲ್ಲಿ ವಿವಿಧ ಧರ್ಮದ ಮುಖಂಡರು, ಸಾಂಸ್ಕೃತಿಕ ನಾಯಕರು, ರಾಜಕೀಯ ನಾಯಕರುಗಳು ಭಾಗವಹಿಸಲಿದ್ದಾರೆ. ಯಾತ್ರೆಯ ಉದ್ದಕ್ಕೂ ”ಮನುಕುಲವನ್ನು ಗೌರವಿಸಿ” ಎಂಬ ಘೋಷವಾಕ್ಯದ ಬಗ್ಗೆ ಚರ್ಚಿಸಲಾಗುವುದು.
ಈ ಸಂಬಂಧ ಸೆ.26 ರಂದು ದುಬೈಯಲ್ಲಿ ನಡೆಯಲಿರುವ ಮಾನವತಾ ಸಮಾವೇಶದಲ್ಲಿ ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಜನಾಬ್. ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಅ ಆಶೀರ್ವಚನ ನೀಡಲಿದ್ದಾರೆ. ಅಲ್ಲದೆ ಕರ್ನಾಟಕ ಸುನ್ನೀ ಕೊ-ಆರ್ಡಿನೇಶನ್ ಕಮಿಟಿ ಚೆರ್ಮ್ಯಾನ್ ಪಿ.ಎಂ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಕರ್ನಾಟಕ ಜಂಇಯ್ಯತುಲ್ ಉಲಮಾ ಉಪಾದ್ಯಕ್ಷ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಎಸ್.ವೈ.ಎಸ್ ರಾಜ್ಯ ಉಪಾಧ್ಯಕ್ಷ ಡಾ| ಮುಹಮ್ಮದ್ ಫಾಝಿಲ್ ರಿಜ್ವಿ, ಮುಸ್ಲಿಂ ಸ್ಟೂಡೆಂಟ್ಸ್ ಓರ್ಗನೈಝೇಶನ್ ಆಫ್ ಇಂಡಿಯ ರಾಷ್ಟ್ರೀಯ ಉಪಾಧ್ಯಕ್ಷ ಎಮ್ಮಸ್ಸೆಂ ಝೈನಿ ಕಾಮಿಲ್ ಸಖಾಫಿ, ಕರ್ನಾಟಕ ವಖ್ಫ್ ಬೋರ್ಡ್ ಸದಸ್ಯ ಶಾಫಿ ಸಅದಿ ಬೆಂಗಳೂರು, ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷ ಹಾಜಿ ಸಿ.ಎಂ ಇಬ್ರಾಹಿಂ ಬೆಂಗಳೂರು, ಮಂಗಳೂರು ಉತ್ತರದ ಶಾಸಕ ಮೊಇದೀನ್ ಬಾವ, ಪ್ರಮುಖ ಉದ್ಯಮಿಯೂ ಸಮಾಜ ಸೇವಕರೂ ಆದ ಅನ್ವರ್ ಶರೀಫ್ ಬೆಂಗಳೂರು, ಎಸ್.ಎಸ್.ಎ ಖಾದರ್ ಹಾಜಿ ಬೆಂಗಳೂರು, ಹಾಜಿ ಮುಮ್ತಾಝ್ ಅಲಿ ಮಂಗಳೂರು ಮುಂತಾದವರು ಭಾಷಣ ಮಾಡಲಿರುವರು. ಇದೇ ವೇದಿಕೆಯಲ್ಲಿ ಪ್ರಮುಖ ಉದ್ಯಮಿ ಹಾಜಿ ಬಿ.ಎಂ ಫಾರೂಖ್(ಫಿಝಾ ಗ್ರೂಪ್) ರವರನ್ನು ಸನ್ಮಾನಿಸಲಾಗುವುದು.
ಈ ಸಮಾವೇಶದಲ್ಲಿ ಸುಮಾರು ಮೂರು ಸಾವಿರದಷ್ಟು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗುದು ಎಂದು ”ಕರ್ನಾಟಕ ಕಲ್ಚರಲ್ ಫೌಂಡೇಶನ್”(ಕೆ.ಸಿ.ಎಫ್) ಮಾನವತಾ ಸಮಾವೇಶದ ಗವರ್ನಿಂಗ್ ಬೋರ್ಡ್ ಅಧ್ಯಕ್ಷ ಎಸ್.ಎಂ ಶರೀಫ್(ಖುಷಿ ಗ್ರೂಪ್) ಹಾಗೂ ಮುಸ್ಲಿಂ ಸ್ಟೂಡೆಂಟ್ಸ್ ಓರ್ಗನೈಝೇಶನ್ ಆಫ್ ಇಂಡಿಯ ರಾಷ್ಟ್ರೀಯ ಉಪಾಧ್ಯಕ್ಷ ಎಮ್ಮಸ್ಸೆಂ ಝೈನಿ ಕಾಮಿಲ್ ಸಖಾಫಿ ಯವರು ಮಾಧ್ಯಮಕ್ಕೆ ವಿವರಣೆ ನೀಡಿದರು. ಈ ವೇಳೆ ಕೆ.ಸಿ.ಎಫ್ .ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಶೇಖ್ ಬಾವ ಮಂಗಳೂರು, ಕೆ.ಸಿ.ಎಫ್ .ಯುಎಇ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಪಿ.ಎಂ.ಎಚ್ ಈಶ್ವರಮಂಗಿಲ, ಮುಸಫ್ಫಾ ಕೆ.ಸಿ.ಎಫ್ ಹಾಜಿ ಬ್ರೈಟ್ ಮಾರ್ಬಲ್, ಅಬುಧಾಬಿ ಕೆ.ಸಿ.ಎಫ್ ಹಾಜಿ ಅಬ್ದುಲ್ಲ ನಲ್ಕ, ಸಮಾವೇಶದ ಸ್ವಾಗತ ಸಮಿತಿ ಚೆರ್ಮ್ಯಾನ್ ಮಹಬೂಬ್ ರಹ್ಮಾನ್ ಸಖಾಫಿ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರು, ಅಶ್ರಫ್ ಅಡ್ಯಾರ್, ಅಬ್ದುಲ್ಲ ಉಸ್ತಾದ್ ಕುಡ್ತಮುಗೇರು ಮೊದಲಾದವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Advertisement