ದುಬೈ ಇಂಡಿಯನ್ ಕಲ್ಚರಲ್ ಸೊಸೈಟಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ-ಆಟೋಟ ಸ್ಪರ್ಧೆ

ದುಬೈ ಇಂಡಿಯನ್ ಕಲ್ಚರಲ್ ಸೊಸೈಟಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ-ಆಟೋಟ ಸ್ಪರ್ಧೆ

ದುಬೈ: ಇಂಡಿಯನ್ ಕಲ್ಚರಲ್ ಸೊಸೈಟಿ ಹಾಗೂ ಜಿಎಂಸಿ ಇದರ ಜಂಟಿ ಆಶ್ರಯದಲ್ಲಿ ಭಾರತದ 66ನೆ ಗಣರಾಜ್ಯೋತ್ಸವ ಅಂಗವಾಗಿ ಜನವರಿ 30ರಂದು ಆರೋಗ್ಯ ತಪಾಸಣಾ ಹಾಗೂ ಸಾಂಸ್ಕೃತಿಕ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.  ದುಬೈ ಸೋನಾಪುರದ ಮುಹೆಸ್ನಾದಲ್ಲಿರುವ ಜಿವಿನಿ ಲೇಬರ್ ಎಕಮೊಡೇಶನ್ ಕ್ಯಾಂಪ್‌ನಲ್ಲಿ ಏರ್ಪಡಿಸಲಾದ ಆರೋಗ್ಯ ತಪಾಸಣೆ ಶಿಬಿರ - ಸಾಂಸ್ಕೃತಿಕ ಆಟೋಟ ಸ್ಪರ್ಧೆಗಳನ್ನು ಭಾರತದ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಉದ್ಘಾಟಿಸಲಾಯಿತು.

ಆರೋಗ್ಯ ತಪಾಸಣಾ ಶಿಬಿರಕ್ಕೆ ಜಿಎಂಸಿಯ ಮೆಡಿಕಲ್ ವಿಭಾಗದ ಮೇಲ್ವಿಚಾರಕ  ಜುನೈದ್ ಮಲಪ್ಪುರಂ ಚಾಲನೆ ನೀಡಿದರು. ಶಿಬಿರದಲ್ಲಿ 200ಕ್ಕೂ ಅಧಿಕ ಮಂದಿಗೆ ಆರ್‌ಬಿಎಸ್, ಪಿಬಿ ಮತ್ತು ದಂತ ತಪಾಸಣೆಗಳನ್ನು ಉಚಿತವಾಗಿ ಮಾಡಲಾಯಿತು. ಜೊತೆಗೆ ಸಲಹೆ-ಸೂಚನೆಗಳನ್ನು ವೈದ್ಯಕೀಯ ಸಿಬ್ಬಂದಿಗಳಿಂದ ನೀಡಲಾಯಿತು. ಈ ವೇಳೆ ನೆರೆದ ಸಭಿಕರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು  ಏರ್ಪಡಿಸಿ, ಅವರನ್ನು ಮನರಂಜಿಸಲಾಯಿತು. ಮೂರು ಕಾಲಿನ ಓಟ, ಸಂಗೀತ ಕುರ್ಚಿ, ಹಗ್ಗ-ಜಗ್ಗಾಟ, ಚೀಟಿ ಎತ್ತಿ ನಟಿಸುವ ಸ್ಪರ್ಧೆ ಸೇರಿದಂತೆ ವಿವಿಧ ಮನರಂಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಮೂರು ಕಾಲಿನ ಓಟದಲ್ಲಿ ಪ್ರಥಮ ಸ್ಥಾನವನ್ನು ಯುವರಾಮ್ ಮತ್ತು ದೀದ್‌ನಾಥ್‌ಗಿರಿ, ದ್ವಿತೀಯ ಸ್ಥಾನವನ್ನು ವಲೀಹಸನ್ ಹಾಗೂ ಅಮ್ರೀತ್‌ಸಿಂಗ್, ಸಂಗೀತ ಕುರ್ಚಿಯಲ್ಲಿ ಮೊದಲ ಸ್ಥಾನವನ್ನು ಎಂ.ಅಮೀರ್ ಹುಸೇನ್, ದ್ವೀತಯ ಸ್ಥಾನವನ್ನು ಹಮದ ಹಾಗೂ ಹಗ್ಗಜಗ್ಗಾಟದಲ್ಲಿ ವಲೀಹಸನ್ ತಂಡ ಪ್ರಥಮ ಮತ್ತು ನವೀನ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಇಂಡಿಯನ್ ಕಲ್ಚರಲ್ ಸೊಸೈಟಿಯ ಅಧ್ಯಕ್ಷರಾದ ನಾಸಿರ್ ಕಾರಾಜೆ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಇಂಡಿಯನ್ ಕಲ್ಚರಲ್ ಸೊಸೈಟಿ ಯುಎಇಯಲ್ಲಿ ಮಾಡುತ್ತಿರುವ ಕಾರ್ಯಚಟುವಟಿಕೆ, ಸಾಮಾಜಿಕ ಸೇವೆಯನ್ನು ವಿವರಿಸಿದರು.

ಬಹುಮಾನ ವಿತರಣಾ ಕಾರ್ಯಕ್ರಮವನ್ನು ಇಂಡಿಯನ್ ಕಲ್ಚರಲ್ ಸೊಸೈಟಿಯ ಉಪಾಧ್ಯಕ್ಷ ರಝಾಕ್ ಸಾಬಾನ್ ಉಚ್ಚಿಲ-ಮೂಳೂರು, ಪ್ರಧಾನ ಕಾರ್ಯದರ್ಶಿ ಆಶಿರ್ ಚೊಕ್ಕಬೆಟ್ಟು ನೆರವೇರಿಸಿಕೊಟ್ಟರು. ಕಾರ್ಯಕ್ರಮದ ಉಸ್ತುವಾರಿಯನ್ನು ಆರಿಫ್ ಮಡಿಕೇರಿ, ಇಲಿಯಾಸ್ ಮೆಲ್ಕಾರ್, ಹಮೀದ್ ಸವನೂರು ಅಶ್ರಫ್ ಮೈಸೂರು, ಇಸ್ಮಾಯೀಲ್ ಮೂಳೂರು, ಸಮೀರ್ ವಿಟ್ಲ ಮತ್ತು ಸಂಶು ಉಡುಪಿ ತಂಡವು ವಹಿಸಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ಮೊಹಮ್ಮದ್ ಅಲಿ ಮೂಳೂರು ತಮ್ಮ ಆಕರ್ಷಕ ಶೈಲಿಯ ಮಾತಿನಿಂದ ನೆರೆದದವರ ಗಮನಸೆಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com