ಕೆಸಿಎಫ್ ದುಬೈ: ಅಲ್ ಕೂಝ್ ಸೆಕ್ಟರ್ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಕೊಳನಾಡ್ ಆಯ್ಕೆ

ಕೆಸಿಎಫ್ ದುಬೈ: ಅಲ್ ಕೂಝ್ ಸೆಕ್ಟರ್ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಕೊಳನಾಡ್ ಆಯ್ಕೆ
Updated on

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದುಬೈ ಝೋನ್ ಅಧೀನದ ಅಲ್ ಕೂಝ್ ಸೆಕ್ಟರ್ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಸೆಕ್ಟರ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕೆಸಿಎಫ್ ಯುಎಇ ನ್ಯಾಷನಲ್ ಕನ್ವೀನರ್ ಇಕ್ಬಾಲ್ ಕಾಜೂರು ಉದ್ಘಾಟನೆ ಮಾಡಿದರು.

ಕಾಸಿಂ ಮದನಿ ತೆಕ್ಕಾರು "ಮಾದರಿ ಕಾರ್ಯಕರ್ತ" ಎಂಬ ವಿಷಯದಲ್ಲಿ ತರಗತಿ ನಡೆಸಿ, ದುಆಗೆ ನೇತ್ರತ್ವವನ್ನು ನೀಡಿದರು. ಕಾರ್ಯದರ್ಶಿ ಹಸನ್ ಜನ್ಸಾಲೆ ವರದಿ ಮಂಡಿಸಿದರು.

ಚುನಾವಣಾ ವೀಕ್ಷರಾಗಿ ಆಗಮಿಸಿದ ನಿಯಾಝ್ ಬಸರ ನೇತ್ರತ್ವದಲ್ಲಿ ಈ ಕೆಳಗಿನವರನ್ನು ನೂತನ ಪಧಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರು : ಇಬ್ರಾಹಿಂ ಹಾಜಿ ಕೊಳನಾಡ್
ಪ್ರಧಾನ ಕಾರ್ಯದರ್ಶಿ : ಮುಸ್ತಫಾ ನಾವುಂದ
ಕೋಶಾಧಿಕಾರಿ : ತಯ್ಯುಬ್ ಪೂಂಜಾಲೆಕಟ್ಟೆ

ಸಂಘಟನಾ ವಿಭಾಗ
ಛೇರ್ಮನ್ : ಮನ್ಸೂರ್ ಅಬೂಬಕರ್ ಪಾವೂರ್ 
ಕನ್ವೀನರ್ :   ಅಬ್ದುಲ್ ರಹಿಮಾನ್ ತೀರ್ಥಹಳ್ಳಿ

ಶಿಕ್ಷಣ ವಿಭಾಗ
ಛೇರ್ಮನ್ : ಶರೀಫ್ ದೇರಳಕಟ್ಟೆ
ಕನ್ವೀನರ್ : ಅಷ್ಪಾಕ್ ಸುಳ್ಯ

ಸಾಂತ್ವನ ವಿಭಾಗ
ಛೇರ್ಮನ್ :   ನಾಸಿರ್ ಪರಪ್ಪು
ಕನ್ವೀನರ್ : ಸತ್ತಾರ್ ಉಪ್ಪಿನಂಗಡಿ

YES ಟೀಂ ಕನ್ವೀನರ್ :  ಅಬ್ದುಲ್ ಜಬ್ಬಾರ್
ಫ್ಯಾಮಿಲಿ ವಿಂಗ್ ಕನ್ವೀನರ್ : ಅಶ್ರಫ್ ಚಂದೊಟ್ಟು
ಲೀಗಲ್ ಕನ್ವೀನರ್ : ಶಹೀರ್ ಕರಾಯ

ಸಮಿತಿ ಸದಸ್ಯರುಗಳಾಗಿ 16 ಮಂದಿಯನ್ನು ಆಯ್ಕೆ ಮಾಡಲಾಯಿತು. ಕೊನೆಯಲ್ಲಿ ಶಹೀರ್ ಕರಾಯ ಸರ್ವರನ್ನು ವಂದಿಸಿದರು.

ವರದಿ: ರಿಯಾಝ್ ಕೊಂಡಂಗೇರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com