ಕೆಸಿಎಫ್ ಚಾರಿತ್ರಿಕ ಅಸ್ಸುಫ್ಫ ತರಗತಿಗೆ ಚಾಲನೆ

ಜಿಸಿಸಿ ಹಾಗೂ ಮಲೇಷ್ಯಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಮಧ್ಯೆ ನವ ಚೈತನ್ಯವನ್ನು ಸೃಷ್ಟಿಸುತ್ತಾ ಸಾಮಾಜಿಕ ಶೈಕ್ಷಣಿಕ ಜನಸೇವೆಗಳೊಂದಿಗೆ ಮುನ್ನುಗ್ಗುತ್ತಿರುವ...
ಕೆಸಿಎಫ್ ಚಾರಿತ್ರಿಕ ಅಸ್ಸುಫ್ಫ ತರಗತಿಗೆ ಚಾಲನೆ
Updated on

ದುಬೈ: ಜಿಸಿಸಿ ಹಾಗೂ ಮಲೇಷ್ಯಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಮಧ್ಯೆ ನವ ಚೈತನ್ಯವನ್ನು ಸೃಷ್ಟಿಸುತ್ತಾ ಸಾಮಾಜಿಕ ಶೈಕ್ಷಣಿಕ ಜನಸೇವೆಗಳೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಹೊಸ ಹೆಜ್ಜೆಗಳೊಂದಿಗೆ “ಅಸ್ಸುಫ್ಫ ತರಗತಿ” ಎಂಬ ವಿಶಿಷ್ಟ ಚಾರಿತ್ರಿಕ ಯೋಜನೆಯ ಉದ್ಘಾಟನಾ ಸಮಾರಂಭವು ಯುಎಇ ಯ ಮಾಯಾನಗರಿ ದುಬೈ ಐಸಿಎಫ್ ಸಭಾಂಗಣದಲ್ಲಿ ಆಧ್ಯಾತ್ಮಿಕ ನಾಯಕರ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಈಶ್ವರ ಮಂಗಲ ಅಧ್ಯಕ್ಷತೆಯಲ್ಲಿ ಕೆ ಹೆಚ್ ಅಹ್ಮದ್ ಪೈಝಿ ಉಸ್ತಾದ್ ರವರ ದುಆ ಮೂಲಕ ಕೆಸಿಎಫ್ ಯುಎಇ ಶಿಕ್ಷಣ ವಿಭಾಗದ ಕಾರ್ಯದರ್ಶಿ ಅಬ್ದುಲ್ ರಹೀಂ ಕೋಡಿ ಖಿರಾಅತ್ ಪಠಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕೆಸಿಎಫ್ ಯುಎಇ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನೂ ಸ್ವಾಗತಿಸಿ ಮಾತನಾಡುತ್ತಾ ಸುನ್ನಿ ಸಾಂಘಿಕ ಚಟುವಟಿಕೆಗೆ ಹೊಸ ಮೈಲುಗಲ್ಲಾಗಿ ಅಸ್ಸುಫ್ಫ ಧಾರ್ಮಿಕ ತರಗತಿಯ ಯೋಜನೆಯು ಜಿಸಿಸಿ ಹಾಗೂ ಮಲೇಷ್ಯಗಳಲ್ಲಿ ನವ ಚೈತನ್ಯದ ಅಲೆಗಳನ್ನೆಬ್ಬಿಸುತ್ತಿದೆ ಎಂದು ಸಾರಿದರು.

ಆದಿಪಿತ ಆದಂ ನಬಿ .. ರವರಿಂದ ಹಿಡಿದು ಪ್ರವಾದಿ ಮುಹಮ್ಮದ್ .. ರವರ ತನಕ ನಿಯೋಜಿತಗೊಂಡ ಪ್ರತಿಯೊಂದು ಪ್ರವಾದಿಗಳೂ ಆಯಾ ಕಾಲದಲ್ಲಿದ್ದ ಅನಾಚಾರ, ಅಧಾರ್ಮಿಕ ಮುಂತಾದ ಹೀನ ಕೃತ್ಯಗಳ ವಿರುದ್ಧ ಧನಾತ್ಮಕವಾದ ಪ್ರಭೋದನೆಗಳನ್ನು ನೀಡಿ ಪರಿವರ್ತನೆಗೆ ನಾಂದಿ ಹಾಡಿದರು. ಪ್ರವಾದಿ ಮುಹಮ್ಮದ್ ಸ.ಅ. ರವರೊಂದಿಗೆ ಪ್ರವಾದಿತ್ವ ಕೊನೆಗೊಳ್ಳುತ್ತದೆಯೇ ವಿನಹಃ ಸಮಾಜದಲ್ಲಿ ಬೇರೂರಿರುವ ಮಧ್ಯಪಾನ, ಜೂಜಾಟ, ವ್ಯಭಿಚಾರ, ದುಂದುವೆಚ್ಚ ಹಾಗೂ ಇನ್ನಿತರ ಹಲವಾರು ಇಸ್ಲಾಮೀ ವಿರುದ್ಧವಾದ ಅನಾಚಾರಗಳು ಸಂಪೂರ್ಣವಾಗಿ ಇಲ್ಲವಾಯಿತು ಎಂದರ್ಥವಲ್ಲ, ಬದಲು ಅವುಗಳ ವಿರುದ್ಧ ಸಮುದಾಯಕ್ಕೆ ಸದಾಚಾರದ ಸಂದೇಶಗಳನ್ನು ನೀಡಲು ಪ್ರವಾದಿಗಳ ವಾರಿಸುದಾರರಾಗಿರುವ ವಿದ್ವಾಂಸರು ಅವಿರತ ಪ್ರಯತ್ನ ಪಡಬೇಕಾದುದು ಅವರ ಜವಾಬ್ದಾರಿಯಾಗಿದೆ. ಅದರ ಭಾಗವಾಗಿ ವಿದ್ವಾಂಸರು ಉಮರಾಗಳನ್ನು ಜತೆಸೇರಿಸಿ ಸಾಂಘಿಕ ರಂಗದಲ್ಲಿ ವೈವಿದ್ಯಮಯವಾದ ಧಾರ್ಮಿಕ ಕಾರ್ಯಕ್ರಮಗಳನ್ನು ತಮ್ಮ ತ್ಯಾಗ ಪೂರ್ಣವಾದ ಪರಿಶ್ರಮದಿಂದ ಆಯೋಜಿಸುತ್ತಿದ್ದಾರೆ. ಇದೀಗ ಕೆಸಿಎಫ್ ಹಮ್ಮಿಕೊಂಡಿರುವ ಅಸ್ಸುಫ್ಫ ಧಾರ್ಮಿಕ ತರಗತಿಯು ಅತ್ಯಂತ ಶ್ಲಾಘನೀಯವಾಗಿದೆ. ಇದರ ಪ್ರಯೋಜನವನ್ನು ಕಾರ್ಯಕರ್ತರೆಲ್ಲರೂ ಪಡೆಯುವ ಮೂಲಕ ಯಶಸ್ವಿಗೊಳಿಸಬೇಕೆಂದು ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಡಾ|| ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳ ಕಟ್ಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕರೆ ನೀಡಿದರು.

ಕೆಸಿಎಫ್ ಅಂತರಾಷ್ಟ್ರ ಸಮಿತಿ ಅಧ್ಯಕ್ಷ, ಚಿಂತಕ ಅಸ್ಸುಫ್ಫ ವಿಶೇಷ ಪಠ್ಯ ಪದ್ದತಿಯ ತೃ ಎಸ್ ಪಿ ಹಂಝ ಸಖಾಫಿ ಬಂಟ್ವಾಳ “ಅಜ್ಞಾನದ ಕತ್ತಲಿನಿಂದ ಸುಜ್ಞಾನದ ಬೆಳಕಿನೆಡೆಗೆ” ವಿಷಯದಲ್ಲಿ ಸವಿಸ್ತಾರವಾಗಿ ಮಾತನಾಡುತ್ತಾ ವಿದ್ಯೆ ಪಡೆಯುವುದು ಪ್ರತಿಯೊಬ್ಬನ  ಮೂಲಭೂತ ಹಕ್ಕು. ಗತ ವಿದ್ವಾಂಸರು ತಮ್ಮ ಅಲ್ಪಾಯುಷ್ಯದಲ್ಲಿ ಆಧುನಿಕತೆಯ ಯಾವುದೇ ಸೌಲಭ್ಯಗಳಿಲ್ಲದ ಆ ಸಂದರ್ಬದಲ್ಲಿ ವಿದ್ಯೆಗೆ ಸಂಬಂವಾದ ವಿಷಯಗಳನ್ನು ಬರೆದಿಟ್ಟ ಗ್ರಂಥಗಳನ್ನು ಚಿಂತಿಸುವಾಗ ಅವರು ವಿದ್ಯೆಗೆ ನೀಡಿದ ಪ್ರಾಧಾನ್ಯತೆಯನ್ನು ನಮಗೆ ಊಹಿಸಲು ಅಸಾಧ್ಯ. ವ್ಯಕ್ತಿಯೊಬ್ಬನು ಇಸ್ಲಾಮಿನ ಜ್ಞಾನ ಇಲ್ಲದೆ ಕೇವಲ ಭಯದಿಂದ ಮಾಡುವ  ಕರ್ಮದಿಂದ ಪಾರತ್ರಿಕ ವಿಜಯ ಪಡೆಯುವುದು ಸಾಧ್ಯವಿಲ್ಲ. ಬದಲು ಜ್ಞಾನದೊಂದಿಗಿರುವ ಭಯ ಅತ್ಯಗತ್ಯವಾಗಿದೆ. ಜ್ಞಾನಗಳಿಕೆಗೆ ಸಮರ್ಥರಾದ ಭೋದಕರು ಹಾಗೂ ನೀಡುವ ವಿಷಯಗಳು ಅತೀ ಮುಖ್ಯ. ಆದ್ದರಿಂದಲೇ ಕೆಸಿಎಫ್ ತರಬೇತು ಪಡೆದ ಸಮರ್ಥರಾದ ಅಧ್ಯಾಪಕರನ್ನು ನೇಮಿಸಿ ಆಧುನಿಕ ಶೈಲಿಯೊಂದಿಗಿರುವ ಪಠ್ಯ ಪದ್ದತಿಯನ್ನು ರಚಿಸಿ ಅಸ್ಸುಫ್ಫ ತರಗತಿಯ ಯಶಸ್ವಿಗೆ ಕಠಿಣವಾದ ಪ್ರಯತ್ನಗಳನ್ನು ಮಾಡುತ್ತಿದೆ. ನನ್ನ ಸಾಂಘಿಕ ಬದುಕಿನಲ್ಲಿ ಈ ಒಂದು ವ್ಯವಸ್ಥಾಪಿತವಾದ ಹೊಸ ಹೆಜ್ಜೆಯನ್ನು ಪ್ರಥಮವಾಗಿ ನೋಡುತ್ತಿದ್ದೇನೆ. ಇದರ ಬೆಳವಣಿಗೆಯಲ್ಲಿ ತಮ್ಮೆಲ್ಲರ ಸಹಾಯ ಸಹಕಾರಗಳು ಕಾರ್ಯಚಟುವಟಿಕೆಗಳು ನಿರಂತರವಾಗಿ ಮುಂದುವರಿಯಬೇಕಿದೆ ಎಂದು ಸಾರಿದ ಎಸ್ ಪಿ ಉಸ್ತಾದರು ಇಮಾಂ ಬುಖಾರಿ ರ.ಅ. ರವರು ವರದಿ ಮಾಡಿದ ಹದೀಸನ್ನು ನೆರೆದಿದ್ದವರಿಗೆ ಹೇಳಿಕೊಡುವ ಮೂಲಕ ಅಸ್ಸುಫ್ಫ ತರಗತಿಗೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮನ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಗೊಂಡ ಡಾ. ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆಯವರನ್ನು ಕೆಸಿಎಫ್ ಅಸ್ಸುಫ್ಫ ಉದ್ಘಾಟನಾ ಸಮಾರಂಭದ ಸ್ವಾಗತ ಸಮಿತಿಯ ಅಧ್ಯಕ್ಷ ಮುಹಮ್ಮದ್ ನಝೀರ್ ಕೆಮ್ಮಾರ ಗೌರವ ವಸ್ತ್ರ ಹೊದಿಸಿ ಸನ್ಮಾನಿಸಿದರು. ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ನಾಯಕರಾದ ಎಸ್.ಪಿ ಹಂಝ ಸಖಾಫಿ ಬಂಟ್ವಾಳ, ಹಾಜಿ ಶೈಖ್ ಬಾವ ಮಂಗಳೂರು, ಹಬೀಬ್ ಕೋಯ ಕಾರವಾರಕುವೈಟ್, ಹಾಜಿ ಎನ್ ಎಸ್ ಅಬ್ದುಲ್ಲ ಮಂಜನಾಡಿಸೌದಿ ಅರೇಬಿಯಾ, ಪಿ ಎಂ ಅಬ್ದುಲ್ ಹಮೀದ್ ಈಶ್ವರಮಂಗಲ ರವರನ್ನು ಸಮಾರಂಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸದಸ್ಯ ಖಾಸಿಂ ಹಾಜಿ ಅಳಕೆಮಜಲು, ಒಮಾನ್ ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಂಝ ಸುಲೈಮಾನ್ ಕಣ್ಣಂಗಾರ್, ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ಕೊಡಗು ಹಾಗೂ ಐಸಿಎಫ್ ಯುಎಇ ನಾಯಕ ಹಮೀದ್ ಪರಪ್ಪ ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದರು. ಕೆಸಿಎಫ್ ಸದಸ್ಯತನ ಅಭಿಯಾನದಲ್ಲಿ ಅತಿ ಹೆಚ್ಚು ಸದಸ್ಯರನ್ನು ಪಡೆದ ಅಬುಧಾಬಿಯ ಮುಸಫ್ಪ ಸೆಕ್ಟರ್, ದುಬೈಯ ಹೋರ್ಲಾಂಝ್ ಸೆಕ್ಟರ್, ಶಾರ್ಜಾದ ರೋಲಾ ಸೆಕ್ಟರ್ ಗಳಿಗೆ ಉತ್ತಮ ಸೆಕ್ಟರ್ಪ್ರಶಸ್ತಿ ಫಲಕವನ್ನು ನೀಡಿ ಅಭಿನಂದಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com