
ದುಬ್ಯೆ: ಅನಿವಾಸಿ ಕನ್ನಡಿಗರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿಗಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದುಬ್ಯೆ ಝೋನ್ ಸಮಿತಿಯ ನೂತನ ಕಚೇರಿಯ ಉದ್ಘಾಟನೆಯು ಕೇರಳ ಸುನ್ನೀ ವಿದ್ವಾಂಸ ಒಕ್ಕೂಟದ ಸದಸ್ಯರಾದ ಶೈಖುನಾ ಮಂಞಪ್ಪಟ್ಟ ಹಂಝ ಮುಸ್ಲಿಯಾರ್ ರವರ ಸಾನಿಧ್ಯದಲ್ಲಿ ಸಯ್ಯಿದ್ ಇಸ್ಮಾಯಿಲ್ ಸಖಾಫಿ ಅಝ್ಹರ್ ತಂಙಳ್ ಕಾಸರಗೋಡು ಅವರು ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮವು ಕೆಸಿಎಫ್ ಯುಎಇ ಶಿಕ್ಷಣ ವಿಭಾಗ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ರವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ಉದ್ಘಾಟಿಸುತ್ತಾ ದುಬ್ಯೆ ಕೆಸಿಎಫ್ ಯುಎಇ ರಾಷ್ಟ್ರದ ಅತಿ ದೊಡ್ಡ ಝೋನ್ ಆಗಿದೆ. 13 ಸೆಕ್ಟರ್ ಗಳಲ್ಲಿ ಸಾವಿರಕ್ಕಿಂತ ಅಧಿಕ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ, ತಮ್ಮ ಕಾರ್ಯಾಚರಣೆ ಇನ್ನಷ್ಟು ಬಲಪಡಿಸಲು ಪ್ರಸ್ತುತ ಕಚೇರಿಯೂ ಪ್ರೇರಣೆಯಾಗಲಿ ಎಂದ ಉಸ್ತಾದರು ಪ್ರತಿ ಶುಕ್ರವಾರ ಸುಬಹ್ ನಮಾಝಿನ ಬಳಿಕ ಪ್ರವಾದಿ ಮುಹಮ್ಮದ್ (ಸ.ಅ) ರವರ ಸ್ವಲಾತ್ ಸಂಘಟಿಸಿ ಆಧ್ಯಾತ್ಮಿಕತೆಯತ್ತ ಕಾರ್ಯಕರ್ತರನ್ನು ಕೊಂಡೊಯ್ಯಲು ಎಲ್ಲರೂ ಸಹಕರಿಸಬೇಕೆಂದು ಸಲಹೆ ನೀಡಿದರು.
ಕೆಸಿಎಫ್ ಐ ಎನ್ ಸಿ ಸಂಘಟನಾ ಕಾರ್ಯದರ್ಶಿ ಪಿ.ಎಂ ಅಬ್ದುಲ್ ಹಮೀದ್ (ಪಿಎಂಎಚ್) ಈಶ್ವರಮಂಗಲ ಮಾತನಾಡಿ ದುಬ್ಯೆ ಝೋನ್ ಸಮಿತಿಯ ಕಾರ್ಯಚರಣೆಯ ಅಭಿವೃದ್ದಿಯ ದೃಷ್ಟಿಯಿಂದ ಒಂದು ಕಾರ್ಯಾಲಯಕ್ಕೆ ಚಾಲನೆ ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು, ಅಜ್ಮಾನ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದಿರ್ ಸಅದಿ ಸುಳ್ಯ, ಅಬುಧಾಬಿ ಸಮಿತಿ ಪ್ರಧಾನ ಕಾರ್ಯದರ್ಶಿ ಹಸ್ಯೆನಾರ್ ಅಮಾನಿ ಅಜ್ಜಾವರ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಸಮಾರಂಭದಲ್ಲಿ ಕೆಸಿಎಫ್ ಯುಎಇ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ಕೊಡಗು, ಕೆ.ಎಚ್ ಅಹ್ಮದ್ ಫ್ಯೆಝಿ ಕಕ್ಕಿಂಜೆ, ಅಬೂಬಕರ್ ಉಸ್ತಾದ್ ಕೊಡುಂಗ್ಯೆ, ಹುಸ್ಯೆನ್ ಹಾಜಿ ಕಿನ್ಯ, ಅಬೂಬಕರ್ ಕೊಟ್ಟಮುಡಿ, ಅಬ್ದುಲ್ ಕರೀಂ ಹಾಜಿ ಮಂಗಳೂರು, ಇಕ್ಬಾಲ್ ಕಾಜೂರು, ಅಬ್ದುಲ್ಲ ಮುಸ್ಲಿಯಾರ್ ಕುಡ್ತಮುಗರು, ಶುಕೂರು ಮಣಿಲ, ಅಬ್ದುಲ್ಲ ಹಾಜಿ ನಲ್ಕ, ಇಬ್ರಾಹಿಂ ಹಾಜಿ ಕಿನ್ಯ, ಮುಹಮ್ಮದ್ ರಫೀಖ್ ಚಾಮಿಯಾಲ, ಖಲೀಲ್ ಬಾಷ ಮಡಿಕೇರಿ, ಅಬ್ದುರ್ರಹೀಂ ಕೋಡಿ ಕುಂದಾಪುರ, ರಫೀಖ್ ಜೌಹರಿ ಅಳಿಕೆ, ಇ.ಕೆ ಇಬ್ರಾಹಿಂ ಕುಂಞ ಕಿನ್ಯ, ಯೂಸುಫ್ ಆರ್ಲಪದವು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸಯ್ಯಿದ್ ಇಸ್ಮಾಯಿಲ್ ಸಖಾಫಿ ತಂಙಳ್ ರವರ ನೇತೃತ್ವದಲ್ಲಿ ಬದ್ರ್ ಮೌಲಿದ್ ಹಾಗೂ ಕೊನೆಯಲ್ಲಿ ನೆರೆದ ಸರ್ವರಿಗೂ ಇಫ್ತಾರ್ ಕೂಟದ ವ್ಯವಸ್ಥೆ ಮಾಡಲಾಗಿತ್ತು.
Advertisement