ಕನ್ನಡ ಚಿತ್ರದಲ್ಲಿ ನಟಿಸುವಾಸೆ: ಖುಷಿ ಮಾತು

ಖುಷಿ ಮುಖರ್ಜಿ
ಖುಷಿ ಮುಖರ್ಜಿ
Updated on

ಬಹುಭಾಷೆ ತಾರೆಯಾಗಲು ಹೊರಟಿರುವ ನಟಿ ಖುಷಿ ಮುಖರ್ಜಿ ಈಗಾಗಲೇ ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೇ ತೆಲುಗು ಚಿತ್ರಕ್ಕೆ ಡೇಟ್ಸ್ ಕೊಡದಿದ್ದರೆ ಈಕೆ ಇಷ್ಟೊತ್ತಿಗೆ ಕನ್ನಡ ಚಿತ್ರಕ್ಕೆ ಬಣ್ಣ ಹಚ್ಚಬೇಕಿತ್ತು. ಆದರೂ ಕನ್ನಡದಲ್ಲಿ ನಟಿಸಲೇಬೇಕು ಎಂದುಕೊಂಡಿರುವ ಖುಷಿ, ಮೂಲತಃ ಬಾಂಬೆ ಬೆಡಗಿ. ಪಾತ್ರಕ್ಕೆ ತಕ್ಕಂತೆ ಕಾಸ್ಟ್ಯೂಮ್ ತೊಡಲು ಸಿದ್ಧ ಎನ್ನುವುದು ಈಕೆಯ ನಟನಾ ಪಾಲಿಸಿ ಇರಬೇಕು!

ಇತ್ತೀಚಿಗೆ ಸಿಲಿಕಾನ್ ಸಿಟಿ ಬೆಂಗಳೂರಿನ ರ್ಯಾಂಪ್ ಮೇಲೆ ವಾಕ್ ಮಾಡಲು ಬಂದಿದ್ದ ಖುಷಿ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುವ ಕನಸು ಹಂಚಿಕೊಂಡರು. ಬಾಲಿವುಡ್ ನಟಿ ಕಂ ಮಾಡೆಲ್ ಖುಷಿ ಮುಖರ್ಜಿ ಜತೆ ನಡೆಸಿದ ಚಿಟ್ ಚಾಟ್ ಇದು.

ಇಲ್ಲಿವರೆಗೂ ನೀವು ಅಭಿನಯಿಸರುವ ಚಿತ್ರಗಳು ಯಾವುವು?
ತಮಿಳಿನಲ್ಲಿ 'ಅಂಜಲಾ ತುರಾಯ್‌' ಚಿತ್ರದಲ್ಲಿ ನಟಿಸಿದ್ದೆ. ಎ.ಆರ್.ಬಾಬಿ ನಿರ್ದೇಶನದ ಈ ಚಿತ್ರ ಬಿಡುಗಡೆಯಾಗಿದೆ. ನಂತರ ತೆಲುಗಿನ ಪೂರಿ ಜಗನ್ನಾಥ್ ನಿರ್ದೇಶನದ 'ಹಾರ್ಟ್ ಎಟಾಕ್‌' ಚಿತ್ರದಲ್ಲಿ ಅಭಿನಯಿಸಿದ್ದೇನೆ. ಇದು ನಾಯಕ ನಿತಿನ್ ಸೇರಿದಂತೆ ಎಲ್ಲರಿಗೂ ಬ್ರೇಕ್ ಕೊಟ್ಟ ಸಿನಿಮಾ. ಮತ್ತೆ ತೆಲುಗಿನಲ್ಲೇ 'ದೊಂಗ ಪ್ರೇಮ' ಚಿತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರವನ್ನು ಜೈ ಅಕಾಶ್ ನಿರ್ದೇಶಿಸಿ ನಾಯಕನಾಗಿ ಅಭಿನಯಸಿದ್ದಾರೆ. ಇದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅಲ್ಲದೆ ಇತ್ತೀಚೆಗಷ್ಟೆ ತಮಿಳಿನಲ್ಲಿ ಅಭಿನಯಿಸಿರುವ 'ಅವತಾರಂ' ಚಿತ್ರ ಸಹ ಬಿಡುಗಡೆಯ ಹಂತದಲ್ಲಿದ್ದು, 'ವೀಡು ವಿರಪ್ಪಕ್ಕು' ಚಿತ್ರ ಪ್ರೀ ಪ್ರೋಡಕ್ಷನಲ್ಲಿದೆ.

ನೀವು ಚಿತ್ರರಂಗಕ್ಕೆ ಬಂದಿದ್ದು ಹೇಗೆ?
ನನ್ನ ಮಾಡೆಲಿಂಗ್ ವೃತ್ತಿ. ಮುಂಬಾಯಿ, ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿದಂತೆ ಸಾಕಷ್ಟು ಕಡೆ ರ್ಯಾಂಪ್ ಶೋಗಳಲ್ಲಿ ಭಾಗವಹಿಸುತ್ತಿದ್ದೆ. ಅಲ್ಲದೆ ಹಲವು ಉತ್ಪನ್ನಗಳಲ್ಲೂ ಕಾಣಿಸಿಕೊಂಡಿದ್ದೆ. ಒಮ್ಮೆ ಹೈದರಾಬಾದ್‌ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಭಾಗವಹಿಸಲು ಹೋಗಿದ್ದಾಗ ತೆಲುಗು ಚಿತ್ರದಲ್ಲಿ ನಟಿಸುವ ಅವಕಾಶ ಬಂತು.

ನೀವು ಇಷ್ಟಪಡುವಂಥ ಪಾತ್ರಗಳ ಬಗ್ಗೆ ಹೇಳಿ?
ಇಂಥ ಪಾತ್ರವೇ ಅಂತೇನಿಲ್ಲ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಯಾವುದೇ ರೀತಿಯ ಪಾತ್ರ ಕೊಟ್ಟರೂ ನಾನು ನಿಭಾಯಿಸಬಲ್ಲೆ. ಐಟಂ ಹಾಡಿಗೆ ಕುಣಿಯಲಿಕ್ಕೂ ಸಿದ್ಧ

ನಿಮ್ಮ ನೆಚ್ಚಿನ ನಟ, ನಟಿ ಯಾರು?
ನಟ ಅಮೀರ್ ಖಾನ್ ಹಾಗೂ ನಟಿ ಮಾಧುರಿ ದೀಕ್ಷಿತ್

ಇಷ್ಟುಪಟ್ಟು ನೋಡಿದ ಸಿನಿಮಾಗಳು?
3 ಈಡಿಯೆಟ್ಸ್, ಅವತಾರ್, ಟೈಟಾನಿಕ್, ಚೆನ್ನೈ ಎಕ್ಸ್‌ಪ್ರೆಸ್, ಗಜನಿ ಸಿನಿಮಾಗಳು. 'ಪಿಕೆ' ಚಿತ್ರಕ್ಕಾಗಿ ಕಾಯುತ್ತಿರುವೆ.

ನಿಮ್ಮ ಆಸಕ್ತಿ ಕ್ಷೇತ್ರಗಳು ಯಾವುವು?
ಸಿನಿಮಾ, ಜಾಹೀರಾತು, ಆಲ್ಬಂ, ರ್ಯಾಂಪ್ ಶೋ ಹಾಗೂ ಸ್ಟೇಜ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.

ಅಂದಹಾಗೆ ನೀವು ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿರಬೇಕಲ್ಲವೇ?
ಹೌದು, ಯುಟಿವಿ ನಡೆಸಿಕೊಡುತ್ತಿದ್ದ 'ಬಿಂದಾಸ್‌' ಎನ್ನುವ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದೆ.

ನೀವು ಯಾವುದರಲ್ಲಿ ಹೆಚ್ಚು ಪರಿಣತಿ ಪಡೆದಿದ್ದೀರಿ?
ಯಾವುದೇ ರೀತಿಯ ನೃತ್ಯ ಮಾಡಬಲ್ಲೆ. ತೆರೆ ಮೇಲೆ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ. ನನ್ನ ಕಣ್ಣು ತುಂಬಾ ಪವರ್ ಆಂಡ್ ಹಾಟ್.

ಮಾಡೆಲಿಂಗ್ ಲೋಕದಲ್ಲಿ ಕ್ಯಾಟ್ ವಾಕ್ ಮಾಡಿದವರೆಲ್ಲ ಸುಲಭವಾಗಿ ಸಿನಿಮಾ ನಟಿಯಾಗಬಹುದೇ?
ಹಾಗೇನು ಇಲ್ಲ. ಮಾಡೆಲ್ ಜಗತ್ತು ಬೇರೆ, ಸಿನಿಮಾ ಜಗತ್ತೇ ಬೇರೆ. ಆದರೆ ಎರಡಕ್ಕೂ ಪ್ರತಿಭೆ ಬೇಕು. ಎಷ್ಟೋ ಟಾಪ್ ಮಾಡೆಲ್‌ಗಳು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಆಗುತ್ತಿಲ್ಲ. ಸಿನಿಮಾ ಅಂದಾಗ ಅದಕ್ಕೆ ಅದರದ್ದೇ ತಯಾರಿ ಬೇಕು.

ಯಾವ ಭಾಷೆ ಗೊತ್ತು?
ಹಿಂದಿ, ಇಂಗ್ಲಿಷ್, ಬೆಂಗಾಲಿ, ಮರಾಠಿ ಹಾಗೂ ತೆಲುಗು, ತಮಿಳು ಸ್ವಲ್ಪ ಗೊತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com