ಆಂಧ್ರಪ್ರದೇಶ, ತೆಲಂಗಾಣ ನಮಗೆ ಪ್ರತಿಸ್ಪರ್ಧಿಯಲ್ಲ: ಸಿಎಂ

ಸ್ವಪಕ್ಷೀಯ ಹಾಗೂ ಪ್ರತಿಪಕ್ಷಗಳಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಸತತ ಹೋರಾಟದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ....
ಸಿದ್ದರಾಮಯ್ಯ
ಸಿದ್ದರಾಮಯ್ಯ

ಸ್ವಪಕ್ಷೀಯ ಹಾಗೂ ಪ್ರತಿಪಕ್ಷಗಳಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಸತತ ಹೋರಾಟದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬುಧವಾರಕ್ಕೆ ಎರಡು ವರ್ಷ ಪೂರೈಸುತ್ತಿದೆ.

ಸರ್ಕಾರದ ಎರಡು ವರ್ಷದ ಸಾಧನೆಗಳ ಬಗ್ಗೆ ಯಾವುದೇ ಅಸಮಾಧನ ಇಲ್ಲ ಎಂದಿರುವ ಸಿಎಂ, ಮುಂಬರುವ ದಿನಗಳಲ್ಲಿ ಬೆಂಗಳೂರಿನ ಮೂಲಸೌಕರ್ಯಗಳ ಗುಣಮಟ್ಟ ಹೆಚ್ಚಳ ಸೇರಿದಂತೆ ಮತ್ತಷ್ಚು ಉತ್ತಮ ಕೆಲಸ ಮಾಡುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಸ್ಥಿರ ಸರ್ಕಾರ ಹೊರತುಪಡಿಸಿ, ಕಳೆದ ಎರಡು ವರ್ಷಗಳಲ್ಲಿ ಸರ್ಕಾರ ಬಂಡವಾಳ ಆಕರ್ಷಿಸುವಲ್ಲಿ ಹಾಗೂ ಅಭಿವೃದ್ದಿ ಸಾಧಿಸುವಲ್ಲಿ ವಿಫಲವಾಗಿದೆ?

ಇಲ್ಲ. ಅದು ಸುಳ್ಳು, ನಾವು 95 ಸಾವಿರ ಕೋಟಿ ರುಪಾಯಿ ಮೊತ್ತದ 255 ಯೋಜನೆಗಳಿಗೆ ಅನುಮೊದನೆ ನೀಡಿದ್ದೇನೆ. ಈ ಮೂಲಕ ಸುಮಾರು ಎರಡು ಲಕ್ಷ ಉದ್ಯೋಗ ಸೃಷ್ಠಿಸಲಾಗಿದೆ. ಈ ಹಿಂದಿನ ಸರ್ಕಾರಕ್ಕೆ ಹೋಲಿಕೆ ಮಾಡಿದೆ ಕಳೆದ ಎರಡು ವರ್ಷಗಳಲ್ಲಿ ನಾವು ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದೇವೆ. ಇನ್ನು ಜಿಡಿಪಿ ದರ ಪರಿಗಣಿಸಿದರೂ ಉತ್ತಮ ಅಭಿವೃದ್ಧಿ ದರ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು.

ಕೇಂದ್ರ ಸರ್ಕಾರದ ಹೆಚ್ಚಿನ ಅನುದಾನದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಬಂಡವಾಳ ಹೂಡಿಕೆಗೆ ಹೆಚ್ಚು ಸೂಕ್ತ ಎಂಬ ವರದಿಗಳಿವೆ?

ಇಲ್ಲ ಇದು ತಪ್ಪು. ಹೂಡಿಕೆ ವಿಚಾರದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಕರ್ನಾಟಕಕ್ಕೆ ಪ್ರತಿಸ್ಪರ್ಧಿಗಳಲ್ಲ. ವಿಶ್ವಬ್ಯಾಂಕ್ ಮತ್ತು ವಿಶ್ವ ಆರ್ಥಿಕ ವೇದಿಕೆ ಪ್ರಕಾರ, ಕರ್ನಾಟಕ ಅತ್ಯಂತ ಆದ್ಯತೆಯ ವ್ಯಾಪಾರ ತಾಣವಾಗಿದೆ. ವಿಶ್ವಬ್ಯಾಂಕ್‌ನ ಹೂಡಿಕೆ ವಾತಾವರಣ ಸೂಚ್ಯಂಕ ನಮಗೆ ಆರೋಗ್ಯಕರ ವ್ಯಾಪಾರ ರಾಜ್ಯದ ಸ್ಥಾನ ನೀಡಿದೆ. ಅತಿ ಹೆಚ್ಚು ಎಫ್‌ಡಿಐ ಸ್ವೀಕರಿಸುತ್ತಿರುವ ದೇಶದ ಮೂರನೇ ರಾಜ್ಯ ನಮ್ಮದು. ನವೆಂಬರ್‌ನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ ಮತ್ತು ಹೆಚ್ಚು ಬಂಡವಾಳ ಆಕರ್ಷಿಸುವ ಆತ್ಮವಿಶ್ವಾಸ ಇದೆ. ಆರ್ಥಿಕವಾಗಿ ಕರ್ನಾಟಕ ಉತ್ತಮ ರಾಜ್ಯಗಳಲ್ಲಿ ಒಂದು.

ನೀವು ಪ್ರಧಾನಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ. ಹೀಗಾಗಿಯೇ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಸಾಧ್ಯವಾಗುತ್ತಿಲ್ಲ?

ನಾನು ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ವೈಯಕ್ತಿಕ ಬಾಂಧವ್ಯ ಹೊಂದಿದ್ದೇನೆ. 14ನೇ ಹಣಕಾಸು ಆಯೋಗ ಕೇಂದ್ರ ತೆರಿಗೆಳಲ್ಲಿ 10 ಸಾವಿರ ಕೋಟಿ ಹೆಚ್ಚು ಪಾಲು ನೀಡಿದೆ. ಆದರೆ ಇತರೆ ಕೇಂದ್ರ ಸರ್ಕಾರದ ಯೋಜನೆಗಳಿಗೆ ಅನುದಾನ ಕಡಿತಗೊಳಿಸಲಾಗಿದೆ. ಇದರ ಪರಿಣಾಮವಾಗಿ ನಾವು 1,987 ಕೋಟಿ ನಷ್ಟವಾಗಿದೆ. ಅವರು ಒಂದು ಕೈಯಿಂದ ಕೊಡುತ್ತಿದ್ದಾರೆ ಮತ್ತೊಂದು ಕೈಯಿಂದ ಕಿತ್ತಿಕೊಳ್ಳುತ್ತಿದ್ದಾರೆ.

ಈಗೀರುವ ಪರಿಸ್ಥಿತಿಯಲ್ಲೇ ನೀವು ಜಿಎಸ್‌ಟಿಯನ್ನು ಒಪ್ಪಿಕೊಳ್ಳುತ್ತೀರಾ?
ನಾವು ಜಿಎಸ್‌ಟಿಯನ್ನು ಒಪ್ಪಿಕೊಂಡಿದ್ದೇವೆ. ಆದರೆ ಇದರಿಂದ ರಾಜ್ಯ ಸರ್ಕಾರಕ್ಕೆ ಆಗುವ ನಷ್ಟಗಳಿಗೆ ಕೇಂದ್ರ ಸರ್ಕಾರವೇ ಪರಿಹಾರ ನೀಡಬೇಕು ಎಂದು ಕೇಳಿಕೊಂಡಿದ್ದೇವೆ.

ಭೂಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ನಿಮ್ಮ ನಾಯಕತ್ವದಲ್ಲಿ ಗೊಂದಲ ಇದೆ ಅನಿಸುವುದಿಲ್ಲವೇ?
ಕೇಂದ್ರ ಸರ್ಕಾರ ರೈತರಿಗೆ ಅನ್ಯಾಯ ಮಾಡುವ ಕೆಲವು ತಿದ್ದುಪಡಿಗಳನ್ನು ಮಾಡಿದೆ. 2013ರ ಕಾಯಿದೆಯಲ್ಲಿ ರೈತರಿಗೆ ಒಪ್ಪಿಗೆ ಕಡ್ಡಾಯವಾಗಿತ್ತು. ಆದರೆ ಹೊಸ ತಿದ್ದುಪಡಿಯಲ್ಲಿ ಇದು ಇಲ್ಲ. ಕೇಂದ್ರ ರೈತರ ಹಿತಾಸಕ್ತಿ ಕಾಪಾಡಬೇಕು. ಮುಖ್ಯಮಂತ್ರಿಗಳ ಸಭೆಯಲ್ಲೂ ಭೂಸ್ವಾಧೀನ ಮಸೂದೆ ಬಗ್ಗೆ ಚರ್ಚಿಸಿಲ್ಲ. ರೈತರ ಹಿತದೃಷ್ಟಿಯಿಂದ ನಾನು ಪಕ್ಷದ ನಿರ್ಧಾರವನ್ನು ಬೆಂಬಲಿಸುತ್ತೇನೆ.

ಭೂಮಿ ಮತ್ತು ಹೂಡಿಕೆ ಕೊರೆತೆಯಿಂದ ನಿಮ್ಮ ಯೋಜನೆಗಳಿಗೆ ಹಿನ್ನೆಡೆಯಾಗುತ್ತಿದೆ?
ಕರ್ನಾಟಕ 20 ಸಾವಿರ ಎಕರೆ ಭೂಮಿ ಬ್ಯಾಂಕ್ ಹೊಂದಿದೆ. ಕುಡ್ಗಿ ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸದಂತೆ ಕೆಲ ಸಮಸ್ಯೆಗಳಿವೆ. ಈಗ ಅದನ್ನು ಇತ್ಯರ್ಥಗೊಳಿಸಲಾಗಿದೆ. ಆಹಾರ ಉತ್ಪಾದನೆ ಸಾಕಷ್ಟು ಉತ್ತಮವಾಗಿದೆ. ಉತ್ಪಾದನೆಯನ್ನು ಹೆಚ್ಚಿಸಲು ನನ್ನ ಸರ್ಕಾರ ಹೊಣ ಭೂಮಿ ಪಂಪ್‌ಸೆಟ್‌ಗಾಗಿ 5000 ಕೋಟಿ ಹಾಗೂ ನೀರಾವರಿಗಾಗಿ 13 ಸಾವಿರ ಕೋಟಿ ರುಪಾಯಿ ಖರ್ಚು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com