ನೀವು ಪ್ರೀತಿಸುತ್ತಿರುವವರನ್ನು ರಕ್ಷಿಸುವ ಸರಳ ಯೋಜನೆ - ಟರ್ಮ್ ಇನ್ಷೂರೆನ್ಸ್

ನೀವು ಪ್ರೀತಿಸುತ್ತಿರುವವರನ್ನು ರಕ್ಷಿಸುವ ಸರಳ ಯೋಜನೆ -  ಟರ್ಮ್ ಇನ್ಷೂರೆನ್ಸ್
Updated on

ಟರ್ಮ್ ಇನ್ಷೂರೆನ್ಸ್ ಒಂದು ಜೀವ ವಿಮಾ ಪಾಲಿಸಿಯಾಗಿದ್ದು, ಇದು ನಿಗದಿತ ಅವಧಿಗೆ (Policy Term) ಕವರೆಜ್ ಒದಗಿಸುತ್ತದೆ. ಆ ಅವಧಿಯಲ್ಲಿ ವಿಮಾಧಾರಕ (Policyholder) ನಿಧನರಾದರೆ, ನಾಮಿನಿ ಅಥವಾ ಲಾಭಪಡೆಯುವವರಿಗೆ ಪೂರ್ವನಿಗದಿತ ಮೊತ್ತ (Sum Assured) ನೀಡಲಾಗುತ್ತದೆ.

ಇದರ ಮುಖ್ಯ ಉದ್ದೇಶ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವುದಾಗಿದೆ. ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಕವರೆಜ್ ನೀಡುವ ಸರಳ ಪರಿಹಾರವಾದ್ದರಿಂದ, ಟರ್ಮ್ ಇನ್ಷೂರೆನ್ಸ್ ಪ್ಲಾನ್ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ.

ನೀವು ಟರ್ಮ್ ಇನ್ಷೂರೆನ್ಸ್ ಪ್ಲಾನ್ ಯಾಕೆ ಖರೀದಿಸಬೇಕು?

Term Insurance ಪ್ಲಾನ್ ಖರೀದಿಸುವುದು ನಿಮ್ಮ ಜೀವನದಲ್ಲಿ ತೆಗೆದುಕೊಳ್ಳಬಹುದಾದ ಅತ್ಯಂತ ಜವಾಬ್ದಾರಿಯುತ ಮತ್ತು ಸೂಕ್ತ ಹಣಕಾಸು ನಿರ್ಧಾರಗಳಲ್ಲಿ ಒಂದಾಗಿದೆ. ಇಂದಿನ ಅನಿಶ್ಚಿತತೆಯಿಂದ ಕೂಡಿದ ಜಗತ್ತಿನಲ್ಲಿ, ಒಂದು ಸಣ್ಣ ಟರ್ಮ್ ಲೈಫ್ ಇನ್ಷೂರೆನ್ಸ್ ಹೂಡಿಕೆ ಸಹ ನಿಮ್ಮ ಕುಟುಂಬಕ್ಕೆ ಕಷ್ಟದ ಸಮಯದಲ್ಲಿ ದೊಡ್ಡ ಆರ್ಥಿಕ ಭದ್ರತೆಯನ್ನು ನೀಡಬಹುದು.

ನಿಮ್ಮ ಕುಟುಂಬಕ್ಕಾಗಿ ಟರ್ಮ್ ಇನ್ಷೂರೆನ್ಸ್ ಮೂಲಕ ಆರ್ಥಿಕ ಭದ್ರತೆ

ಟರ್ಮ್ ಇನ್ಷೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ಬಲವಾದ ಆರ್ಥಿಕ ರಕ್ಷಣಾ ಜಾಲದಂತೆ ಕೆಲಸ ಮಾಡುತ್ತದೆ. ನಿಮ್ಮ ಅನುಪಸ್ಥಿತಿಯಲ್ಲೂ ಕುಟುಂಬವು ತನ್ನ ಜೀವನ ಶೈಲಿಯನ್ನು ಮುಂದುವರಿಸಿಕೊಂಡು ಹೋಗಲು ಮತ್ತು ದೀರ್ಘಕಾಲೀನ ಕನಸುಗಳನ್ನು ಈಡೇರಿಸಿಕೊಳ್ಳಲು ಇದು ನೆರವಾಗುತ್ತದೆ.

ಮಕ್ಕಳ ಶಿಕ್ಷಣದ ಖರ್ಚು, ಕುಟುಂಬದ ಸದಸ್ಯರ ಮದುವೆ ವೆಚ್ಚ ಅಥವಾ ಮನೆಯ ದೈನಂದಿನ ಖರ್ಚುಗಳು ಯಾವುದಾದರೂ ಇರಲಿ, ಟರ್ಮ್ ಇನ್ಷೂರೆನ್ಸ್ ನೀಡುವ ಲೈಫ್ ಕವರೆಜ್ ನಿಮ್ಮ ಕುಟುಂಬಕ್ಕೆ ಸ್ಥಿರತೆ ಮತ್ತು ಭದ್ರತೆ ನೀಡುತ್ತದೆ.

ಈ ಯೋಜನೆ ನಿಮ್ಮ ಕುಟುಂಬವು ಕಷ್ಟದ ಸಮಯದಲ್ಲಿ ಅನಾವಶ್ಯಕ ಆರ್ಥಿಕ ಒತ್ತಡವನ್ನು ಎದುರಿಸದಂತೆ ನೋಡಿಕೊಳ್ಳುತ್ತದೆ. ಅದಕ್ಕೇ ಕುಟುಂಬದ ಆರ್ಥಿಕ ಭದ್ರತೆಗೆ ಟರ್ಮ್ ಇನ್ಷೂರೆನ್ಸ್ ಇಂದಿನ ಕಾಲದಲ್ಲಿ ಅತ್ಯಗತ್ಯ.

ಕಡಿಮೆ ವೆಚ್ಚದಲ್ಲಿ ಕವರೇಜ್

ಟರ್ಮ್ ಇನ್ಷೂರೆನ್ಸ್ ಪ್ಲಾನ್ ಹೆಚ್ಚಿನ ಕವರೆಜ್ ಪಡೆಯಲು ಅತ್ಯಂತ ಅನುಕೂಲಕರ ಮಾರ್ಗಗಳಲ್ಲಿ ಒಂದಾಗಿದೆ. ಎಂಡೋಮೆಂಟ್ ಅಥವಾ ಹೋಲ್ ಲೈಫ್ ಇನ್ಷೂರೆನ್ಸ್ ಹೀಗಿರುವ ಸಾಂಪ್ರದಾಯಿಕ ಜೀವನ ವಿಮಾ ಪಾಲಿಸಿಗಳೊಂದಿಗೆ ಹೋಲಿಸಿದರೆ, ಟರ್ಮ್ ಇನ್ಷೂರೆನ್ಸ್ ತುಂಬಾ ಕಡಿಮೆ ವೆಚ್ಚದಲ್ಲಿ ಅಧಿಕ ಕವರೇಜ್ ಒದಗಿಸುತ್ತದೆ.

ಇದರ ಅರ್ಥವೇನಂದರೆ, ಯುವ ವೃತ್ತಿಪರರು ಅಥವಾ ಸೀಮಿತ ಬಜೆಟ್ ಹೊಂದಿರುವವರು ಸಹ ತಮ್ಮ ಇತರ ಹಣಕಾಸು ಆದ್ಯತೆಗಳ ಜೊತೆ ಯಾವುದೇ ತಕರಾರು ಇಲ್ಲದೆ ಕುಟುಂಬಕ್ಕೆ ಬಲವಾದ ಆರ್ಥಿಕ ಭದ್ರತೆ ಒದಗಿಸಬಹುದು.

ಜೀವನದ ಆರಂಭದಲ್ಲೇ ಟರ್ಮ್ ಇನ್ಷೂರೆನ್ಸ್ ಪ್ಲಾನ್ ಖರೀದಿಸಿದರೆ, ನೀವು ಕಡಿಮೆ ಪ್ರೀಮಿಯಂ ದರವನ್ನು ಲಾಕ್ ಮಾಡಬಹುದು ಮತ್ತು ದೀರ್ಘಾವಧಿಯಲ್ಲಿ ಹೆಚ್ಚಿನ ಉಳಿತಾಯ ಸಾಧಿಸಬಹುದು. ಆದ್ದರಿಂದ ಇಂದಿನ ಕಾಲದಲ್ಲಿ ಕುಟುಂಬದ ಸುರಕ್ಷತೆ ಮತ್ತು ಭವಿಷ್ಯದ ಸ್ಥಿರತೆಗೆ ಟರ್ಮ್ ಇನ್ಷೂರೆನ್ಸ್ ಪ್ಲಾನ್ ಸ್ಮಾರ್ಟ್ ಆಯ್ಕೆಯಾಗಿದೆ.

ಟರ್ಮ್ ಇನ್ಷೂರೆನ್ಸ್‌ನ ತೆರಿಗೆ ಪ್ರಯೋಜನಗಳು

ಟರ್ಮ್ ಇನ್ಷೂರೆನ್ಸ್‌ನ ಒಂದು ಪ್ರಮುಖ ಪ್ರಯೋಜನವೆಂದರೆ ಇದರ ತೆರಿಗೆ ದಕ್ಷತೆ. ನೀವು ಪಾವತಿಸುವ ಪ್ರೀಮಿಯಂ ಮೇಲೆ ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 80C ಅಡಿಯಲ್ಲಿ ವರ್ಷಕ್ಕೆ ಗರಿಷ್ಠ ₹1,50,000 ವರೆಗೆ ತೆರಿಗೆ ಕಡಿತ ಪಡೆಯಬಹುದು. ಈ ಕ್ಲೇಮ್ ಅನ್ನು ನೀವು ವಾರ್ಷಿಕ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವಾಗ ಮಾಡಬಹುದು.

ಅದರ ಜೊತೆಗೆ, ಪಾಲಿಸಿ ಅವಧಿಯಲ್ಲಿ ದುರಂತ ಸಂಭವಿಸಿ ನಿಮ್ಮ ನಾಮಿನಿಗೆ ಸಿಗುವ ಮರಣ ಲಾಭ (Death Benefit) ಸಾಮಾನ್ಯವಾಗಿ ಸೆಕ್ಷನ್ 10(10D) ಅಡಿಯಲ್ಲಿ ಸಂಪೂರ್ಣ ತೆರಿಗೆಮುಕ್ತವಾಗಿರುತ್ತದೆ.

ಗಮನಿಸಿ: ಈ ಎಲ್ಲಾ ತೆರಿಗೆ ಪ್ರಯೋಜನಗಳು ಪ್ರಸ್ತುತ ಜಾರಿಗೆ ಇರುವ ತೆರಿಗೆ ಕಾಯ್ದೆಗಳಿಗೆ ಒಳಪಟ್ಟಿರುತ್ತವೆ. ಭವಿಷ್ಯದಲ್ಲಿ ತೆರಿಗೆ ನಿಯಮಗಳಲ್ಲಿ ಬದಲಾವಣೆಗಳು ಆಗುವ ಸಾಧ್ಯತೆಯೂ ಇದೆ.

ಕ್ರಿಟಿಕಲ್ ಇಲ್ನೆಸ್ ಕವರೆಜ್

ಇಂದಿನ ಟರ್ಮ್ ಇನ್ಷೂರೆನ್ಸ್ ಪ್ಲಾನ್‌ಗಳಲ್ಲಿ ಕೇವಲ ಆರ್ಥಿಕ ಭದ್ರತೆ ಮಾತ್ರವಲ್ಲದೆ, ಹೆಚ್ಚುವರಿ ರಕ್ಷಣೆ ಆಯ್ಕೆಗಳು (Add-ons) ಕೂಡ ಲಭ್ಯವಿವೆ. ಅವುಗಳಲ್ಲಿ ಪ್ರಮುಖವಾದದ್ದು ಕ್ರಿಟಿಕಲ್ ಇಲ್ನೆಸ್ ರೈಡರ್, ಇದು ಗಂಭೀರ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಆರ್ಥಿಕ ಸಹಾಯ ಒದಗಿಸುತ್ತದೆ.

ಕ್ಯಾನ್ಸರ್, ಹೃದಯ ರೋಗ, ಸ್ಟ್ರೋಕ್ ಅಥವಾ ಕಿಡ್ನಿ ವೈಫಲ್ಯ ಮೊದಲಾದ ಗಂಭೀರ ರೋಗಗಳನ್ನು ಪತ್ತೆಹಚ್ಚಿದಾಗ, ಈ ರೈಡರ್ ಒಮ್ಮೆಗೇ ನಿಗದಿತ ಮೊತ್ತವನ್ನು ಪಾವತಿಸುತ್ತದೆ.

ಈ ಹಣ ಚಿಕಿತ್ಸೆ ವೆಚ್ಚ, ಆಸ್ಪತ್ರೆ ಬಿಲ್‌ಗಳು ಮತ್ತು ಇತರ ವೈದ್ಯಕೀಯ ಖರ್ಚುಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಇದರ ಮೂಲಕ ಕಷ್ಟಕರ ಸಮಯದಲ್ಲಿ ನಿಮ್ಮ ಕುಟುಂಬದ ಮೇಲೆ ಅನಗತ್ಯ ಆರ್ಥಿಕ ಒತ್ತಡ ಬಾರದಂತೆ ನೋಡಿಕೊಳ್ಳಬಹುದು ಮತ್ತು ಸರಿಯಾದ ಚಿಕಿತ್ಸೆಯನ್ನು ಪಡೆಯಲು ಸಹಕಾರಿ ಆಗುತ್ತದೆ.

ಟರ್ಮ್ ಇನ್ಷೂರೆನ್ಸ್ ಯಾರಿಗೆ ಬೇಕು?

ಟರ್ಮ್ ಇನ್ಷೂರೆನ್ಸ್ ಪ್ಲಾನ್ ತನ್ನ ಕುಟುಂಬದ ಆರ್ಥಿಕ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಬಯಸುವ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ನೀವು ಉದ್ಯೋಗಿಯರಾಗಿರಲಿ, ಉದ್ಯಮಿಯಾಗಿರಲಿ ಅಥವಾ ಗೃಹಿಣಿಯಾಗಿರಲಿ, ನಿಮ್ಮ ಕುಟುಂಬದ ಆರ್ಥಿಕ ಹೊಣೆಗಾರಿಕೆಗಳು ನಿಮ್ಮ ಮೇಲಿದೆ ಎಂದರೆ, ಟರ್ಮ್ ಇನ್ಷೂರೆನ್ಸ್ ತೆಗೆದುಕೊಳ್ಳುವುದು ಅತ್ಯಂತ ಮಹತ್ವದ ನಿರ್ಧಾರವಾಗಿದೆ.

ಕುಟುಂಬದ ಏಕೈಕ ಆದಾಯಗಾರರಿಗೆ ಟರ್ಮ್ ಇನ್ಷೂರೆನ್ಸ್ ಯಾಕೆ ಅಗತ್ಯ?

ನೀವು ನಿಮ್ಮ ಕುಟುಂಬದಲ್ಲಿ ಏಕೈಕ ಆದಾಯಗಾರರಾಗಿದ್ದರೆ, ಟರ್ಮ್ ಇನ್ಷೂರೆನ್ಸ್ ಪ್ಲಾನ್ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ. ನಿಮ್ಮ ಆದಾಯವೇ ಮನೆಯ ದೈನಂದಿನ ವೆಚ್ಚ, ಮಕ್ಕಳ ಶಿಕ್ಷಣ, ಮನೆ ಖರೀದಿ ಅಥವಾ ನಿವೃತ್ತಿ ಯೋಜನೆಗಳಂತಹ ದೀರ್ಘಕಾಲೀನ ಗುರಿಗಳನ್ನು ಪೂರೈಸಲು ಆಧಾರವಾಗಿರುತ್ತದೆ.

ನಿಮ್ಮ ಅನುಪಸ್ಥಿತಿಯಲ್ಲಿ, ಟರ್ಮ್ ಲೈಫ್ ಇನ್ಷೂರೆನ್ಸ್ ಪ್ಲಾನ್ ನೀಡುವ ಹಣಕಾಸಿನ ಸಹಾಯ (Lump Sum) ನಿಮ್ಮ ಕುಟುಂಬಕ್ಕೆ ಆರ್ಥಿಕ ಜೀವದಾಯಿ (Financial Lifeline) ಆಗಿ ಕೆಲಸ ಮಾಡುತ್ತದೆ.

ಯುವ ವೃತ್ತಿಪರರಿಗೆ ಟರ್ಮ್ ಇನ್ಷೂರೆನ್ಸ್

ಯುವ ವೃತ್ತಿಪರರು ತಮ್ಮ ಕಾರಿಯರ್ ಆರಂಭದಲ್ಲೇ ಟರ್ಮ್ ಇನ್ಷೂರೆನ್ಸ್ ಪ್ಲಾನ್ ತೆಗೆದುಕೊಂಡರೆ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಕವರೆಜ್ ಪಡೆಯುವ ಅವಕಾಶ ಇರುತ್ತದೆ. ಇದರಿಂದ ಕುಟುಂಬಕ್ಕೆ ಆರಂಭದಲ್ಲೇ ಆರ್ಥಿಕ ಭದ್ರತೆ ದೊರೆಯುತ್ತದೆ ಮತ್ತು ಮುಂದಿನ ದಿನಗಳಲ್ಲಿ ದೃಢವಾದ ಹಣಕಾಸು ಅಸ್ತಿವಾರ ನಿರ್ಮಿಸಲು ಸಹಾಯವಾಗುತ್ತದೆ.

ಸಾಲ ಇರುವವರಿಗೆ ಟರ್ಮ್ ಇನ್ಷೂರೆನ್ಸ್

ಗೃಹ ಸಾಲ, ಕಾರ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಬಾಕಿ ಇರುವವರಿಗೆ ಟರ್ಮ್ ಇನ್ಷೂರೆನ್ಸ್ ಪ್ಲಾನ್ ಬಹಳ ಮುಖ್ಯ. ಏಕೆಂದರೆ ಏನಾದರು ಅಹಿತಕರ ಘಟನೆಗಳು ಸಂಭವಿಸಿದರೆ, ಇದು ಬಾಕಿ ಸಾಲಗಳನ್ನು ತೀರಿಸಲು ನೆರವಾಗಿ, ಕುಟುಂಬದ ಮೇಲೆ ಆರ್ಥಿಕ ಒತ್ತಡ ಬಾರದಂತೆ ಕಾಯುತ್ತದೆ. ವಿಶೇಷವಾಗಿ ಹೆಚ್ಚಿನ ಮೊತ್ತದ ಸಾಲಗಳಿದ್ದಲ್ಲಿ, ಟರ್ಮ್ ಇನ್ಷೂರೆನ್ಸ್ ಕುಟುಂಬದ ಆಸ್ತಿ-ಪಾಸ್ತಿಗಳನ್ನು ರಕ್ಷಿಸಿ, ಪಾವತಿ ಆಗದ ಕಾರಣಕ್ಕೆ ಆರ್ಥಿಕ ಸಂಸ್ಥೆಗಳು ಆಸ್ತಿಯನ್ನು ವಶಪಡಿಸಿಕೊಳ್ಳುವುದನ್ನು ತಡೆಯಲು ಸಹಾಯಕವಾಗುತ್ತದೆ.

ಉತ್ತಮ ಟರ್ಮ್ ಇನ್ಷೂರೆನ್ಸ್ ಪ್ಲಾನ್ ಹೇಗೆ ಆಯ್ಕೆ ಮಾಡುವುದು?

ಸರಿಯಾದ ಟರ್ಮ್ ಇನ್ಷೂರೆನ್ಸ್ ಪ್ಲಾನ್ ಆಯ್ಕೆ ಮಾಡಲು ನಿಮ್ಮ ಕುಟುಂಬದ ಅಗತ್ಯಗಳು ಮತ್ತು ಹಣಕಾಸು ಗುರಿಗಳನ್ನು ಗಮನದಲ್ಲಿಡಬೇಕು.

●      ಕವರೆಜ್ ಅಂದಾಜು ಮಾಡಿ: ನಿಮ್ಮ ವಾರ್ಷಿಕ ಆದಾಯದ ಕನಿಷ್ಠ 15–20 ಪಟ್ಟು ಕವರೆಜ್ ಆಯ್ಕೆಮಾಡಿ. ನಿಮ್ಮ ಆದಾಯ, ಜೀವನಶೈಲಿ ಮತ್ತು ಭವಿಷ್ಯದ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕವರೆಜ್ ತೀರ್ಮಾನಿಸಲು Term Insurance Calculator ಬಳಸಬಹುದು.

●      ಪಾಲಿಸಿ ಅವಧಿ: ನಿವೃತ್ತಿ ಅಥವಾ ಆರ್ಥಿಕ ಹೊಣೆಗಾರಿಕೆಗಳವರೆಗೂ ಯೋಜನೆ ಇರಲಿ.

●      ಪ್ರೀಮಿಯಂ ಹೋಲಿಕೆ: ವಿವಿಧ ಕಂಪನಿಗಳ ಪ್ರೀಮಿಯಂ ಮತ್ತು ಪ್ರಯೋಜನಗಳನ್ನು ಹೋಲಿಸಿ.

●      ರೈಡರ್‌ಗಳನ್ನು ಸೇರಿಸಿ: ಕ್ರಿಟಿಕಲ್ ಇಲ್ನೆಸ್, ಅಪಘಾತ ಮರಣ ಲಾಭ ಅಥವಾ ಅಂಗವೈಕಲ್ಯ ಆದಾಯ ಲಾಭ (Disability Income Benefit).

●      ಕ್ಲೇಮ್ ಸೆಟಲ್‌ಮೆಂಟ್ ರೇಶಿಯೋ: ಹೆಚ್ಚಿನ CSR ಹೊಂದಿರುವ ಕಂಪನಿಯನ್ನು ಆರಿಸಿ.

●      ಪಾವತಿ ಆಯ್ಕೆಗಳು: ಒಮ್ಮೆಗೇ, ಮಾಸಿಕ, ವಾರ್ಷಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಪಾವತಿ ವಿಧಾನವನ್ನು ಆಯ್ಕೆಮಾಡಿ.

●      ಪಾಲಿಸಿ ಡಾಕ್ಯುಮೆಂಟ್ ಓದಿ: ಯಾವುದು ಕವರ್ ಆಗಿದೆ, ಯಾವುದು ಇಲ್ಲ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ನೀವು ನಿಮ್ಮ ಕುಟುಂಬಕ್ಕೆ ಸಂಪೂರ್ಣ ಆರ್ಥಿಕ ಭದ್ರತೆ ಮತ್ತು ಮನಶ್ಶಾಂತಿ ನೀಡುವ ಟರ್ಮ್ ಇನ್ಷೂರೆನ್ಸ್ ಪ್ಲಾನ್ ಅನ್ನು ಆಯ್ಕೆ ಮಾಡಬಹುದು.

ಸಾರಾಂಶ

ಟರ್ಮ್ ಇನ್ಷೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವ ಅತ್ಯಂತ ಸರಳ ಮತ್ತು ವಿಶ್ವಾಸಾರ್ಹ ಮಾರ್ಗವಾಗಿದೆ. ಕಡಿಮೆ ಪ್ರೀಮಿಯಂ, ಹೆಚ್ಚಿನ ಕವರೆಜ್ ಮತ್ತು ತೆರಿಗೆ ಲಾಭಗಳೊಂದಿಗೆ, ಇದು ಪ್ರತಿಯೊಬ್ಬರಿಗೂ ಸೂಕ್ತ ಆಯ್ಕೆ. ನಿಮ್ಮ ಅನುಪಸ್ಥಿತಿಯಲ್ಲೂ ಕುಟುಂಬವು ಸ್ಥಿರವಾಗಿ ಬದುಕಲು ಸಹಾಯ ಮಾಡುವುದರಿಂದ, ಇಂದಿನ ಕಾಲದಲ್ಲಿ ಟರ್ಮ್ ಇನ್ಷೂರೆನ್ಸ್ ತೆಗೆದುಕೊಳ್ಳುವುದು ಅನಿವಾರ್ಯ.

Disclaimer: This content is part of a marketing initiative.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com