ಕರ್ನಾಟಕದಲ್ಲಿ ಮುದುಡಿದ ಕಮಲ, ದಕ್ಷಿಣ ಭಾರತ ಬಿಜೆಪಿ ಮುಕ್ತ!

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಮಲ ಪಕ್ಷ ಸೋತಿದೆ. ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಇದ್ದ ಬಿಜೆಪಿ ಆಡಳಿತ ಇಂದಿಗೆ ಕೈತಪ್ಪಿ ಹೋಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ/ಬೆಂಗಳೂರು: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಮಲ ಪಕ್ಷ ಸೋತಿದೆ. ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಇದ್ದ ಬಿಜೆಪಿ ಆಡಳಿತ ಇಂದಿಗೆ ಕೈತಪ್ಪಿ ಹೋಗಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚಿಸುವ ಏಕೈಕ ರಾಜ್ಯ ಕರ್ನಾಟಕವಾಗಿತ್ತು. ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಬಿಜೆಪಿಯನ್ನು ಒಳಗೊಂಡ ಮೈತ್ರಿಕೂಟ ಅಧಿಕಾರದಲ್ಲಿದೆ. ಸಾಮಾನ್ಯವಾಗಿ ಬಿಜೆಪಿ ಪ್ರಬಲ ಚುನಾವಣಾ ತಂತ್ರ, ಪಕ್ಷದ ಶ್ರೀಮಂತ ಖಜಾನೆ ಮತ್ತು ಪ್ರಧಾನ ಮಂತ್ರಿ ಮೋದಿಯವರ ಸಮರ್ಪಿತ ಅನುಯಾಯಿಗಳಿಂದ ಬೆಂಬಲಿತ ಪಕ್ಷವಾಗಿದ್ದರೂ ಕರ್ನಾಟಕದಲ್ಲಿ ಈ ಬಾರಿ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ.

ಈ ಹಿಂದೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದುದರಿಂದ ಕರ್ನಾಟಕವು ಅಸಾಧಾರಣ ಅಸ್ತಿತ್ವವನ್ನು ಹೊಂದಿರುವ ಒಂದು ರಾಜ್ಯವಾಗಿತ್ತು. ಇದ್ದ ಒಂದು ಭರವಸೆ ಈಗ ಕಡಿದುಹೋಗಿದೆ. ಇಂದು ಬೆಳಗ್ಗೆಯಿಂದಲೇ ಮತ ಎಣಿಕೆ ಸಾಗುತ್ತಿರುವಾಗ ಕಾಂಗ್ರೆಸ್ ಪಕ್ಷದ ಪರವಾಗಿರುವ ಟ್ರೆಂಡ್‌ಗಳಿಂದ ಉತ್ತೇಜಿತರಾದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್ ಕೆಲಸ ಮಾಡಲಿಲ್ಲ. ಕಾಂಗ್ರೆಸ್ ಪಕ್ಷ 120ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಹಿಂದೆಯೇ ಹೇಳಿದ್ದೆ. ನಮ್ಮ ಪಕ್ಷ ಈ ಬಾರಿ ಸ್ವಂತ ಬಲದಲ್ಲಿ ಸರ್ಕಾರ ರಚಿಸುತ್ತದೆ ಎಂದು ಹೇಳಿದ್ದರು. 

ದೇವರ ನಾಡು ಕೇರಳ ಅಸೆಂಬ್ಲಿಯಲ್ಲಿ, ಬಿಜೆಪಿಗೆ ಪ್ರಸ್ತುತ ಯಾವುದೇ ಶಾಸಕರಿಲ್ಲ. 2016 ರಲ್ಲಿ, ರಾಜ್ಯದ ಏಕೈಕ ಶಾಸಕರಾದ ಓ ರಾಜಗೋಪಾಲ್ ಅವರು ತಿರುವನಂತಪುರಂನ ನೆಮೊಮ್‌ನಿಂದ ಗೆದ್ದಿದ್ದರು. ಆದರೆ 2021ರ ಚುನಾವಣೆಯಲ್ಲಿ ಬಿಜೆಪಿಯ ಯಾವ ಅಭ್ಯರ್ಥಿಯೂ ಗೆಲ್ಲಲು ಸಾಧ್ಯವಾಗಲಿಲ್ಲ.

ತಮಿಳುನಾಡು ಅಸೆಂಬ್ಲಿಯಲ್ಲಿ, ಎರಡು ದಶಕಗಳ ನಂತರ ಯಾವುದೇ ಸ್ಥಾನವಿಲ್ಲದೆ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡು 2021 ರಲ್ಲಿ ನಾಲ್ಕು ಬಿಜೆಪಿ ಶಾಸಕರು ಜಯಗಳಿಸಿದ್ದರು. ತಮಿಳುನಾಡಿನಲ್ಲಿ ಬಿಜೆಪಿ ತನ್ನ ಗಮನವನ್ನು ಹೆಚ್ಚಿಸಿದೆಯಾದರೂ, ಅದು ಚುನಾವಣಾ ಲಾಭಾಂಶದ ಯಾವುದೇ ತಕ್ಷಣದ ಸೂಚನೆಯನ್ನು ತೋರಿಸುತ್ತಿಲ್ಲ.

ತೆಲಂಗಾಣದಲ್ಲಿ, 2014 ರಲ್ಲಿ ಬಿಜೆಪಿ 5 ಸ್ಥಾನಗಳನ್ನು ಗೆದ್ದಿದ್ದರೂ, 2018 ರ ಚುನಾವಣೆಯಲ್ಲಿ ಸಂಖ್ಯೆ ಕೇವಲ 1 ಕ್ಕೆ ಇಳಿಯಿತು. ಗೋಶಾಮಹಲ್ ಕ್ಷೇತ್ರದಿಂದ ಗೆದ್ದ ಬಿಜೆಪಿ ಶಾಸಕ ರಾಜಾ ಸಿಂಗ್ ಕೇಸರಿ ಪಕ್ಷದ ಏಕೈಕ ಶಾಸಕರಾಗಿದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ 17 ಸಂಸದರ ಪೈಕಿ 4 ಸ್ಥಾನಗಳನ್ನು ಗಳಿಸುವ ಮೂಲಕ ತಕ್ಕಮಟ್ಟಿಗೆ ಉತ್ತಮ ಪ್ರದರ್ಶನ ನೀಡಿದೆ. ಕೇಸರಿ ಪಕ್ಷವು ಒಟ್ಟು ಮತಗಳಲ್ಲಿ ಸುಮಾರು 19.45% ಗಳಿಸಿತು. ಇನ್ನು ಕೆಲವೇ ತಿಂಗಳುಗಳಲ್ಲಿ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ. ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯ ಉಸ್ತುವಾರಿಯಾಗಿ ನೇಮಿಸಿರುವ ಕಾಂಗ್ರೆಸ್ ತನ್ನ ಆಟಕ್ಕೆ ಮುಂದಾಗಿದೆ. ಕರ್ನಾಟಕದ ಗೆಲುವು ತೆಲಂಗಾಣದಲ್ಲಿ ಪಕ್ಷಕ್ಕೆ ಬಲ ತುಂಬಿದೆ.

ದುಬ್ಬಾಕ ಮತ್ತು ಹುಜೂರಾಬಾದ್ ಕ್ಷೇತ್ರಗಳಲ್ಲಿ ನಡೆದ ಎರಡು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. 2014 ರಲ್ಲಿ ವಿಭಜನೆಯಾದ ಆಂಧ್ರಪ್ರದೇಶದಲ್ಲಿ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು ಆದರೆ 2019 ರ ಚುನಾವಣೆಯಲ್ಲಿ ಕೇಸರಿ ಪಕ್ಷವು ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಜಗನ್ ಮೋಹನ್ ರೆಡ್ಡಿಯನ್ನು 'ಹಿಂದೂ-ವಿರೋಧಿ' ಮುಖ್ಯಮಂತ್ರಿ ಎಂದು ಬಿಂಬಿಸುವ ಪ್ರಯತ್ನದಲ್ಲಿ ಪಕ್ಷವು ಹಲವಾರು ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತಿದೆ. ದೇವಾಲಯದ ಧ್ವಂಸ ಮತ್ತು ವಿಗ್ರಹ ಧ್ವಂಸ ಘಟನೆಗಳನ್ನು "ರಾಜ್ಯ ಸರ್ಕಾರ ಪ್ರಾಯೋಜಿತ" ಎಂದು ಎತ್ತಿ ತೋರಿಸುತ್ತದೆ. ಈ ಪ್ರಯತ್ನಗಳು ಎಷ್ಟರ ಮಟ್ಟಿಗೆ ಚುನಾವಣೆಯಲ್ಲಿ ಬಿಜೆಪಿಗೆ ವರದಾನವಾಗುತ್ತದೆ ಎಂದು ನೋಡಬೇಕಿದೆ. 

ಸದ್ಯಕ್ಕೆ ಕರ್ನಾಟಕದಲ್ಲಿ ಬಿಜೆಪಿ ಸೋತಿದ್ದು, ಫಲಿತಾಂಶ ನೆರೆಯ ದಕ್ಷಿಣ ಭಾರತದ ರಾಜ್ಯಗಳ ಮೇಲೂ ಬೀರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com