ವಿಮಾನನಿಲ್ದಾಣ ರಸ್ತೆ ಟೋಲ್ ಶುಲ್ಕ ಹೆಚ್ಚಳ

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- ಹೆಬ್ಬಾಳ ರಸ್ತೆ ಟೋಲ್ ದರವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- ಹೆಬ್ಬಾಳ ರಸ್ತೆ ಟೋಲ್ ದರವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಪ್ರತಿ ಟ್ರಿಪ್​ಗೆ 10 ರೂಪಾಯಿ ಹೆಚ್ಚಿಸಿರುವ ನವಯುಗ ಟೋಲ್ ಕಂಪೆನಿ ವಾಹನ ಚಾಲಕರಿಗೆ ಮತ್ತೆ ಶಾಕ್ ನೀಡಿದೆ.

ಏಪ್ರಿಲ್ ಒಂದರಿಂದ ಪರಿಷ್ಕೃತ ಟೋಲ್ ದರ ವಸೂಲಿ ಮಾಡಲಾಗುತ್ತದೆ. ಕಾರು, ಜೀಪು, ವ್ಯಾನುಗಳಿಗೆ ವಿನಾಯಿತಿ ನೀಡಲಾಗಿದೆ. ಟೋಲ್ ದರ ಹೆಚ್ಚಿಸಿದ ಸಂಗತಿ ತಿಳಿದು ಜನರು ಹೋರಾಟಕ್ಕೆ ಇಳಿಯುವ ಸಾಧ್ಯತೆ ಇದೆ. ಹೀಗಾಗಿ ಟೋಲ್​ಗೆ ಪೊಲೀಸರ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.

ಹೆಬ್ಬಾಳದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಸಿಗ್ನಲ್ ಫ್ರೀ ರಸ್ತೆ ಬಳಸುವ ಬೃಹತ್ ವಾಹನಗಳಿಗೆ ಪ್ರತಿ ಸಂಚಾರಕ್ಕೆ 20 ರೂ. ಹೆಚ್ಚಿಸಲಾಗಿದೆ. ಗೂಡ್ಸ್ ವಾಹನ, ಮಿನಿ ಬಸ್, ಟೆಂಪೊ ಟ್ರಾವೆಲರ್​ಗಳ ಪ್ರತಿ ಸಂಚಾರಕ್ಕೆ ಇದ್ದ 175 ರೂ. ಶುಲ್ಕವನ್ನು, ಇದೀಗ 185 ರೂ.ಗೆ ಹೆಚ್ಚಿಸಲಾಗಿದೆ. ಬಸ್, ಲಾರಿ ಮತ್ತಿತರ ಬೃಹತ್ ವಾಹನಗಳಿಗೆ ವಿಧಿಸುತ್ತಿದ್ದ 360 ರೂ. ಶುಲ್ಕವನ್ನು 380 ರೂ.ಗೆ ಏರಿಸಲಾಗಿದೆ.

ಈ ಹಿಂದೆ ಟೋಲ್ ದರ ಹೆಚ್ಚಿಸಿದ್ದರಿಂದ ಆಕ್ರೋಶಗೊಂಡ ಸಾರ್ವಜನಿಕರು ಟೋಲ್​ಗೆ ಕಲ್ಲು ತೂರಿ ದ್ವಂಸಗೊಳಿಸಿದ್ದರು. ಕರವೇ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಟೋಲ್ ಹೆಚ್ಚಳ ವಿರುದ್ಧ ಧ್ವನಿ ಎತ್ತಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com