ವಿಚಾರಣೆಗೆ ಕರೆತರುವಾಗ ಶಂಕಿತ ಉಗ್ರನಿಗೆ ಕೈಕೋಳ ತೊಡಿಸದಿರಲು ಕೋರ್ಟ್ ಸೂಚನೆ

ವಿಚಾರಣೆಗೆ ಕರೆತರುವಾಗ ಶಂಕಿತ ಉಗ್ರರನ ಕೈಗೆ ಕೊಳ ಹಾಕದಂತೆ ಬಂಧಿಖಾನೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಶಂಕಿತ ಉಗ್ರನಿಗೆ ಕೈಕೋಳ ತೊಡಿಸದಿರಲು ಕೋರ್ಟ್ ಸೂಚನೆ
ಶಂಕಿತ ಉಗ್ರನಿಗೆ ಕೈಕೋಳ ತೊಡಿಸದಿರಲು ಕೋರ್ಟ್ ಸೂಚನೆ

ಬೆಂಗಳೂರು: ಲಷ್ಕರ್-ಎ- ತೊಯ್ಬಾದ ಶಂಕಿತ ಉಗ್ರ ಅಸಾದ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿರುವ ಎನ್ಐಎ ವಿಶೇಷ ನ್ಯಾಯಾಲಯ, ವಿಚಾರಣೆಗೆ ಕರೆತರುವಾಗ ಶಂಕಿತ ಉಗ್ರರನ ಕೈಗೆ ಕೊಳ ಹಾಕದಂತೆ ಬಂಧಿಖಾನೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಬೆಂಗಳೂರು, ಹುಬ್ಬಳ್ಳಿಗಳಲ್ಲಿರುವ ಪ್ರಮುಖ ಧಾಮಿಕ ಮುಖಂಡರು, ಪತ್ರಕರ್ತರು ಹಾಗೂ ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದ ಪೈಕಿ ಬಂಧನಕ್ಕೊಳಗಾಗಿರುವ ಲಷ್ಕರ್-ಎ- ತೊಯ್ಬಾದ ಶಂಕಿತ ಕಾರ್ಯಕರ್ತ ಅಸಾದ್ ಖಾನ್, ಎನ್ಐಎ ಅಧಿಕಾರಿಗಳ ತನಿಖೆಗೆ ಸಹಕರಿಸುತ್ತಿದ್ದೇನೆ ಆದ್ದರಿಂದ ವಿಚಾರಣೆಗೆ ಕರೆತರುವಾಗ ತನಗೆ ಕೈಕೋಳ ಹಾಕದಂತೆ ಅಧಿಕಾರಿಗಳಿಗೆ ಸೂಚನೆ ನೀಡಬೆಕೆಂದು ಮನವಿ ಮಾಡಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯ ಬಂಧನಕ್ಕೊಳಗಾದಾಗಿನಿಂದ ಆತ ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಂಡಿಲ್ಲ. ಅಲ್ಲದೇ ತಪ್ಪಿಸಿಕೊಳ್ಳುವ ಯತ್ನ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆತರುವಾಗ ಕೈಕೋಳ ತೊಡಿಸದಂತೆ ಅಧಿಕಾರಿಗಳಿಗೆ ಎನ್ಐಎ ನ್ಯಾಯಾಲಯ ಸೂಚನೆ ನೀಡಿದೆ. ಅಸಾದ್ ಖಾನ್ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ಅಭಿಯೋಜಕರು, ಕೈಕೋಳ ಹಾಕದೇ ಇದ್ದರೆ ಬಂಧಿತ ಆರೋಪಿ ತಪಿಸಿಕೊಳ್ಳುವ ಸಾಧ್ಯತೆ ಇದೆ ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕೆಂದು ವಾದ ಮಂಡಿಸಿದ್ದರು. ಆದರೆ ಸರ್ಕಾರಿ ಅಭಿಯೋಜನರ ವಾದಕ್ಕೆ ಪೂರಕವಾದ ಘಟನೆಗಳು ಈ ಹಿಂದೆ ನಡೆದಿಲ್ಲವಾದ್ದರಿಂದ ಅಸಾದ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com