ಮೂರು ವರ್ಷಗಳಲ್ಲಿ ಕೊಂಕಣ ರೈಲು ಮಾರ್ಗ ಸಂಪೂರ್ಣ ವಿದ್ಯುತೀಕರಣ

ಮೂರು ವರ್ಷದೊಳಗೆ ಕೊಂಕಣ ರೈಲು ಮಾರ್ಗವನ್ನು ಸಂಪೂರ್ಣ ವಿದ್ಯುತೀಕರಣಗೊಳಿಸಲಾಗುವುದು ಎಂದು ಕೊಂಕಣ ರೈಲ್ವೆ ಕಾರ್ಪೊರೇಶನ್ ನಿಗಮದ ಅಧ್ಯಕ್ಷ ಸಂಜಯ್ ಗುಪ್ತಾ ತಿಳಿಸಿದ್ದಾರೆ.
ಮೂರು ವರ್ಷಗಳಲ್ಲಿ ಕೊಂಕಣ ರೈಲು ಮಾರ್ಗ ಸಂಪೂರ್ಣ ವಿದ್ಯುತೀಕರಣ
ಮೂರು ವರ್ಷಗಳಲ್ಲಿ ಕೊಂಕಣ ರೈಲು ಮಾರ್ಗ ಸಂಪೂರ್ಣ ವಿದ್ಯುತೀಕರಣ

ಮಂಗಳೂರು: ಮೂರು ವರ್ಷದೊಳಗೆ ಕೊಂಕಣ ರೈಲು ಮಾರ್ಗವನ್ನು ಸಂಪೂರ್ಣ ವಿದ್ಯುತೀಕರಣಗೊಳಿಸಲಾಗುವುದು ಎಂದು ಕೊಂಕಣ ರೈಲ್ವೆ ಕಾರ್ಪೊರೇಶನ್ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಗುಪ್ತಾ ತಿಳಿಸಿದ್ದಾರೆ.
ಸುಮಾರು 710 ಕೋಟಿ ರೂ ವೆಚ್ಚದಲ್ಲಿ ಕೊಂಕಣ ರೈಲು ಮಾರ್ಗವನ್ನು ಸಂಪೂರ್ಣವಾಗಿ ವಿದ್ಯುತೀಕರಿಸುವುದಕ್ಕೆ ಹಾಗೂ ಜೋಡಿ ಹಳಿ ಮಾರ್ಗವನ್ನಾಗಿ ಮಾರ್ಪಾಡು ಮಾಡುವ ಯೋಜನೆಯನ್ನು ನವೆಂಬರ್ ನಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಉದ್ಘಾಟಿಸಿದ್ದಾರೆ. ಜೋಡಿ ಹಳಿ ಮಾರ್ಗದ ಮೊದಲ ಹಂತದ ಕಾಮಗಾರಿ ಮೇ ನಿಂದ ಪ್ರಾರಂಭವಾಗಲಿದ್ದು 295 ಕೋಟಿ ರೂ ವೆಚ್ಚವಾಗಲಿದೆ ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.
ಕೊಂಕಣ ರೈಲು ಮಾರ್ಗವನ್ನು ಸಂಪೂರ್ಣ ಜೋಡಿ ಹಳಿ ಮಾರ್ಗವನ್ನಾಗಿಸುವ ಬಗ್ಗೆ  ಮುಂದಿನ ಸಭೆಯಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಂಜಯ್ ಗುಪ್ತಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com